Andhra Pradesh Capital: ಆಂಧ್ರಕ್ಕೆ ಅಮರಾವತಿ ಒಂದೇ ರಾಜಧಾನಿ- ಚಂದ್ರಬಾಬು ನಾಯ್ಡು ಘೋಷಣೆ !!

Andhra Pradesh Capital: ಇಂದು(ಜೂ 12) ಆಂಧ್ರ ಪ್ರದೇಶದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿಸಲಿರುವ ಹಾಗೂ ಟಿಡಿಪಿ(TDP) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು(Chandrababu Naidu) ಅವರು ಅಮರಾವತಿ(Amaravati) ಒಂದೇ ರಾಜ್ಯದ ಏಕೈಕ ರಾಜಧಾನಿಯಾಗಲಿದೆ ಎಂದು ಘೋಷಿಸಿದ್ದಾರೆ.

ದಿಢೀರ್ ಏರಿಕೆ ಕಂಡ ಟೊಮೆಟೋ ಬೆಲೆ; 1 ಕೆಜಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!!

NDA ಮೈತ್ರಿ ನಾಯಕರಾಗಿ ಅವಿರೋಧವಾಗಿ ಆಯ್ಕೆ ಆದ ಬಳಿಕ ಮಾತನಾಡಿದ ಚಂದ್ರಬಾಬು ನಾಯ್ಡು ಅವರು ‘ನಮ್ಮ ಸರ್ಕಾರದಲ್ಲಿ ಮೂರು ರಾಜಧಾನಿಗಳ ನೆಪದಲ್ಲಿ ಆಟ ನಡೆಯುವುದಿಲ್ಲ. ಇನ್ಮುಂದೆ ನಮ್ಮ ರಾಜಧಾನಿ ಅಮರಾವತಿ. ಅಮರಾವತಿಯೇ ಆಂಧ್ರ ಪ್ರದೇಶದ ಏಕೈಕ ರಾಜಧಾನಿ’ ಎಂದು ನಾಯ್ಡು ಹೇಳಿದರು.

ಈ ಬಗ್ಗೆ ಮಾತನಾಡಿದ ಅವರು ‘ಅಮರಾವತಿ ನಮ್ಮ ರಾಜಧಾನಿಯಾಗಲಿದೆ. ನಾವು ರಚನಾತ್ಮಕ ರಾಜಕಾರಣ ಮಾಡುತ್ತೇವೆಯೇ ವಿನಾ, ಹಗೆತನದ ರಾಜಕೀಯವನ್ನಲ್ಲ. ವಿಶಾಖಪಟ್ಟಣವು ರಾಜ್ಯದ ವಾಣಿಜ್ಯ ರಾಜಧಾನಿಯಾಗಲಿದೆ. ಮೂರು ರಾಜಧಾನಿಗಳನ್ನು ಸ್ಥಾಪಿಸುವ ಪ್ರಯತ್ನ ಹಾಗೂ ಅಂತಹ ವಂಚಕ ಚಟುವಟಿಕೆಗಳ ಮೂಲಕ ಜನರ ಜತೆ ನಾವು ಆಟವಾಡುವುದಿಲ್ಲ. ವಿಶಾಖಪಟ್ಟಣವು(Vishakapattan) ನಮಗೆ ಪೂರ್ಣ ಪ್ರಮಾಣದ ಜನಾದೇಶ ನೀಡಿದೆ. ಈ ಜನಾದೇಶ ಪ್ರತಿಧ್ವನಿಸುವಂತೆ ನಾವು ರಾಯಲಸೀಮೆಯನ್ನು ಅಭಿವೃದ್ಧಿ ಮಾಡುತ್ತೇವೆ” ಎಂದು ಗುಡುಗಿದ್ದಾರೆ.

ವಿಜಯವಾಡ(Vijayavada) ಮತ್ತು ಗುಂಟೂರು(Gunturu) ನಗರಗಳ ನಡುವೆ ಇರುವ ಅಮರಾವತಿಯನ್ನು ಪರಿಸರಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಹೊಂದಿದ ನಗರವನ್ನಾಗಿ ರೂಪಿಸುವುದು ನಾಯ್ಡು ಅವರ ಯೋಜನೆಯಾಗಿತ್ತು. ಆದರೆ, ಆದರೆ, 2019 ರಲ್ಲಿ ಟಿಡಿಪಿ ಅಧಿಕಾರವನ್ನು ಕಳೆದುಕೊಂಡಾಗ ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೇರಿದಾಗ ನಾಯ್ಡು ಅವರ ಈ ಯೋಜನೆಯನ್ನು ಕೈಬಿಟ್ಟಿತ್ತು ಮತ್ತು ಮೂರು ರಾಜಧಾನಿಗಳ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿತ್ತು. ಇದೀಗ ಮತ್ತೆ ಅಧಿಕಾರಕ್ಕೆ ಬಂದ ನಾಯ್ಡು ತನ್ನ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ.

Pavitra Gowda: ರೇಣುಕಾಸ್ವಾಮಿಯ ಮೆಸೇಜ್ ಬಗ್ಗೆ ಹೇಳಿ ಘನಘೋರ ತಪ್ಪು ಮಾಡಿದೆ: ಪೊಲೀಸರ ಮುಂದೆ ಪವಿತ್ರಾ ಗೌಡ ಕಣ್ಣೀರು !

Leave A Reply

Your email address will not be published.