Social Media Fact: ಸೋಶಿಯಲ್ ಮೀಡಿಯಾ ಸುದ್ದಿಯಿಂದ ಗೊಂದಲ ಉಂಟಾಗುತ್ತಾ? ಮೋಸ ಹೋಗುತ್ತೀರಾ? ಹಾಗಿದ್ರೆ ಈ ಮೂಲಕ ಫ್ಯಾಕ್ಟ್ ತಿಳಿದುಕೊಳ್ಳಿ!

Social Media Fact: ಇತ್ತೀಚಿಗೆ ಸಾಮಾಜಿಕ ಮಾಧ್ಯಮವು ಜಾಗತಿಕವಾಗಿ ಅಗಾಧವಾದ ಎಳೆತವನ್ನು ಹೊಂದಿದೆ. ಅದರಲ್ಲೂ ಜನರು ಹೆಚ್ಚಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಕೆಲವು ಜನಪ್ರಿಯ ಉದಾಹರಣೆಗಳಲ್ಲಿ Twitter , Facebook ಮತ್ತು ವಾಟ್ಸಾಪ್ ಮುಂತಾದವುಗಳ ಅವಲಂಬಿತರಾಗಿದ್ದಾರೆ.

Pavitra Gowda: ರೇಣುಕಾಸ್ವಾಮಿಯ ಮೆಸೇಜ್ ಬಗ್ಗೆ ಹೇಳಿ ಘನಘೋರ ತಪ್ಪು ಮಾಡಿದೆ: ಪೊಲೀಸರ ಮುಂದೆ ಪವಿತ್ರಾ ಗೌಡ ಕಣ್ಣೀರು !

ಇನ್ನು ಸ್ನೇಹಿತರು, ಕುಟುಂಬ ಮತ್ತು ವಿವಿಧ ಸಮುದಾಯಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ಸಂವಹನ ನಡೆಸಲು ಜನರು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ ಅನ್ನೋದು ಎಷ್ಟು ಸತ್ಯವೋ ಜೊತೆಗೆ ವ್ಯಾಪಾರಗಳು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಮತ್ತು ಇನ್ನಿತರ ವಿಚಾರ ಪ್ರಚಾರ ಮಾಡಲು ಮತ್ತು ಗ್ರಾಹಕರ ಕಾಳಜಿಗಳನ್ನು ಟ್ರ್ಯಾಕ್ ಮಾಡಲು ಸಾಮಾಜಿಕ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಆದರೆ ಕೆಲವೊಮ್ಮೆ ಸೋಷಿಯಲ್ ಮೀಡಿಯಾ ಮಾಹಿತಿ ತಪ್ಪಾಗಿರುತ್ತದೆ.

ಹೌದು, ಮುಖ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಬಗ್ಗೆ ಗೊಂದಲ ಉಂಟಾಗುವುದು ಸಹಜ. ಆದ್ದರಿಂದ ಕೆಲವೊಂದು ವಿಚಾರದ ಸತ್ಯಾಸತ್ಯತೆ (Social Media Fact) ಬಗ್ಗೆ ಯಾವ ಸುದ್ದಿ ಸುಳ್ಳು, ಯಾವ ವಿಚಾರ ನಿಖರವಾಗಿದೆ ಎಂಬ ಮಾಹಿತಿ ತಿಳಿಯಲು ಈ ರೀತಿ ಮಾಡಿ.

ಅದಕ್ಕಾಗಿ ನಿಮ್ಮ ಗೊಂದಲದ ವಿಡಿಯೋ/ಚಿತ್ರ/ಪೋಸ್ಟ್ ಲಿಂಕ್ ಅನ್ನು https://satya.karnataka.gov.in/ ಜೊತೆ ಹಂಚಿಕೊಳ್ಳಿ. ಈ ಮೂಲಕ ಪರಿಶೀಲಿಸಿ, ನಿಖರ ಮಾಹಿತಿಯನ್ನು ತಿಳಿದುಕೊಳ್ಳಿ.

ಯಾಕೆಂದರೆ ಸಾಮಾಜಿಕ ‌ ಜಾಲತಾಣಗಳ ಮೂಲಕ ಬಂದ ಸುದ್ದಿಗಳನ್ನು ನಂಬದಿರಿ, ನಂಬಿ ಮೋಸ ಹೋಗದಿರಿ. ಅದಕ್ಕಾಗಿ ಸತ್ಯ ಶೋಧನೆಯ ನಿಖರ ಮಾಹಿತಿಗಾಗಿ sathya.karnataka.gov.in ವೆಬ್ ತಾಣಕ್ಕೆ ಭೇಟಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

Sridevi Byrappa: ಯುವ ರಾಜ್‌ಕುಮಾರ್‌ ಆಸ್ತಿ ಹಣ ಬೇಡ- ಶ್ರೀದೇವಿ ಲಾಯರ್‌

Leave A Reply

Your email address will not be published.