Home News Renuka Swamy Murder: ದರ್ಶನ್ ಬಚಾವ್ ಮಾಡಲು ಸಚಿವರ ಭಾರೀ ಪ್ರಯತ್ನ- ಪೊಲೀಸರಿಗೆ 128 ಸಲ...

Renuka Swamy Murder: ದರ್ಶನ್ ಬಚಾವ್ ಮಾಡಲು ಸಚಿವರ ಭಾರೀ ಪ್ರಯತ್ನ- ಪೊಲೀಸರಿಗೆ 128 ಸಲ ಕರೆ !!

Renuka Swamy Murder

Hindu neighbor gifts plot of land

Hindu neighbour gifts land to Muslim journalist

Renuka Swamy Murder ಪ್ರಕರಣ ಆರೋಪದಲ್ಲಿ ಬಂಧನವಾಗಿರುವ ದರ್ಶನ್(Darshan) ನನ್ನು ಬಚಾವ್ ಮಾಡಲು ಕಾಂಗ್ರೆಸ್ ಪ್ರಭಾವಿ ಸಚಿವರೊಬ್ಬರು(Karnataka Minister) ಭಾರೀ ಪ್ರಯತ್ನ ನಡೆಸುತ್ತಿದ್ದು ತನಿಖಾ ಪೊಲೀಸ್ ಅಧಿಕಾರಿಗೆ 128 ಬಾರಿ ಕರೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಾಹನಕ್ಕೆ ಪೆಟ್ರೋಲ್‌ ಹಾಕಿದ ಬಳಿಕ Payment ಕೇಳಿದ್ದಕ್ಕೆ ಪ್ಯಾಂಟ್‌ ಬಿಚ್ಚಿ ತೋರಿಸಿದ ಯುವತಿ

ಹೌದು, ಕೊಲೆ ಕೇಸಿನಲ್ಲಿ ಬಂಧನವಾಗಿರುವ ದರ್ಶನ್ ನನ್ನು ಬಿಡುಗೆ ಮಾಡಲು ಈಗಲೇ ಹಿರಿಯ ನಟರು, ರಾಜಕಾರಣಿಗಳು(Politicians)ಭಾರೀ ಎಫರ್ಟ್ ಹಾಕುತ್ತಿದ್ದಾರೆ. ಆದರೆ ಈ ಪ್ರಕರಣವನ್ನು ಮುಚ್ಚಿಹಾಕಲು ಸ್ವತಃ ರಾಜ್ಯ ಸರ್ಕಾರದ ಪ್ರಭಾವಿ ಸಚಿವರೊಬ್ಬರು ಭಾರೀ ಕಸರತ್ತು ನಡೆಸುತ್ತಿದ್ದಾರೆ. ತನಿಖಾಧಿಕಾರಿಗಳಿಗೆ ಫೋನ್ ಮೇಲೆ ಫೋನ್ ಮಾಡಿ ಒತ್ತಡ ಹೇರುತ್ತಿದ್ದಾರೆ.

ಅಂದಹಾಗೆ ತನಿಖಾ ಪೊಲೀಸ್ ಅಧಿಕಾರಿಗೆ 128 ಬಾರಿ ಕರೆ ಮಾಡಿದರೂ ಸ್ವೀಕರಿಸದ ಹಿನ್ನೆಲೆಯಲ್ಲಿ ಇದೇ ಕೇಸಿನ ಮತ್ತೊಬ್ಬ ಅಧಿಕಾರಿಗೆ ಕರೆ ಮಾಡಿ ಮಾತನಾಡಿದ್ದಾರೆ. ನಿನ್ನೆವರೆಗೂ ದರ್ಶನ್ ಬಚಾವ್​ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡಿದ ರಾಜಕಾರಣಿ, ಈಗ ದರ್ಶನ್ ಭೇಟಿಯಾಗಲು ಅವಕಾಶ ಕೊಡಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬಹುಶಃ ಆ ಸಚಿವರು ಯಾರೆಂದು ಪೋಲೀಸರು ಬಹಿರಂಗಪಡಿಸಿಲ್ಲ. ಒಂದು ವೇಳೆ ಅದು ಯಾರೆಂದು ಗೊತ್ತಾದರೆ ಸಾಕು ಮಾಧ್ಯಮಗಳು ಆ ಸಚಿವರ ಗ್ರಹಚಾರ ಬಿಡಿಸಿಯಾರು. ನಿಜಕ್ಕೂ ಮಾಧ್ಯಮಗಳಿಂದ ಇಂತಹ ಕೆಲಸ ಆಗಬೇಕು. ಕಳೆದ ಎರಡು ದಿನಗಳಿಂದ ಯಾರು, ಏನು, ಅಭಿಮಾನಿಗಳು ಎಂಬುದನ್ನು ಯಾವುದನ್ನೂ ನೋಡದೆ, ಲೆಕ್ಕಕ್ಕಿಡದೆ ಎಲ್ಲಾ ಮೀಡಿಯಾಗಳು ನ್ಯಾಯಕ್ಕಾಗಿ ಹೋರಾಡುತ್ತಿವೆ. ಇದು ನ್ಯಾಯ ಸಿಗುವವರೆಗೂ ಮುಂದುವರೆಯಲಿ. ಆದಷ್ಟು ಬೇಗ ಬಚಾವ್ ಮಾಡಲು ಯತ್ನಿಸಿದ ಆ ಸಚಿವ ಯಾರೆಂಬುದು ಮಾಧ್ಯಮಗಳಿಗೆ ಗೊತ್ತಾಗಲಿ.

NEET 2024 Re Exam: ದೇಶವ್ಯಾಪಿ ಮರುಪರೀಕ್ಷೆ ನಡೆಸಿ, ತಪ್ಪಿದರೆ 2024 ಬ್ಯಾಚಿನ ವೈದ್ಯರನ್ನು ಜನ ‘ಕಳ್ಳ’ ರೆಂದು ಕರೆದಾರು – ಪ್ರತಿಭಾವಂತ ವಿದ್ಯಾರ್ಥಿಗಳ ಆಗ್ರಹ !