KSRTC: ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಟಿಕೆಟ್ ಗೆ ಹಣ ಕೊಡಬೇಕಿಲ್ಲ: ಹೀಗೆ ಮಾಡಿದ್ರೆ ಸಾಕು!

KSRTC: ಕೆಎಸ್‌ಆರ್‌ಟಿಸಿಯು (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಟಿಕೆಟ್ ಕೊಡುವ ತನ್ನ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡುತ್ತಿದೆ. ಹೌದು, ಇನ್ಮುಂದೆ ಹೊಸ ಪಾವತಿ ವ್ಯವಸ್ಥೆ ಜಾರಿಯಾಗಲಿದ್ದು, ಪ್ರಯಾಣಿಕರಿಗೆ ತುಂಬಾ ಸಹಾಯಕವಾಗಿದೆ. ಪ್ರಯಾಣಿಕರು ಟಿಕೆಟ್ ಪಡೆಯಲು ಹಣ ಕೊಡಬೇಕಾಗಿಲ್ಲ. ಇದರ ಬದಲಾಗಿ ಪ್ರಯಾಣಿಕರಿಗೆ UPI ಮೂಲಕ ಪಾವತಿ ಮಾಡಿ ಟಿಕೆಟ್ ಖರೀದಿ ಮಾಡುವ ಅವಕಾಶ ನೀಡಲು ಮುಂದಾಗಿದೆ.

Bengaluru: ರೇಣುಕಾ ಸ್ವಾಮಿ ಹತ್ಯೆ ಪ್ರಕರಣ- ಕನ್ನಡದ ಮತ್ತೊಬ್ಬ ನಟ ಅರೆಸ್ಟ್ !!

ಸದ್ಯ ಜೂನ್ 25 ರಿಂದ KSRTC ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು UPI ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಪಡೆದುಕೊಳ್ಳಬಹುದು.ಮುಖ್ಯವಾಗಿ KSRTC ಪ್ರಯಾಣಿಕರು ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಸಬಹುದು ಮತ್ತು ನಗದು ಹಣ ಅಥವಾ ಚಿಲ್ಲರೆ ಇಟ್ಟುಕೊಳ್ಳುವ ಬಗ್ಗೆ ಚಿಂತಿಸಬೇಕಾಗಿಲ್ಲ.

KSRTC ಜೂನ್ 25 ರಿಂದ ನಾಲ್ಕು ಡಿಪೋಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ಇಟಿಎಂ) ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಿದೆ. ಈಗಾಗಲೇ ಕಂಡಕ್ಟರ್‌ಗಳಿಗೆ ತರಬೇತಿ ಸಹ ನೀಡಲಿದೆ. ಇನ್ನು ಕೆಲವೇ ವಾರಗಳಲ್ಲಿ ಎಲ್ಲಾ ಬಸ್‌ಗಳಲ್ಲಿ ಈ ವ್ಯವಸ್ಥೆ ಅಧಿಕೃತವಾಗಿ ಜಾರಿಗೆ ಬರಲಿದ್ದು, ಇದಕ್ಕಾಗಿ ಸಾರಿಗೆ ನಿಗಮವು ಪ್ರತಿ ಸಾಧನಕ್ಕೆ ತಿಂಗಳಿಗೆ 645 ರೂಪಾಯಿ ಬಾಡಿಗೆಯಂತೆ 10,245 ಇಟಿಎಂಗಳನ್ನು ತೆಗೆದುಕೊಂಡಿದೆ.

ಈ ನಿಯಮ ಪ್ರಕಾರ, ಮೊದಲು KSRTC ಕಂಡಕ್ಟರ್‌ಗಳು ಆಗಮನ ಮತ್ತು ನಿರ್ಗಮನ ನಿಲ್ದಾಣಗಳನ್ನು ಆಯ್ಕೆ ಮಾಡಬೇಕು. ಬಳಿಕ ಪ್ರಯಾಣಿಕರ ಸಂಖ್ಯೆ ಮತ್ತು ಪಾವತಿ ವಿಧಾನವನ್ನು ಆಯ್ಕೆ ಮಾಡಬೇಕು. ನಂತರ ಟಿಕೆಟ್ ದರ ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ. ಪ್ರಯಾಣಿಕರು ಹಣ ಪಾವತಿಸಿದ ನಂತರ ಟಿಕೆಟ್ ಪಡೆಯಬಹುದು. ಅಲ್ಲದೆ ಯಂತ್ರಗಳನ್ನು ಲಾಕ್ ಮಾಡಬಹುದು ಮತ್ತು ಅವುಗಳನ್ನು ಕದ್ದರೆ, ಅವುಗಳನ್ನು ಸ್ಮಾರ್ಟ್‌ಫೋನ್‌ನಂತೆ ಟ್ರ್ಯಾಕ್ ಮಾಡಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು UPI ಮೂಲಕ ಟಿಕೆಟ್‌ ಖರೀದಿಯಿಂದ ಇ-ಪಾಸ್‌ ಹೊಂದಿರುವ KSRTC ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಹ್ಯಾಂಡ್‌ಹೆಲ್ಡ್ ಇಟಿಎಂಯಲ್ಲಿ RFID ಸಾಧನವಿರಲಿದ್ದು, ಇ-ಪಾಸ್‌ಗಳಂತಹ ಸ್ಮಾರ್ಟ್ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಲು ಕ್ಯಾಮರಾ ಕೂಡ ಇದರಲ್ಲಿ ಇರುತ್ತದೆ.

Pavithra Gowda: ಪವಿತ್ರಾ ಗೌಡ ಮಾಜಿ ಪತಿ ಸಂಜಯ್‌ ಸಿಂಗ್‌ ರಿಂದ ಶಾಕಿಂಗ್‌ ಹೇಳಿಕೆ? ಕೊಲೆ ಕೃತ್ಯದ ಕುರಿತು ಏನಂದ್ರು?

Leave A Reply

Your email address will not be published.