Modi 3.0 Cabinet: ಮೋದಿ ಸಂಪುಟ ಸಚಿವರು ಮತ್ತು ಖಾತೆ ಪಟ್ಟಿ ವಿವರ ಇಲ್ಲಿದೆ; ಕುಮಾರಸ್ವಾಮಿ, ಶೋಭಾ, ಸೋಮಣ್ಣಗೆ ಯಾವ ಖಾತೆ?

Modi 3.0 Cabinet: ನರೇಂದ್ರ ಮೋದಿ ಸಂಪುಟದಲ್ಲಿ ಕರ್ನಾಟಕದಿಂದ ಐವರಿಗೆ ಮಂತ್ರಿ ಸ್ಥಾನ ದೊರಕಿದ್ದು, ಇದರಲ್ಲಿ ಮೂವರಿಗೆ ಕ್ಯಾಬಿನೆಟ್‌ ದರ್ಜೆ ಸಚಿವ ಸ್ಥಾನ ದೊರಕಿದರೆ ಉಳಿದ ಇಬ್ಬರಿಗೆ ರಾಜ್ಯ ಖಾತೆ ದೊರಕಿದೆ.

 

Yuva Rajkumar: “ಏನಾಗಿದೆ ಎಂದು ಚಿತ್ರರಂಗ ಹಾಗೂ ಮಾಧ್ಯಮದ ಅನೇಕರಿಗೆ ತಿಳಿದಿದೆ”-ಯುವ ಪತ್ನಿ ಶ್ರೀದೇವಿ ಭೈರಪ್ಪ ಮೊದಲ ಪ್ರತಿಕ್ರಿಯೆ

ನಿರ್ಮಲಾ ಸೀತಾರಾಮನ್‌, ಧಾರವಾಡದ ಪ್ರಲ್ಹಾದ್‌ ಜೋಶಿ, ಮಂಡ್ಯದ ಎಚ್‌ ಡಿ ಕುಮಾರಸ್ವಾಮಿ ಇವರಿಗೆ ಕ್ಯಾಬಿನೇಟ್‌ ದರ್ಜೆ ಸಚಿವ ಸ್ಥಾನ ದೊರಕಿದರೆ, ಬೆಂಗಳೂರು ಉತ್ತರ ಕ್ಷೇತ್ರದ ಶೋಭಾ ಕರಂದ್ಲಾಜೆ ಹಾಗೂ ತುಮಕೂರು ಕ್ಷೇತ್ರದ ವಿ ಸೋಮಣ್ಣ ಅವರಿಗೆ ರಾಜ್ಯ ಖಾತೆ ಸಚಿವ ಸ್ಥಾನ ದೊರಕಿದೆ. ಕುಮಾರಸ್ವಾಮಿ ಅವರಿಗೆ ಕೃಷಿ ಖಾತೆ ಮಿಸ್‌ ಆಗಿದ್ದು, ಅವರಿಗೆ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಖಾತೆ ದೊರಕಿದೆ. ಇನ್ನು ಕೃಷಿ ಖಾತೆ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ದೊರಕಿದೆ. ನಿರ್ಮಲಾ ಸೀತಾರಾಮನ್‌ ಅವರಿಗೆ ಈ ಬಾರಿ ಕೂಡಾ ಹಣಕಾಸು ಇಲಾಖೆ ನೀಡಲಾಗಿದೆ. ಪ್ರಹ್ಲಾದ್‌ ಜೋಶಿ ಅವರಿಗೆ ಈ ಬಾರಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಲಾಗಿದೆ. ಜೊತೆಗೆ ನವೀಕರಿಸಬಹುದಾದ ಇಂಧನ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಶೋಭಾ ಕರಂದ್ಲಾಜೆ ಅವರಿಗೆ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆ ರಾಜ್ಯ ಖಾತೆ ನೀಡಲಾಗಿದೆ. ಸೋಮಣ್ಣ ಅವರಿಗೆ ಜಲಶಕ್ತಿ ರಾಜ್ಯ ಖಾತೆ ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಖಾತೆ ನೀಡಲಾಗಿದೆ. ಒಟ್ಟಿಗೆ ಎರಡು ಖಾತೆ ಸೋಮಣ್ಣ ಅವರ ಪಾಲಾಗಿದೆ.

ರಾಜ್ಯ ಖಾತೆ ಸಚಿವರ ವಿವರ ಇಲ್ಲಿದೆ;
ವಿ. ಸೋಮಣ್ಣ: ಜಲಶಕ್ತಿ ಮತ್ತು ರೈಲ್ವೆ
ಶೋಭಾ ಕರಂದ್ಲಾಜೆ: ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆ
ತೋಖನ್‌ ಸಾಹು (ಬಿಜೆಪಿ-ಛತ್ತೀಸ್‌ಗಢ)- ವಸತಿ ಮತ್ತು ನಗರಾಭಿವೃದ್ಧಿ
ಸುರೇಶ್‌ ಗೋಪಿ (ಬಿಜೆಪಿ-ಕೇರಳ)- ಸಂಸ್ಕೃತಿ ಮತ್ತು ಪ್ರವಾಸೋದ್ಯಮ
ಹರ್ಷ ಮಲ್ಹೋತ್ರಾ (ಬಿಜೆಪಿ-ದೆಹಲಿ)- ರಾಷ್ಟ್ರೀಯ ಹೆದ್ದಾರಿ ಮತ್ತು ಭೂ ಸಾರಿಗೆ

ಉಳಿದ ಹಾಗೆ ಸಂಪುಟ ದರ್ಜೆ ಸಚಿವರ ಪಟ್ಟಿ ಹಾಗೂ ಅವರ ಖಾತೆಗಳು ಈ ರೀತಿ ಇದೆ;
ಅಮಿತ್ ಶಾ (ಬಿಜೆಪಿ- ಗುಜರಾತ್)- ಗೃಹ ಖಾತೆ
ರಾಜನಾಥ್ ಸಿಂಗ್ (ಬಿಜೆಪಿ- ಉತ್ತರ ಪ್ರದೇಶ)- ರಕ್ಷಣಾ ಖಾತೆ
ನಿತಿನ್ ಗಡ್ಕರಿ (ಬಿಜೆಪಿ- ಮಹಾರಾಷ್ಟ್ರ)- ರಾಷ್ಟ್ರೀಯ ಹೆದ್ದಾರಿ ಮತ್ತು ಭೂ ಸಾರಿಗೆ
ಜೆ.ಪಿ.ನಡ್ಡಾ (ಬಿಜೆಪಿ- ಹಿಮಾಚಲ ಪ್ರದೇಶ)- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ- ಮಧ್ಯಪ್ರದೇಶ )-‌ ಕೃಷಿ‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್
ನಿರ್ಮಲಾ ಸೀತಾರಾಮನ್ (ರಾಜ್ಯಸಭೆ ಬಿಜೆಪಿ ಸದಸ್ಯೆ)- ಹಣಕಾಸು
ಎಸ್.ಜೈ ಶಂಕರ್ (ರಾಜ್ಯಸಭೆ ಬಿಜೆಪಿ ಸದಸ್ಯ)- ವಿದೇಶಾಂಗ ವ್ಯವಹಾರಗಳ ಖಾತೆ
ಮನೋಹರ ಲಾಲ್‌ ಖಟ್ಟರ್‌ (ಬಿಜೆಪಿ- ಹರಿಯಾಣ)- ಇಂಧನ‌ ಮತ್ತು ವಸತಿ
ಎಚ್‌.ಡಿ.ಕುಮಾರಸ್ವಾಮಿ (ಜೆಡಿಎಸ್‌- ಕರ್ನಾಟಕ)- ಉಕ್ಕು ಮತ್ತು ಬೃಹತ್‌ ಕೈಗಾರಿಕೆ
ಪಿಯೂಷ್‌ ಗೋಯಲ್‌ (ಬಿಜೆಪಿ- ಮಹಾರಾಷ್ಟ್ರ )- ವಾಣಿಜ್ಯ
ಧರ್ಮೇಂದ್ರ ಪ್ರಧಾನ್ (ಬಿಜೆಪಿ- ಒಡಿಶಾ): ಶಿಕ್ಷಣ‌, ಮಾನವ ಸಂಪನ್ಮೂಲ
ಜಿತನ್ ರಾಮ್ ಮಾಂಝಿ (ಎಚ್‌ಎಎಂ- ಬಿಹಾರ)- ಸಣ್ಣ ಮತ್ತು ಮಧ್ಯಮ ಕೈಗಾರಿಕೆ
ರಾಜೀವ್‌ ರಂಜನ್‌ ಸಿಂಗ್‌ (ಲಲನ್‌ ಸಿಂಗ್-ಜೆಡಿಯು-ಬಿಹಾರ)
ಸರ್ಬಾನಂದ ಸೋನೊವಾಲ್‌‌ (ಬಿಜೆಪಿ- ಅಸ್ಸಾಂ): ಬಂದರು, ಜಲಸಾರಿಗೆ
ರಾಮ್‌ ಮೋಹನ್‌ ನಾಯ್ಡು (ಟಿಡಿಪಿ-ಆಂಧ್ರಪ್ರದೇಶ)- ನಾಗರಿಕ ವಿಮಾನಯಾನ
ಪ್ರಲ್ಹಾದ್‌ ಜೋಶಿ (ಬಿಜೆಪಿ- ಕರ್ನಾಟಕ): ಆಹಾರ ಮತ್ತು ಗ್ರಾಹಕ ವ್ಯವಹಾರಗಳು, ನವೀಕರಿಸಬಹುದಾದ ಇಂಧನ, ಆಹಾರ ಮತ್ತು ನಾಗರಿಕ ಪೂರೈಕೆ
ಡಾ.ವೀರೇಂದ್ರ ಕುಮಾರ್ (ಬಿಜೆಪಿ-ಮಧ್ಯಪ್ರದೇಶ)- ಸಾಮಾಜಿಕ ನ್ಯಾಯ
ಜುವೆಲ್‌ ಒರಾಮ್‌ (ಬಿಜೆಪಿ- ಒಡಿಶಾ)- ಬುಡಕಟ್ಟು
ಗಿರಿರಾಜ್‌ ಸಿಂಗ್‌ (ಬಿಜೆಪಿ-ಬಿಹಾರ) -‌ ಜವಳಿ
ಅಶ್ವಿನಿ ವೈಷ್ಣವ್‌ (ಬಿಜೆಪಿ-ರಾಜಸ್ಥಾನ-ರಾಜ್ಯಸಭೆ ಸದಸ್ಯ) – ರೈಲ್ವೆ ಮತ್ತು ಮಾಹಿತಿ ಪ್ರಸಾರ
ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ-ಮಧ್ಯಪ್ರದೇಶ)- ಟೆಲಿಕಾಮ್
ಭೂಪೇಂದ್ರ ಯಾದವ್‌ (ಬಿಜೆಪಿ-ರಾಜಸ್ಥಾನ)- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ- ರಾಜಸ್ಥಾನ): ಪ್ರವಾಸೋದ್ಯಮ ಮತ್ತು ಸಂಸ್ಕೃತಿ
ಅನ್ನಪೂರ್ಣ ದೇವಿ (ಬಿಜೆಪಿ-ಜಾರ್ಖಂಡ್)-ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಕಿರಣ್‌ ರಿಜಿಜು (ಬಿಜೆಪಿ- ಅರುಣಾಚಲ ಪ್ರದೇಶ)-‌ ಸಂಸದೀಯ ವ್ಯವಹಾರ
ಹರ್ದೀಪ್ ಸಿಂಗ್ ಪುರಿ (ರಾಜ್ಯಸಭೆ ಬಿಜೆಪಿ ಸದಸ್ಯ-ಪಂಜಾಬ್)- ಪೆಟ್ರೋಲಿಯಂ
ಡಾ.ಮನ್ಸುಖ್‌ ಮಂಡಾವೀಯ (ಬಿಜೆಪಿ-ಗುಜರಾತ್)‌: ಕಾರ್ಮಿಕ ಮತ್ತು ಉದ್ಯೋಗ
ಜಿ.ಕಿಶನ್‌ ರೆಡ್ಡಿ (ಬಿಜೆಪಿ-ತೆಲಂಗಾಣ)- ಕಲ್ಲಿದ್ದಿಲು ಮತ್ತು ಗಣಿಗಾರಿಕೆ
ಚಿರಾಗ್‌ ಪಾಸ್ವಾನ್‌ (ಎಲ್‌ಜೆಪಿ-ಬಿಹಾರ)-‌ ಆಹಾರ ಸಂಸ್ಕರಣೆ
ಸಿ.ಆರ್‌.ಪಾಟೀಲ್‌ (ಬಿಜೆಪಿ-ಗುಜರಾತ್)-ಜಲಶಕ್ತಿ (ಜಲಸಂಪನ್ಮೂಲ)

DK Suresh: ರಾಮನಗರ ಕ್ಷೇತ್ರದ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಡಿಕೆ ಸುರೇಶ್ ಕಣ್ಣೀರು !

 

Leave A Reply

Your email address will not be published.