Free Bus Travel: ಶಕ್ತಿ ಯೋಜನೆ ಇನ್ನಿಲ್ಲ! ಸಾರಿಗೆ ಸಚಿವರಿಂದ ಸ್ಪಷ್ಟನೆ!

Free Bus Travel: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ, ಯುವನಿಧಿ ಯೋಜನೆಗಳು ಚಾಲನೆ ಯಲ್ಲಿದ್ದು, ಸರಕಾರದ ಈ ಎಲ್ಲಾ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನತೆಗೆ ಬಹಳಷ್ಟು ಸಹಾಯಕ ವಾಗುತ್ತಿದೆ. ಅದರಲ್ಲೂ ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ ಮೂಲಕ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಇದೀಗ ಉಚಿತ ಬಸ್ ಪ್ರಯಾಣ (Free Bus Travel) ರದ್ದು ಆಗಲಿದೆ ಎಂದು ಸುದ್ದಿ ಆಗಿದ್ದು ಈ ಬಗ್ಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಯಾರಾಗ್ತಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು?! ಈ ಸಲ ಮಹಿಳೆಯ ಮುಡಿಗೇರುತ್ತಾ ‘ಕಮಲ’?!

ಈ ಮೊದಲು ಕೆಲವು ಕಾಂಗ್ರೆಸ್ ನಾಯಕರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬರದಿದ್ದರೆ ಗ್ಯಾರಂಟಿ ಯೋಜನೆ ರದ್ದು ಆಗಲಿದೆ ಎಂದು ತಿಳಿಸಿದ್ದರು. ಅಂತೆಯೇ ಈಗಾಗಲೇ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದ್ದು ಕಾಂಗ್ರೆಸ್ ಕಡಿಮೆ ಸ್ಥಾನಗಳನ್ನು ಗಳಿಸಿದ್ದು, ಸರಕಾರ ರಚಿಸುವಲ್ಲಿ ಸೋಲು ಕಂಡಿದೆ. ಆದ್ದರಿಂದ ಈ ಚುನಾವಣೆ ಫಲಿತಾಂಶ ಐದುಗ್ಯಾರಂಟಿಗಳ ಮೇಲೆ ಪ್ರಭಾವ ಬೀರಲಿದೆ ಎಂಬ ಊಹಾ ಪೋಹಗಳು ಹರಿದಾಡುತ್ತಿವೆ. ಅದರಲ್ಲೂ ಉಚಿತ ಬಸ್ ಪ್ರಯಾಣ (Free Bus Travel) ನೀಡುವ ಶಕ್ತಿ ಯೋಜನೆಯ ಸ್ಥಗೀತದ ಬಗ್ಗೆ ಬಹಳಷ್ಟು ಸುದ್ದಿ ಹರಿದಾಡುತ್ತಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಹೌದು, ಶಕ್ತಿ ಯೋಜನೆಯ ಉಹಾ ಪೋಹದ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಈ ಬಗ್ಗೆ ಟ್ವೀಟ್ ಮಾಡಿದ್ದು, ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗಳನ್ನು ಮತ ಪಡೆಯೋದಕ್ಕಾಗಿ ನೀಡಿಲ್ಲ. ಯಾವುದೇ ಯೋಜನೆಗಳು ಲೋಕಸಭಾ ಚುನಾವಣೆಯವರೆಗೆ ಎಂದು ಕೂಡ ನಿಗದಿ ಮಾಡಿಲ್ಲ. ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ಯನ್ನು ನಿಲ್ಲಿಸುವುದಿಲ್ಲ‌ ಎಂದು ತಿಳಿಸಿದ್ದಾರೆ. ಬಡ ಬರ್ಗದ ಜನರಿಗಾಗಿ ಈ ಯೋಜನೆ ಜಾರಿ ಮಾಡಲಾಗಿದೆ. ಪ್ರತಿಯೊಂದು ಯೋಜನೆಗಳಿಂದ ಬಡ, ಮಧ್ಯಮ ವರ್ಗದವರಿಗೆ ಸಹಾಯ ಆಗಿದೆ, ಗ್ಯಾರಂಟಿ ಯೋಜನೆ ಬಡವರಿಗೆ ತಲುಪುತ್ತಿದೆ ಎಂಬುದನ್ನು ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಸರ್ಕಾರ ಇರುವವರೆಗೂ ಶಕ್ತಿ ಯೋಜನೆ ಇರುತ್ತೆ. ಮುಂದೆಯೂ ಸಹ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆಗಲೂ ಶಕ್ತಿ ಯೋಜನೆ ಇರುತ್ತದೆ ಎನ್ನುವ ಭರವಸೆ ಯನ್ನು ಸಚಿವ ರಾಮಲಿಂಗ ರೆಡ್ಡಿ ನೀಡಿದ್ದಾರೆ.

ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್‌ ದಾಖಲಿಸಲು ಮುಂದಾದ ನಟಿ ಸಪ್ತಮಿ ಗೌಡ

Leave A Reply

Your email address will not be published.