Chandan Shetty- Nivdeta Gowda: ಡಿವೋರ್ಸ್‌ ಬಳಿಕ ಚಂದನ್‌-ನಿವೇದಿತಾ ತುರ್ತು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?

Share the Article

Chandan Shetty- Nivdeta Gowda: ಡಿವೋರ್ಸ್‌ ಬಳಿಕ ಸುದ್ದಿಗೋಷ್ಠಿ ನಡೆಸಲು ಮುಂದೆ ಬಂದ ಚಂದನ್‌ ಶೆಟ್ಟಿ-ನಿವೇದಿತಾ ಗೌಡ ಅವರು ಹೇಳಿರುವ ಮುಖ್ಯ ವಿಷಯಗಳ ಕುರಿತು ಇಲ್ಲಿದೆ.

“ಎಲ್ಲರೂ ಕೇಳ್ತಾ ಇದ್ದಾರೆ. ಆ ಒಂದು ಪ್ರಶ್ನೆಗೆ ಕೂಡಾ ಉತ್ತರ ನೀಡಲಿದ್ದೇವೆ. ವದಂತಿಗಳು ಹಬ್ಬಿರುವುದರಿಂದ ಅದು ಜನರಿಗೆ ನಿಜ ಅನ್ನಿಸುವುದರ ಮುನ್ನ ಈ ಪತ್ರಿಕಾಗೋಷ್ಠಿ ಕರೆದಿದ್ದೇವೆ. ಕೆಲವು ವರ್ಷಗಳಿಂದ ನನ್ನ ಜೀವನಶೈಲಿ, ಒಂದು ಆಯಾಮದಲ್ಲಿದ್ದರೆ, ನಿವೇದಿತಾ ಅವರದ್ದೇ ಒಂದು ಜೀವನಶೈಲಿ ಇತ್ತು. ಇಬ್ಬರೂ ಅರ್ಥ ಮಾಡಿಕೊಂಡಿರುವ ಜೀವನದ ಅರ್ಥ ಬೇರೆಯಾಗಿತ್ತು. ಇಬ್ಬರೂ ಹೊಂದಿಕೊಳ್ಳೋಕೆ ಪ್ರಯತ್ನ ಪಟ್ಟೆವು. ಆದರೆ ಸರಿಬರಲಿಲ್ಲ. ನಾವಿಬ್ಬರು ಒಮ್ಮತದಿಂದ ಒಟ್ಟಿಗೆ ನಿರ್ಧಾರ ಮಾಡಿ ನಾವು ಖುಷಿಯಾಗಿರಬೇಕಾದರೆ, ನಾವು ಸಪರೇಟ್‌ ಆದರೆ ಒಳ್ಳೆಯದು ಎಂದು ಡಿಸೈಡ್‌ ಮಾಡಿದ್ದೀವಿ. ಹಾಗಾಗಿ ಇಬ್ಬರೂ ಮ್ಯೂಚ್ಯುವಲ್‌ ಕಂಸೆಂಟ್‌ನಿಂದ ವಿಚ್ಛೇದನ ಪಡೆದಿದ್ದೇವೆ.

ವದಂತಿಗಳಿಗೆ ಫುಲ್‌ಸ್ಟಾಪ್‌ ಇಡೋಣ ಅಂತ ಈ ಸುದ್ದಿಗೋಷ್ಠಿ ಮಾಡಿದ್ದೇವೆ ಎಂದು ಇಬ್ಬರೂ ಈ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ನಿವೇದಿತಾ ಅವರು” ಎಲ್ಲರಿಗೂ ಧನ್ಯವಾದ ಹೇಳಿ, ನಾವು ಕಂಪಾರ್ಟೇಬಲ್‌ ಆಗಿಲ್ಲ ಎನ್ನುವ ಕಾರಣಕ್ಕೆ ಈ ವಿಚ್ಛೇದನ ತಗೊಂಡಿದ್ದೇವೆ ಹೊರತು ಬೇರೆ ಯಾವುದೇ ಕಾರಣವಿಲ್ಲ” ಎಂದು ಹೇಳಿದ್ದಾರೆ.

ವದಂತಿಗಳಿಗೆ ಚಂದನ್‌ ಶೆಟ್ಟಿ ಉತ್ತರ:
ನಿವೇದಿತಾ ನನ್ನ ಬಳಿಯಿಂದ ಜೀವನಾಂಶ ಪಡೆದಿದ್ದಾರೆ ಎಂಬ ವದಂತಿ- ಇದು ಖಂಡಿತ ಸುಳ್ಳು
ಮಕ್ಕಳು ಮಾಡಬೇಕೆನ್ನುವ ಕಾರಣ, ನಿವೇದಿತಾ ಬೇಡ ಅಂತ ಹೇಳಿದ್ಳು -ಇದು ಕೂಡಾ ಸುಳ್ಳು
ಮುಖ್ಯವಾದ ವಿಚಾರ ಏನೆಂದರೆ ಮೂರನೇ ವ್ಯಕ್ತಿಯನ್ನು ಎಳೆದು ತಂದಿದ್ದು, ಆ ವ್ಯಕ್ತಿಯ ಮನೆಗೆ ನಾನು ಹೋಗಿದ್ದೇನೆ. ಅವರ ಫ್ಯಾಮಿಲಿ ಫಂಕ್ಷನ್‌ಗೆ ಕೂಡಾ ನಾನು ಕೂಡಾ ಹೋಗಿದ್ದೇನೆ. ಆ ವ್ಯಕ್ತಿ ಜೊತೆ ನಿವೇದಿತಾ ಅವರ ಹೆಸರನ್ನು ಸೇರಿಸಿ ಹೇಳುವುದು. ಇದೊಂದು ವಿಕೃತಿ. ಇದು ಶೋಭೆ ಅಲ್ಲ.

ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್‌. ನಾನಷ್ಟೇ ಅಲ್ಲ, ಎಲ್ಲರನ್ನೂ ಸೇರಿಸಿ ಫ್ಯಾಮಿಲಿ ಫಂಕ್ಷನ್‌ ಮಾಡ್ತೀವಿ. ಪ್ರತಿವರ್ಷವೂ ಬರ್ತ್‌ಡೇ ವಿಶ್‌ ಮಾಡ್ತಾರೆ, ನಾವೂ ಮಾಡ್ತೀವಿ. ಟ್ರೆಂಡಿಂಗ್‌ ಪದ್ಯ ಹಾಕಿದ ತಕ್ಷಣ ಡಿಸಿಷನ್‌ ತಗೋಬೇಡಿ ಎಂದು ನಿವೇದಿತಾ ಹೇಳಿದರು. ಇಲ್ಲದೇ ಇರೋದನ್ನು ಹೇಳುವುದು ತುಂಬಾ ಹರ್ಟ್‌ ಆಗುತ್ತೆ ಎಂದಿದ್ದಾರೆ.

ಆರು ತಿಂಗಳ ಹಿಂದೆಯೇ ಹೈದರಾಬಾದ್‌ನಲ್ಲಿ ನಿವೇದಿತಾಗೆ ಒಂದು ಹುಡುಗನಿಗೆ ಸಂಬಂಧ ಇದೆ ಇಂತಹ ಮಾತು ಕೇಳಿ ಬಂದಿತ್ತು. ಇದು ಸುಳ್ಳು. ಈ ರೀತಿ ಸುಳ್ಳು ಯಾಕೆ ಹೇಳಿದ್ರು ಎಂದು ಗೊತ್ತಿಲ್ಲ ಎಂದು ಚಂದನ್‌ ಹೇಳಿದ್ದಾರೆ. ಈ ವಿಷಯದ ಕುರಿತು ನಿವೇದಿತಾ ಅವರು ಕೂಡಾ ಬೇಸರ ವ್ಯಕ್ತಪಡಿಸಿದರು.

ಸಿನಿಮಾ ಕಮಿಟ್‌ಮೆಂಟ್‌ ಏನಿದೆ ಅದನ್ನೆಲ್ಲ ಇಬ್ಬರೂ ಖಂಡಿತಾ ಮುಗಿಸ್ತೀವಿ ಎಂದು ಇಬ್ಬರೂ ಪತ್ರಕರ್ತರ ಪ್ರಶ್ನೆಗೆ ಉತ್ತರ ಹೇಳಿದರು.

Leave A Reply