

Missing women: ಕಾಣೆಯಾದ ಮಹಿಳೆ (Missing women) ಒಬ್ಬರು ಮೂರು ದಿನಗಳ ಬಳಿಕ ಹೆಬ್ಬಾವಿನ ಹೊಟ್ಟೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಒಂದು ಬೆಳಕಿಗೆ ಬಂದಿದೆ.
Udupi: ಇಂದು ನರೇಂದ್ರ ಮೋದಿ 3 ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ; ಉಡುಪಿ ಪೇಜಾವರಶ್ರೀಗೆ ಆಹ್ವಾನ
ಹೌದು, ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದೆ. ನಾಲ್ಕು ಮಕ್ಕಳ ತಾಯಿ ಗುರುವಾರ ರಾತ್ರಿ ನಾಪತ್ತೆಯಾಗಿದ್ದ ಹಿನ್ನೆಲೆ ಹುಡುಕಾಟ ಪ್ರಯತ್ನ ನಡೆಸಲಾಗಿದ್ದು, ಕೊನೆಗೆ 16 ಅಡಿಯ ಹೆಬ್ಬಾವು ಒಂದು 45 ವರ್ಷದ ಫರೀದಾ ಅವರನ್ನು ನುಂಗಿರುವುದು ತಿಳಿದು ಬಂದಿದೆ.

ಮಾಹಿತಿ ಪ್ರಕಾರ ಕಾಣೆಯಾದ ಫರೀದಾ ಅವರ ಪತಿ ಮತ್ತು ದಕ್ಷಿಣ ಸುಲವೆಸಿ ಪ್ರಾಂತ್ಯದ ಕಲೆಂಪಂಗ್ ಗ್ರಾಮದ ನಿವಾಸಿಗಳು ಶುಕ್ರವಾರ ಐದು ಮೀಟರ್ (16 ಅಡಿ) ಅಳತೆಯ ರೆಟಿಕ್ಯುಲೇಟೆಡ್ ಹೆಬ್ಬಾವಿನೊಳಗೆ ಮಹಿಳೆಯನ್ನು ಪತ್ತೆ ಮಾಡಿದ್ದಾರೆ. ಸ್ಥಳದಲ್ಲಿ ಆಕೆಗೆ ಸಂಬಂಧಿಸಿದ ವಸ್ತುಗಳು ಕಂಡುಬಂದಾಗ ಪತಿಗೆ ಅನುಮಾನವ ಉಂಟುಮಾಡಿತು. ನಂತರ ಗ್ರಾಮಸ್ಥರು ಆ ಪ್ರದೇಶವನ್ನು ಹುಡುಕಿದರು. ಆಗ ಅವರಿಗೆ ದೊಡ್ಡ ಹೊಟ್ಟೆಯ ಹೆಬ್ಬಾವು ಕಾಣ ಸಿಕ್ಕಿದ್ದು, ಬಳಿಕ ಸ್ಥಳೀಯರು ಹೆಬ್ಬಾವಿನ ಹೊಟ್ಟೆಯನ್ನು ಸಿಗಿದು ನೋಡಿದಾಗ ಈ ವೇಳೆ ಫರೀದಾ ಅವರ ತಲೆ ಗೋಚರಿಸಿದೆ.













