Home Karnataka State Politics Updates Modi Parivar: ದಯವಿಟ್ಟು ಸೋಷಿಯಲ್ ಮೀಡಿಯಾ ಖಾತೆಗಳಿಂದ ‘ಮೋದಿ ಕಾ ಪರಿವಾರ್’ ತೆಗೆದು ಹಾಕಿ –...

Modi Parivar: ದಯವಿಟ್ಟು ಸೋಷಿಯಲ್ ಮೀಡಿಯಾ ಖಾತೆಗಳಿಂದ ‘ಮೋದಿ ಕಾ ಪರಿವಾರ್’ ತೆಗೆದು ಹಾಕಿ – ಪ್ರಧಾನಿ ಮೋದಿಯಿಂದ ಅಚ್ಚರಿ ಮನವಿ !!

Modi Parivar

Hindu neighbor gifts plot of land

Hindu neighbour gifts land to Muslim journalist

Modi Parivar: ಚುನಾವಣೆ ವೇಳೆ ತಮಗೆ ಬೆಂಬಲ ವ್ಯಕ್ತಪಡಿಸಲು ತಮ್ಮ ತಮ್ಮ ಸೋಶಿಯಲ್​ ಮೀಡಿಯಾ ಹ್ಯಾಂಡಲ್​ಗಳಲ್ಲಿ ಹಾಕಿದ್ದ ‘ಮೋದಿ ಕಾ ಪರಿವಾರ್​’ (ಮೋದಿಯ ಕುಟುಂಬ) ಉಲ್ಲೇಖವನ್ನು ತೆಗೆದು ಹಾಕುವಂತೆ ಮನವಿ ಮಾಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ(Parliament Election ) ಎನ್​ಡಿಯ(NDA) ಮೈತ್ರಿಕೂಟಕ್ಕೆ ಬಹುಮತ ನೀಡಿದ ಜನರಿಗೆ ಮತ್ತು ಬೆಂಬಲಿಗರಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಧನ್ಯವಾದ ಸಮರ್ಪಣೆ ಮಾಡಿದ್ದು, ಈ ಸಂದರ್ಭದಲ್ಲಿ ಮೋದಿ ಅವರು ತಮ್ಮ ಸೋಶಿಯಲ್​ ಮೀಡಿಯಾ ಹ್ಯಾಂಡಲ್​ಗಳಲ್ಲಿ ಹಾಕಿದ್ದ ‘ಮೋದಿ ಕಾ ಪರಿವಾರ್​’ (Modi Parivar) ಉಲ್ಲೇಖವನ್ನು ತೆಗೆದು ಹಾಕುವಂತೆ ಮನವಿ ಮಾಡಿದ್ದಾರೆ. ಚುನಾವಣೆ ಮುಂಚಿತವಾಗಿ ಹಾಕಿಕೊಳ್ಳಿ ಎಂದು ಹೇಳಿದವರು ಈಗ ತೆಗೆದು ಹಾಕಿ ಎಂದು ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ.

ನಟ ವಿನೋದ್ ರಾಜ್​ ಕುಮಾರ್ ಆಸ್ಪತ್ರೆಗೆ ದಾಖಲು!

ಟ್ವೀಟ್ ಮಾಡಿದ ಮೋದಿ ಹೇಳಿದ್ದೇನು?
“ಚುನಾವಣಾ ಪ್ರಚಾರದ ಮೂಲಕ ಭಾರತದಾದ್ಯಂತ ಜನರು ನನ್ನ ಮೇಲಿನ ಪ್ರೀತಿಯ ಸಂಕೇತವಾಗಿ ತಮ್ಮ ಸಾಮಾಜಿಕ ಮಾಧ್ಯಮಕ್ಕೆ ‘ಮೋದಿ ಕಾ ಪರಿವಾರ್’ ಸೇರಿಸಿದ್ದರು. ನಾನು ಅದರಿಂದ ಸಾಕಷ್ಟು ಶಕ್ತಿಯನ್ನು ಪಡೆದುಕೊಂಡೆ. ಭಾರತದ ಜನರು ಎನ್​ಡಿಎಗೆ ಸತತ ಮೂರನೇ ಬಾರಿಗೆ ಬಹುಮತ ನೀಡಿದ್ದಾರೆ, ಇದು ಒಂದು ರೀತಿಯ ದಾಖಲೆಯಾಗಿದ. ನಮ್ಮ ರಾಷ್ಟ್ರದ ಸುಧಾರಣೆಗಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ನಮಗೆ ಜನಾದೇಶವನ್ನು ನೀಡಿದ್ದಾರೆ’.

‘ನಾವೆಲ್ಲರೂ ಒಂದೇ ಕುಟುಂಬ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸುವುದರೊಂದಿಗೆ, ನಾನು ಮತ್ತೊಮ್ಮೆ ಭಾರತದ ಜನರಿಗೆ ಧನ್ಯವಾದ ಹೇಳುತ್ತೇನೆ. ಈಗ ನಿಮ್ಮ ಸಾಮಾಜಿಕ ಮಾಧ್ಯಮಗಳಿಂದ ‘ಮೋದಿ ಕಾ ಪರಿವಾರ್’ ಅನ್ನು ತೆಗೆದುಹಾಕುವಂತೆ ವಿನಂತಿಸುತ್ತೇನೆ. ಹ್ಯಾಂಡಲ್​ಗಳ ಹೆಸರು ಬದಲಾಗಬಹುದು. ಆದರೆ ಭಾರತದ ಪ್ರಗತಿಗಾಗಿ ಶ್ರಮಿಸುತ್ತಿರುವ ಒಂದು ಪರಿವಾರವಾಗಿ ನಮ್ಮ ಬಂಧವು ಮುಂದುವರಿಯಲಿದೆ’ ಎಂದು ಹೇಳಿದ್ದಾರೆ.

ಏನಿದು ಮೋದಿ ಪರಿವಾರ? ಹುಟ್ಟಿಕೊಂಡದ್ದು ಹೇಗೆ?:
ಆರ್​ಜೆಡಿ ನಾಯಕ ಲಾಲು ಪ್ರಸಾದ್ ಯಾದವ್(Lalu Prasad Yadav) ಅವರು, ಮೋದಿಗೆ ಕುಟುಂಬವಿಲ್ಲ ಎಂದು ಹೇಳಿ ಮೋದಿಯನ್ನು ಟೀಕಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ ನನಗೆ ದೇಶವೇ ಪರಿವಾರ, ಭಾರತವೇ ಪರಿವಾರ ಎಂದು ಕೌಂಟ್ರು ನೀಡಿದ್ದರು. ಇದರಿಂದ ಹುಮ್ಮಸ್ಸುಗೊಂಡ ಮೋದಿ ಅಭಿಮಾನಿಗಳು, ಬಿಜೆಪಿ ನಾಯಕರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹ್ಯಾಂಡಲ್​ಗಳಲ್ಲಿ ‘ಮೋದಿ ಕಾ ಪರಿವಾರ್​’ (Modi Ka Parivar) ಎಂದು ಬರೆದುಕೊಂಡಿದ್ದರು.

Actor Darshan: ರೇಣುಕಾ ಸ್ವಾಮಿ ಶವ ಸಾಗಿಸಲು ಬಳಸಿದ್ದ ಕಾರು ವಶ