Pavitra Gowda: ರೇಣುಕಾಸ್ವಾಮಿಯ ಮೆಸೇಜ್ ಬಗ್ಗೆ ಹೇಳಿ ಘನಘೋರ ತಪ್ಪು ಮಾಡಿದೆ: ಪೊಲೀಸರ ಮುಂದೆ ಪವಿತ್ರಾ ಗೌಡ ಕಣ್ಣೀರು !

Pavitra Gowda: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟು ಹಾಕಿದರ ಜೊತೆಗೆ, ಕ್ಷಣದಿಂದ ಕ್ಷಣಕ್ಕೆ ಹೊಸ ಹೊಸ ಮಾಹಿತಿಗಳನ್ನು ಹೊರಹಾಕುತ್ತಿದೆ. ಈ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಸೇರಿ 13 ಮಂದಿ ಅರೆಸ್ಟ್ ಆಗಿದ್ದಾರೆ. ಎಲ್ಲರಿಗೂ ಆರು ದಿನದ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ. ರೇಣುಕಾ ಸ್ವಾಮಿ ಆತನ ಗುಪ್ತಾಂಗದ ಫೋಟೋ ಕಳುಹಿಸಿ ನಾನು ದರ್ಶನ್ ಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಅಂದಿದ್ದ. ಆತನ ಆ ಮೆಸೇಜ್ ದರ್ಶನ್ ತೂಗುದೀಪ್ ನನ್ನು ಅಲ್ಲಾಡಿಸಿತ್ತು. ತನ್ನ ಗೆಳತಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದಲ್ಲದೆ ತನ್ನ ಅಹಂಗೆ ಭಾರಿ ಪೆಟ್ಟು ನೀಡಿದ ರೇಣುಕಾ ಸ್ವಾಮಿಗಳ ಬಗ್ಗೆ ದರ್ಶನ್ ಕೋಪಗೊಂಡಿದ್ದರು. ತದನಂತರ ಆದದ್ದು ಎಲ್ಲರಿಗೂ ಗೊತ್ತೇ ಇದೆ ಅಭಿಮಾನಿ ಸಂಘದ ಹೆಸರಿನಲ್ಲಿ ದರ್ಶನ್ ಅಭಿಮಾನಿಗಳು ರೇಣುಕಾ ಸ್ವಾಮಿಯನ್ನ ಬೆಂಗಳೂರಿಗೆ ಕರೆದುಕೊಂಡಿದ್ದರು. ಅಲ್ಲಿ ರೇಣುಕಾ ಸ್ವಾಮಿಯ ಹತ್ಯೆಯಾಗಿತ್ತು.

Social Media Fact: ಸೋಶಿಯಲ್ ಮೀಡಿಯಾ ಸುದ್ದಿಯಿಂದ ಗೊಂದಲ ಉಂಟಾಗುತ್ತಾ? ಮೋಸ ಹೋಗುತ್ತೀರಾ? ಹಾಗಿದ್ರೆ ಈ ಮೂಲಕ ಫ್ಯಾಕ್ಟ್ ತಿಳಿದುಕೊಳ್ಳಿ!

ಇದೀಗ ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾ ಗೌಡಗೆ  ಕೆಟ್ಟ ಮೇಲೆ ಬುದ್ಧಿ ಬಂದ ಹಾಗಿದೆ. ಆಕೆಯ ಮಿರುಗುವ ಬಣ್ಣದ ಬಿಳಿಯ ಸುಕೋಮಲ ಕೈಗೆ ಕೋಳ ಬಿದ್ದ ಮೇಲೆ ಆಕೆಗೆ ದಿಢೀರನೆ ಜ್ಞಾನೋದಯವಾಗಿದ್ದು, ಪೊಲೀಸರ ಮುಂದೆ ಪವಿತ್ರಾ ಗೌಡ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವಿಶೇಷ ಅಂದ್ರೆ ಪವಿತ್ರ ಗೌಡರನ್ನು ಪ್ರಕರಣದಲ್ಲಿ ಎ1 ಆರೋಪಿಯನ್ನಾಗಿ ಮಾಡಲಾಗಿದೆ.

ರೇಣುಕಾಸ್ವಾಮಿ ಮೆಸೇಜ್ ಬಗ್ಗೆ ದರ್ಶನ್ ಗೆ ಹೇಳಿ ತಪ್ಪು ಮಾಡಿದೆ ಎಂದ ಪವಿತ್ರಾ ಗೌಡ
ರೇಣುಕಾಸ್ವಾಮಿಯ ಮೆಸೇಜ್ ಬಗ್ಗೆ ದರ್ಶನ್ ಗೆ ಹೇಳಿ ತಪ್ಪು ಮಾಡಿದೆ ಎಂದು ವಿಚಾರಣೆ ವೇಳೆ ಪೊಲೀಸರ ಮುಂದೆ ಪವಿತ್ರಗೌಡ ತಮ್ಮ ತಪ್ಪು ತೋಡಿಕೊಂಡಿದ್ದಾರೆ. ಹತ್ಯೆಯಾದ ರೇಣುಕಾಸ್ವಾಮಿ ಕಳಿಸಿದ ಮೆಸೇಜ್ ಬಗ್ಗೆ ದರ್ಶನ್ ಗೆ ಹೇಳಿದ್ದೇ ಘನಘೋರ ತಪ್ಪು ಆಗಿದೆ. ಅಶ್ಲೀಲ ಮೆಸೇಜ್‍ಗಳ ಬಗ್ಗೆ ದರ್ಶನ್‍ಗೆ ತೋರಿಸಬಾರದಿತ್ತು. ಆ ಬಗ್ಗೆ ಏನೂ ಹೇಳಬಾರದಿತ್ತು. ಬದಲಾಗಿ, ನಾನೇ ಈ ಬಗ್ಗೆ ಪೊಲೀಸರಿಗೆ ದೂರು ಕೊಡಬಹುದಿತ್ತು. ಒಂದು ವೇಳೆ ನಾನೇ ಪೊಲೀಸರಿಗೆ ದೂರು ಕೊಟ್ಟಿದ್ರೆ ಕಾನೂನು ಕ್ರಮ ಆಗುತ್ತಿತ್ತು. ಅದನ್ನು ಬಿಟ್ಟು ದರ್ಶನ್ ಗೆ ಪ್ರತಿಯೊಂದು ಮೆಸೇಜ್ ತೋರಿಸಿ ಹೇಳಿದ್ದೆ ತಪ್ಪಾಯ್ತು. ಇದು ಕೊಲೆಯಾಗುವ ಹಂತಕ್ಕೆ ಹೋಗುತ್ತೆ ಅಂತ ನಾನು ಯಾವತ್ತೂ ಅಂದುಕೊಂಡಿರಲಿಲ್ಲ ಎಂದು ಪವಿತ್ರ ಗೌಡ ಹೇಳಿದ್ದಾಳೆ ಎನ್ನಲಾಗಿದೆ.

ಮೊದಲಿಗೆ ರೇಣುಕಾ ಸ್ವಾಮಿಯ ಅಶ್ಲೀಲ ಮೆಸೇಜ್ ಅನ್ನು ಮನೆಗೆಲಸದವನಾದ ಪವನ್ ಎಂಬಾತನಿಗೆ ಪವಿತ್ರಾ ಗೌಡ ಹೇಳಿದ್ದಳು. ‘ಯಾವುದೇ ಕಾರಣಕ್ಕೂ ದರ್ಶನ್ ಗೆ ಹೇಳಬೇಡ. ಅವನು ಏನಾದ್ರು ಮಾಡಿಬಿಡ್ತಾನೆ’ ಎಂದು ಪವನ್ ಗೆ ಕಿವಿಮಾತು ಕೂಡ ಹೇಳಿದ್ದಳು ಪವಿತ್ರಾ. ಆದರೆ, ಪವನ್ ಬಾಯಲ್ಲಿ ಈ ಗುಟ್ಟು ಹೆಚ್ಚು ಹೊತ್ತು ನಿಲ್ಲಲಿಲ್ಲ. ಆತ ಎಲ್ಲವನ್ನು ಬರಬರ ಅಂತ ದರ್ಶನ್ ಗೆ ಹೇಳಿಬಿಟ್ಟಿದ್ದ. ಆಮೇಲೆ ದರ್ಶನ್ ಗ್ಯಾಂಗ್ ರೇಣುಕಾ ಸ್ವಾಮಿಯನ್ನು ಉಪಾಯದಿಂದ ಬೆಂಗಳೂರಿಗೆ ಬರ ಹೇಳಿದ್ದಾರೆ ಅಲ್ಲಿ ಹಲ್ಲೆ ನಡೆದಾಗ ಅಕಸ್ಮಾತಾಗಿ ರೇಣುಕಾ ಸ್ವಾಮಿ ಸತ್ತು ಹೋಗಿದ್ದಾರೆ.

ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಪವಿತ್ರಾ ಗೌಡ ಎಂಟ್ರಿ ಆಗಿದೆ ಅನ್ನೋದು ಬಹಳ ಹಳೆಯ ಸುದ್ದಿ. ಈ ವಿಚಾರದಲ್ಲಿ ಪವಿತ್ರಾ ಹಾಗೂ ವಿಜಯಲಕ್ಷ್ಮಿ ಮಧ್ಯೆ ಸಾಕಷ್ಟು ಜಗಳ ನಡೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಓಪನ್ ಆಗಿ ಇಬ್ಬರು ಕೂಡಾ ಕಿತ್ತಾಡಿಕೊಂಡಿದ್ದರು. ಅಂತಹ ಸಂದರ್ಭದಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಸಂಸಾರ ಚೆನ್ನಾಗಿರಬೇಕು ಎಂದು ಬಯಸಿದ ರೇಣುಕಾಸ್ವಾಮಿ ಅವರು ಪವಿತ್ರಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದ.

ಇದೀಗ ಕೊಲೆಯಾದ ರೇಣುಕಾ ಸ್ವಾಮಿ ಫೆಬ್ರವರಿ 27 ರಿಂದ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡೋಕೆ ಶುರು ಮಾಡಿದ್ದರು. ಅಷ್ಟಕ್ಕೂ ಆತ ಹೊರಟಿದ್ದು ದರ್ಶನ್ ಕುಟುಂಬ ಸರಿ ಮಾಡಲು. ಪವಿತ್ರ ಗೌಡಗೆ, ಅಶ್ಲೀಲ ಮೆಸೇಜುಗಳು ಬರಲು ಶುರುವಾದಾಗ ಆಕೆ ಬದಲು ಅಕೌಂಟ್ ಬ್ಲಾಕ್ ಮಾಡುತ್ತಾಳೆ. ಅಕೌಂಟ್ ಬ್ಲಾಕ್ ಮಾಡಿದರೂ ಹೊಸ ಅಕೌಂಟ್ ಓಪನ್ ಮಾಡಿ ಅಶ್ಲೀಲವಾಗಿ ಮೇಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ ಗಿಂತ ನಾನೇನು ಕಡಿಮೆ ಬಾ’’ಎಂದು ಹೇಳಿದ್ದನಂತೆ. ಇದರಿಂದ ಪವಿತ್ರಾ ಸಾಕಷ್ಟು ಚಿಂತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಆಗ ಪವಿತ್ರ ದರ್ಶನ್ ಸಹಾಯ ಪಡೆಯಲು ಯೋಚಿಸಿದ್ದಳು ಅದೇ ಈ ಕೊಳಗೆ ಮುನ್ನುಡಿ ಬರೆಯಿತಾ ? ಆ ನಿಟ್ಟಿನಲ್ಲಿ ಪೊಲೀಸರು ಕಾರ್ಯಮಗ್ದರಾಗಿದ್ದಾರೆ.

Sridevi Byrappa: ಯುವ ರಾಜ್‌ಕುಮಾರ್‌ ಆಸ್ತಿ ಹಣ ಬೇಡ- ಶ್ರೀದೇವಿ ಲಾಯರ್‌

 

Leave A Reply

Your email address will not be published.