NEET ವಿವಾದ ಪರೀಕ್ಷೆಯ ಪಾವಿತ್ರ್ಯದ ಮೇಲೆ ಪರಿಣಾಮ ಬೀರಿದೆ ಎಂದ Supreme Court – ಮರು ಪರೀಕ್ಷೆ ಖಚಿತ ?

NEET ಫಲಿತಾಂಶದ ವಿವಾದವು ಪರೀಕ್ಷೆಯ ಪಾವಿತ್ರ್ಯದ ಮೇಲೆ ತುಂಬಾ ಪರಿಣಾಮ ಬೀರಿದ್ದು, ಉತ್ತರ ನೀಡಲೇಬೇಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನೀಟ್ ಪರೀಕ್ಷಾ ಫಲಿತಾಂಶದ ಕುರಿತ ವಿವಾದವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ‘ಈ ವಿವಾದ ಪರೀಕ್ಷೆಯ ಪಾವಿತ್ರ್ಯದ ಮೇಲೆ ಪರಿಣಾಮ ಬೀರಿದೆ. ಇದಕ್ಕೆ NTA ಉತ್ತರ ನೀಡಲೇಬೇಕಿದೆ ಎಂದು ಒತ್ತಿ ಹೇಳಿದೆ.

Canara Bank: ಕೆನರಾ ಬ್ಯಾಂಕ್ ಖಾತೆ ಇದ್ದರೆ ಸಾಕು! ಅತೀ ಕಡಿಮೆ ಬಡ್ಡಿಯಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ ಖಚಿತ!

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ-2024 ಪದವಿಪೂರ್ವ (NEET-UG) 2024 ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ಮಂಗಳವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.

ಈ ಸಂದರ್ಭ ನೀಟ್ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಗೆ ನೋಟಿಸ್ ಜಾರಿ ಮಾಡಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದಿನ್ ಅಮಾನುಲ್ಲಾ ಒಳಗೊಂಡ ರಜಾಕಾಲದ ಪೀಠವು ಈ ವಿವಾದ ಪರೀಕ್ಷೆಯ ಪಾವಿತ್ರ್ಯದ ಮೇಲೆ ಪರಿಣಾಮ ಬೀರಿದೆ. ಇದಕ್ಕೆ NTA ಉತ್ತರ ನೀಡಲೇಬೇಕಿದೆ ಎಂದು ಹೇಳಿದೆ.

ಇಂದು ವಿಚಾರಣೆ ನಡೆಸಿದ ನ್ಯಾಯಾಲಯವು ”ನೀಟ್ ಪರೀಕ್ಷಾ ಫಲಿತಾಂಶದ ಕುರಿತ ವಿವಾದ ಪರೀಕ್ಷೆಯ ಪಾವಿತ್ರ್ಯದ ಮೇಲೆ ಪರಿಣಾಮ ಬೀರಿದೆ. ವಿವಾದ ಅಷ್ಟು ಸರಳವಾಗಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಇದು ಪರಿಣಾಮ ಬೀರಿದ್ದು, ಆದ್ದರಿಂದ ನಮಗೆ ಸರಿಯಾದ ಉತ್ತರಗಳು ಬೇಕಾಗುತ್ತವೆ ಎಂದು ನ್ಯಾಯಮೂರ್ತಿ ಅಮಾನುಲ್ಲಾರವರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯನ್ನು ಪ್ರತಿನಿಧಿಸುವ ವಕೀಲರಿಗೆ ಹೇಳಿದ್ದಾರೆ. ಹಾಗೆಯೇ ಉತ್ತರಿಸಲು ನಿಮಗೆ ಎಷ್ಟು ಸಮಯ ಬೇಕು ಎಂದು ಕೇಳಿದ ಪೀಠ ತಡವಾದರೆ ಕೌನ್ಸೆಲಿಂಗ್ ಪ್ರಾರಂಭವಾಗುತ್ತದೆ ಎಂದೂ ವಿಷಯದ ಗಂಭೀರತೆಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ವಕೀಲರಿಗೆ ಹೇಳಿದ್ದಾರೆ.

ಎನ್‌ಟಿಎಗೆ ಸುಪ್ರೀಂ ಕೋರ್ಟ್‌ನ ನೋಟಿಸ್‌ನ ಕುರಿತು ವಕೀಲ ಜೆ. ಸಾಯಿ ದೀಪಕ್ ಪ್ರತಿಕ್ರಿಯಿಸಿದ್ದು, “ಕೋರ್ಟ್‌ನಲ್ಲಿ ಬಹು ಅರ್ಜಿಗಳನ್ನು ಪಟ್ಟಿ ಮಾಡಲಾಗಿದೆ. ಕೆಲವು ಅರ್ಜಿಗಳನ್ನು ಫಲಿತಾಂಶ ಘೋಷಣೆಗೂ ಮುನ್ನವೇ ಪತ್ರಿಕೆ ಸೋರಿಕೆಯಾಗಿದೆ ಎಂಬ ಆಧಾರದ ಮೇಲೆ ಸಲ್ಲಿಸಲಾಗಿದೆ. ಆ ಅರ್ಜಿಗಳಿಗೆ ಸಂಬಂಧಿಸಿದಂತೆ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಸುದ್ದಿ ಸಂಸ್ಥೆಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ. ಶೈಕ್ಷಣಿಕ ವೇದಿಕೆಯ ಫಿಸಿಕ್ಸ್ ವಾಲಾ ಸಿಇಒ ಅಲಖ್ ಪಾಂಡೆ ಅವರು ಸಾವಿರಾರು ವಿದ್ಯಾರ್ಥಿಗಳ ಸಹಿ ಸಂಗ್ರಹ ಮಾಡಿ ಕೋಟಿಗೆ ಅರ್ಜಿ ಸಲ್ಲಿಸಿದ್ದರು. ಇದರ ಬಗ್ಗೆ ಕೂಡ ಸುಪ್ರೀಂ ಕೋರ್ಟ್ ಮಾತನಾಡಿದೆ.

MBBS ಕೌನ್ಸೆಲಿಂಗ್ ತಡೆ ನೀಡಲು ನಕಾರ
ಇದೇ ವೇಳೆ ವೈದ್ಯಕೀಯ ವಿಷಯಗಳ ಅಂದರೆ ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಯಶಸ್ವಿ ಅಭ್ಯರ್ಥಿಗಳ ಕೌನ್ಸೆಲಿಂಗ್‌ಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸುಪ್ರೀಂ ಕೋರ್ಟ್ ಗೆ ವಿದ್ಯಾರ್ಥಿನಿ ಶಿವಂಗಿ ಮಿಶ್ರಾ ಮತ್ತು ಇತರರು ಸಲ್ಲಿಸಿದ ಅರ್ಜಿಯನ್ನು ಬಾಕಿ ಉಳಿದಿರುವ ಅರ್ಜಿಯೊಂದಿಗೆ ಸೇರಿಸಿದ್ದು, ಈ ಸಂಬಂಧ ಪ್ರತಿಕ್ರಿಯೆಯನ್ನು ಸಲ್ಲಿಸಲು ಎನ್‌ಟಿಎಗೆ ಸೂಚಿಸಿದೆ.

Viral Video: ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಮೃತದೇಹ! ಪೊಲೀಸರು ಮೃತದೇಹ ಮೇಲೆತ್ತಲು ಕೈ ಹಿಡಿದಾಗ ಎದ್ದು ನಿಂತ ವ್ಯಕ್ತಿ!

 

Leave A Reply

Your email address will not be published.