Home Entertainment Renukaswamy: ಪವಿತ್ರಾ ಗೌಡಗೆ ತನ್ನ ಗುಪ್ತಾಂಗದ ಫೋಟೋ ಕಳುಹಿಸಿದ್ದ ರೇಣುಕಾಸ್ವಾಮಿ

Renukaswamy: ಪವಿತ್ರಾ ಗೌಡಗೆ ತನ್ನ ಗುಪ್ತಾಂಗದ ಫೋಟೋ ಕಳುಹಿಸಿದ್ದ ರೇಣುಕಾಸ್ವಾಮಿ

Renukaswamy

Hindu neighbor gifts plot of land

Hindu neighbour gifts land to Muslim journalist

Renukaswamy: ದರ್ಶನ್‌ ಹಾಗೂ ಪವಿತ್ರಾ ಗೌಡ ಸೇರಿ ಉಳಿದ ಆರೋಪಿಗಳಿಗೆ ಇದೀಗ ಆರು ದಿನಗಳ ಕಾಲ ಪೊಲೀಸ್‌ ಕಸ್ಟಡಿ ನೀಡಲಾಗಿದೆ. ಈ ಮಧ್ಯೆ ರೇಣುಕಾಸ್ವಾಮಿ ಇನ್ಸ್‌ಸ್ಟಾಗ್ರಾಂನಲ್ಲಿ ತನ್ನ ಮರ್ಮಾಂಗದ ಫೋಟೋ ಕಳುಹಿಸಿ ಲೈಂಗಿಕ ಕ್ರಿಯೆಗೆ ಬರುವಂತೆ ಪವಿತ್ರಾ ಗೌಡಗೆ ಮೆಸೇಜ್‌ ಮಾಡಿದ್ದು, ನಟ ದರ್ಶನ್‌ ಸಿಟ್ಟುಗೊಳ್ಳಲು ಕಾರಣ ಎಂದು ಹೇಳಲಾಗಿದೆ.

ಯಾವಾಗ ಪವಿತ್ರಾ ಗೌಡ ಅವರು ವಿಜಯಲಕ್ಷ್ಮೀ ವಿರುದ್ಧ ಪೋಸ್ಟ್‌ ಹಾಕೋಕೆ ಶುರು ಮಾಡಿದರೋ ಅಲ್ಲಿಂದ ಪವಿತ್ರಾ ಗೌಡರಿಗೆ ರೇಣುಕಾಸ್ವಾಮಿಯ ಕಾಟ ಶುರುವಾಗಿದೆ. ತನ್ನನ್ನು ದರ್ಶನ್‌ ಅಭಿಮಾನಿ ಎಂದು ಹೇಳಿಕೊಂಡಿದ್ದ ಈತ, ನಂತರ ಪವಿತ್ರಾ ಅವರ ಫೋಟೋಗಳಿಗೆ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ್ದ.

ಪವಿತ್ರ ಅವರಿಗೆ  ನಿರಂತರ ಅಶ್ಲೀಲ ಮೆಸೇಜ್‌ ಕಳುಹಿಸಿದ್ದು, ಇದೂ ಅತಿರೇಕಕ್ಕೆ ಹೋಗಿ ತನ್ನ ಮರ್ಮಾಂಗದ ಫೋಟೋ ಕಳುಹಿಸಿ ವಿಕೃತಿ ಮೆರೆದಿದ್ದ. ಶುಕ್ರವಾರ ತನ್ನ ಮರ್ಮಾಂಗದ ಫೋಟೋ ಕಳುಹಿಸಿ ʼದರ್ಶನ್‌ಗಿಂತ ನಾನೇನು ಕಡಿಮೆ ಬಾʼ ಎಂದು ಹೇಳಿದ್ದ, ಇದು ಪವಿತ್ರಾರನ್ನು ಚಿಂತೆಗೆ ಒಳಮಾಡಿತಂತೆ.  ಈ ಮೆಸೇಜ್‌ ನಟ ದರ್ಶನ್‌ಗೆ ಗೊತ್ತಾಗಿ, ಆಗ ಸಿಟ್ಟಗೊಂಡ ದರ್ಶನ್‌ ರೆಡ್ಡಿ ಹೆಸರಿನ ಖಾತೆ ಬಗ್ಗೆ ವಿಚಾರಣೆ ಮಾಡಿದಾಗ ಅದು ರೇಣುಕಾಸ್ವಾಮಿ ಎಂಬುವವರು ಎಂದು ತಿಳಿದು ಬಂದಿದೆ. ನಂತರ ಬೆದರಿಸಿ ಎಚ್ಚರಿಕೆ ಕೊಡಲು ಕರೆತಂದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಇದಕ್ಕೆಲ್ಲ ಪವಿತ್ರಾ ಉತ್ತರ ಏನಿತ್ತು?

ಹಾಗೆನೇ ರೇಣುಕಾಸ್ವಾಮಿ ಅವರ ಕಮೆಂಟ್‌ಗಳಿಗೆ ಪವಿತ್ರಾ ಪರ ಆಕೆಯ ಸ್ನೇಹಿತೆ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಸತ್ಯಸಂಗತಿ ತಿಳಿಯದೆ ಮಾತನಾಡುವ ಮೂರ್ಖ ಜನರ ಕಮೆಂಟ್‌ಗೆ ಪತ್ರಿಕ್ರಿಯೆ ನೀಡದೆ, ಇದಕ್ಕೆ ಸಮಯವೇ ಉತ್ತರಿಸುತ್ತದೆ ಕಾದು ನೋಡು ಎಂದು ಹೇಳಿದ್ದಳಂತೆ.

ರೇಣುಕಾಸ್ವಾಮಿಯನ್ನ ʼಡಿʼ ಬಾಸ್‌ ಗ್ಯಾಂಗ್‌  ಬಲೆಗೆ ಬೀಳಿಸಿದ್ದು ಹೇಗೆ?
ಇನ್‌ಸ್ಟಾಗ್ರಾಂನಲ್ಲಿ ತನಿಷಾ ರೆಡ್ಡಿ ಹೆಸರಿನಲ್ಲಿ ರೇಣುಕಾಸ್ವಾಮಿ ನಕಲಿ ಖಾತೆ ತೆರೆದಿದ್ದು, ಪವಿತ್ರಾಗೌಡರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಇದನ್ನು ಡಿ ಬಾಸ್‌ ಗ್ಯಾಂಗ್‌ಗೆ ತಿಳಿದು, ಆತನ ಪೂರ್ವಾಪರ ವಿಚಾರಿಸಿದಾಗ, ಔಷಧಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಈ ಗ್ಯಾಂಗ್‌ಗೆ ಗೊತ್ತಾಗಿದೆ. ನಂತರ ಇನ್‌ಸ್ಟಾಗ್ರಾಂಬಲ್ಲಿ ಯುವತಿ ಹೆಸರಿನಲ್ಲಿ ಚಿತ್ರದುರ್ಗ ಜಿಲ್ಲೆ ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಖಾತೆ ತೆರೆದು ರೇಣುಕಾಸ್ವಾಮಿಯನ್ನು ತನ್ನ ಖೆಡ್ಡಾಕ್ಕೆ ಬೀಳಿಸಿದ್ದು, ನಂತರ ಯುವತಿ ಹೆಸರಿನಲ್ಲಿ ರೇಣುಕಾ ಸ್ವಾಮಿ ಜೊತೆ ಚಾಟ್‌ ಮಾಡಿದ್ದು, ಕೊನೆಯದಾಗಿ ಶನಿವಾರ ಭೇಟಿ ಮಾಡುವ ಎಂದಿದ್ದಾರೆ.

ಯುವತಿ ಭೇಟಿ ಮಾಡುವ ಆಸೆಯಿಂದ ಬಂದ ರೇಣುಕಾಸ್ವಾಮಿ ಡಿ ಬಾಸ್‌ ಗ್ಯಾಂಗ್‌ ಬಲೆಗೆ ಬೀಳುತ್ತಾನೆ.

H D Kumarswamy: ಅಧಿಕಾರ ಸ್ವೀಕರಿಸುತ್ತಿದ್ದಂತೆ ಕುಮಾರಸ್ವಾಮಿಗೆ ಪಂಚ ಪ್ರಶ್ನೆ ಕೇಳಿದ ಕಾಂಗ್ರೆಸ್ !! ಏನದು ?