Kootickal Jayachandran: ದೃಶ್ಯಂ ಸಿನಿಮಾ ನಟನಿಂದ 4 ವರ್ಷದ ಮಗುವಿನ ಮೇಲೆ ಲೈಂಗಿಕ ಕಿರುಕುಳ ಆರೋಪ

ಮಾಲಿವುಡ್‌ ನಟನ ಮೇಲೆ ಕೇಸು ದಾಖಲು

Share the Article

Kootickal Jayachandran: 4 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಾಲಿವುಡ್‌ ನಟರೊಬ್ಬರ ಮೇಲೆ ಕೇಸು ದಾಖಲಾಗಿದೆ.

PM Modi: ಅಧಿಕಾರದ ಮೊದಲ ದಿನವೇ ರೈತರ ಖಾತೆಗೆ 20,000 ಕೋಟಿ ಜಮೆ ಮಾಡಿಸಿದ ಮೋದಿ !!

ಕೇರಳದ ಕೋಝಿಕ್ಕೋಡ್‌ನಲ್ಲಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವು ನಟ ಕೂಟಿಕಲ್‌ ಜಯಚಂದ್ರನ್‌ ವಿರುದ್ಧ ಕೇಳಿ ಬಂದಿದೆ. ಸ್ಥಳೀಯ ಪೊಲೀಸರು ಕೇಸು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.

ತಮ್ಮ ಕುಟುಂಬದೊಳಗಿರುವ ವಿವಾದದ ಲಾಭವನ್ನು ಪಡೆದು ನಟ ತನ್ನ ನಾಲ್ಕು ವರ್ಷದ ಮಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಮಗುವಿನ ತಾಯಿ ದೂರಿನಲ್ಲಿ ಹೇಳಿದ್ದು, ತಾಯಿ ನೀಡಿದ ದೂರಿನ ಆಧಾರದ ಮೇಲೆ ಕಸಬಾ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಈ ಪ್ರಕರಣದ ಕುರಿತು ನಟ ಜಯಚಂದ್ರನ್‌ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. ದೃಶ್ಯಂ ಸಿನಿಮಾ ಸೇರಿ ನಜಾನ್‌ ,ಓರು ಸೆಕೆಂಡ್‌ ಕ್ಲಾಸ್‌ ಯಾತ್ರಾ, ಲಕ್ಷ್ಯಮ್‌, ನಾರದನ್‌, ಮೈಬಾಸ್‌, ಡಿಟೆಕ್ಟಿವ್‌ ಸೇರಿ ಹಲವು ಸಿನಿಮಾದಲ್ಲಿ ಜಯಚಂದ್ರನ್‌ ನಟಿಸಿದ್ದಾರೆ.

Money: ಗುಡ್ ನ್ಯೂಸ್: ನಿಮ್ಮ FD ಗೆ ಯಾವ ಬ್ಯಾಂಕ್ ಹೆಚ್ಚು ಬಡ್ಡಿದರ ನೀಡಲಿದೆ ತಿಳಿಯಬೇಕಾ? ಇಲ್ಲಿದೆ ಪ್ರಮುಖ ಬ್ಯಾಂಕ್‌ಗಳ FD ಬಡ್ಡಿದರ ಲಿಸ್ಟ್ !

Leave A Reply

Your email address will not be published.