Sim: ಕೂಡಲೇ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಚಾಲ್ತಿಯಲ್ಲಿದೆ ಅನ್ನೋದು ಈ ರೀತಿ ಚೆಕ್ ಮಾಡಿಕೊಳ್ಳಿ; ವೆರಿ ಡೇಂಜರ್!

ಹೊಸ ಸ್ಕ್ಯಾಮ್ ಗೆ ಸಿಕ್ಕಿಹಾಕಿಕೊಳ್ಳೋದು ಖಚಿತ!

Sim: ಡಿಜಿಟಲ್ ಯುಗದಲ್ಲಿ ಸುರಕ್ಷಿತವಾಗಿರುವುದು ತುಂಬಾ ಮುಖ್ಯ. ಯಾವ ವಿಷಯದಲ್ಲಿ ಯಾವಾಗ ಹೇಗೆ ಸ್ಕ್ಯಾಮ್ ಆಗುತ್ತೇವೆ ಅನ್ನೋದು ಊಹಿಸಲು ಕೂಡ ಸಾಧ್ಯವಿಲ್ಲ. ಉದಾಹರಣೆಗೆ ಮೊಬೈಲ್‌ ಚೇಂಜ್ ಮಾಡುವ ಜೊತೆಗೆ ಕೆಲವೊಮ್ಮೆ ಬಳಸುವ ಮೊಬೈಲ್‌ ಸಂಖ್ಯೆಯನ್ನು ಕೂಡ ಪದೇ ಪದೇ ಬದಲಾವಣೆ ಮಾಡುತ್ತೀರಿ. ಈಗಂತೂ ನಿಮಗೆ ಬೇಕಾದ ಹಾಗೆ ಸಿಮ್ ನಂಬರ್‌ ಸಿಗುತ್ತದೆ. ಸಹಜವಾಗಿ ನಂಬರ್‌ಗಳು ಚೇಂಜ್‌ ಮಾಡಿದ್ದ ತಕ್ಷಣ ಹಳೆಯ ಸಿಮ್ (sim) ಆಗಲಿ ಅದರ ನಂಬರ್‌ ಬಗ್ಗೆ ಆಗಲಿ ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದು ವೇಳೆ ನೀವು ಬಳಸಿದ ಸಿಮ್, ಈಗ ಬೇರೆ ವ್ಯಕ್ತಿ ಬಳಸುತ್ತಿದ್ದು, ಆತ ಮಾಡಿದ ತಪ್ಪಿಗೆ ಪೊಲೀಸರು ನಿಮ್ಮ ಮನೆಯ ಬಾಗಿಲಿಗೆ ಬರುವುದು ಖಚಿತ. ಹೌದು, ಆದ್ದರಿಂದ ನೀವು ಹಳೆಯ ಸಿಮ್ ಕಾರ್ಡ್ ನಂಬರ್ ಬಗ್ಗೆ ಸ್ವಲ್ಪ ಗಮನವಹಿಸಿ.

ಇನ್‌ಸ್ಟಾಗ್ರಾಮ್‌ನಲ್ಲಿ ದರ್ಶನ್‌ ಅನ್‌ಫಾಲೋ ಮಾಡಿದ ವಿಜಯಲಕ್ಷ್ಮೀ

ಇದಕ್ಕಾಗಿ ನಿಮ್ಮ ಹೆಸರಿನಲ್ಲಿ (ಆಧಾರ್/ಓಟರ್‌ಐಡಿ) ಎಷ್ಟು ಮೊಬೈಲ್ ಸಿಮ್/ನಂಬರ್‌ ಗಳಿವೆ ಎಂದು ನೀವು ಪರಿಶೀಲಿಸಬಹುದು. ನಿಮಗೆ ಸಂಬಂಧ ಪಡದ, ಇಲ್ಲವೇ ನೀವು ಬಳಕೆ ಮಾಡದ ನಂಬರ್ ಆಕ್ಟಿವ್ ಇದ್ದರೆ ಅದನ್ನು ತಿಳಿಯಲು ಸಹ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.

ನಿಮ್ಮ ಹೆಸರಿನಲ್ಲಿ ಇತರರು ಮೊಬೈಲ್ ನಂಬರ್ ಬಳಕೆ ಮಾಡುತ್ತಿದ್ದರೆ ಅದನ್ನು ತಿಳಿಯಲು ಕೇಂದ್ರ ಸರ್ಕಾರ (WWW.SANCHARSAATHI.COM) ಹೊಸ ವ್ಯವಸ್ಥೆ ಮೂಲಕ ಅವಕಾಶ ಕಲ್ಪಿಸಿದೆ.

ಈ ಕೆಳಗಿನ ವಿಧಾನಗಳ ಮೂಲಕ ತಿಳಿಯಿರಿ

ಅನುಸರಿಸಬೇಕಾದ ಕ್ರಮಗಳು
* ಮೊದಲು ನೀವು Sancharsaathi.gov.in ವೆಬ್‌ ಪೋರ್ಟಲ್ ಗೆ ಭೇಟಿ ನೀಡಬೇಕು. ಸ್ವಲ್ಪ ಸ್ಕ್ರಾಲ್ ಡೌನ್ ಮಾಡಿದ ನಂತರ ಸಿಗುವ Know your mobile connection ಮೇಲೆ ಕ್ಲಿಕ್ ಮಾಡಬೇಕು.
* ನಂತರ ನಿಮ್ಮ ಹೆಸರಿನಲ್ಲಿ ಇರುವ ಮೊಬೈಲ್ ನಂಬರ್‌ಗಳನ್ನು ನಿಗದಿತ ಸ್ಥಳದಲ್ಲಿ ಹಾಕಬೇಕು. ನಂತರ ಕ್ಯಾಪ್ಚಾ ಹಾಕಿ ಬಳಿಕ ನಿಮ್ಮ ಸಂಖ್ಯೆಗೆ ಬರುವ OTP ಯನ್ನು ನಮೂದಿಸಿ ಲಾಗಿನ್ ಆಗಬೇಕು.
* ಅಲ್ಲಿ ಕಾಣುವ ಡಿಸ್ಪ್ಲೇ ಮೇಲೆ ನಿಮ್ಮದಲ್ಲದ ಸಂಖ್ಯೆಗಳು ಅಲ್ಲಿ ನಿಮಗೆ ಕಂಡು ಬಂದಲ್ಲಿ ನಿಮ್ಮದಲ್ಲದ ಮೊಬೈಲ್ ಸಂಖ್ಯೆಯ ಮುಂದೆ ಮಾರ್ಕ್ ಮಾಡಬೇಕು.
* ನಂತರ ಅಲ್ಲಿ ಕಾಣುವ Not My Number ಅಥವಾ Not Required ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ರಿಪೋರ್ಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
* ನೀವು ರಿಪೋರ್ಟ್ ಮಾಡಿದ ನಂತರ ನಿಮಗೆ ಒಂದು ಟ್ರ್ಯಾಕಿಂಗ್ ಐಡಿ ನೀಡಲಾಗುತ್ತದೆ. ಆ ಸಂಖ್ಯೆಯ ಮೂಲಕ ನೀವು ರಿಪೋರ್ಟ್ ಮಾಡಿ ಸ್ಟೇಟಸ್ ಅನ್ನು ಪರಿಶೀಲಿಸಬಹುದಾಗಿದೆ.
* ಇನ್ನೂ ರಿಪೋರ್ಟ್ ಮಾಡಲಾದ ಮೊಬೈಲ್ ನಂಬರ್ ಗಳನ್ನು ರಿ-ವೇರಿಫಿಕೇಷನ್ ಮಾಡಬೇಕು. ನಂತರ ದೂರ ಸಂಪರ್ಕ ಇಲಾಖೆಯು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತದೆ.

ನೀವು ಹೀಗೆ ಮಾಡಿದಲ್ಲಿ ಕಾನೂನುಬಾಹಿರ ಕೃತ್ಯಗಳ ಜಾಲಕ್ಕೆ ನಿಮಗೆ ಗೊತ್ತಿಲ್ಲದೆ ಸಿಲುಕಿ ಹಾಕಿಕೊಳ್ಳುವ ಸಾಧ್ಯತೆಗಳಿಂದ ತಪ್ಪಿಸಿಕೊಳ್ಳಬಹುದು. ಜೊತೆಗೆ ಕೆಲವೊಂದು ಡಿಜಿಟಲ್ ನಷ್ಟಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕು ಸುಕುಮಾರ್ ಅವರು ಸಾಮಾಜಿಕ ಜಾಲತಾಣ ಮೂಲಕ ಮಾಹಿತಿ ನೀಡಿದ್ದಾರೆ.

Darshan Thoogudeepa: ಶವ ಎಸೆಯಲು, ಕೊಲೆ ಆರೋಪ ಹೊತ್ತುಕೊಳ್ಳಲು 30 ಲಕ್ಷ ಹಣ ಕೊಟ್ಟಿದ್ದ ದರ್ಶನ್‌?

Leave A Reply

Your email address will not be published.