Udupi: ಇಂದು ನರೇಂದ್ರ ಮೋದಿ 3 ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ; ಉಡುಪಿ ಪೇಜಾವರಶ್ರೀಗೆ ಆಹ್ವಾನ

Share the Article

Udupi: ರಾಷ್ಟ್ರಪತಿ ಭವನದಲ್ಲಿ ಇಂದು ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಆಹ್ವಾನ ನೀಡಲಾಗಿದೆ.

7ನೇ ವೇತನ ಆಯೋಗ ಜಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಘೋಷಣೆ !!

ತಡರಾತ್ರಿ ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ಬಂದಿದ್ದು, ಬೆಂಗಳೂರಿನಲ್ಲಿರುವ ಪೇಜಾವರ ಶ್ರೀ ಇಂದು ಬೆಳಗ್ಗೆ 11.30 ಕ್ಕೆ ದೆಹಲಿಗೆ ವಿಮಾನದ ಮೂಲಕ ಹೋಗಲಿದ್ದಾರೆ. ದಾವಣಗೆರೆಯ ಸಮಾಜ ಸೇವಕ ಮತ್ತು ಬಿಜೆಪಿ ಮುಖಂಡ ಡಾ.ನಸೀರ್‌ ಅಹ್ಮದ್‌ ಅವರಿಗೂ ಪಿಎಂಒ ಅಧಿಕೃತ ಆಹ್ವಾನ ನೀಡಿದೆ. ರಾಜ್ಯ ಯೋಜನ ಪ್ರಾಧಿಕಾರದ ಮಾಜಿ ಸದಸ್ಯರಾಗಿರುವ ಡಾ.ನಸೀರ್‌ ಅವರು ಇಂದು ಹುಬ್ಬಳ್ಳಿ ಏರ್‌ಪೋರ್ಟ್‌ ಮೂಲಕ ದೆಹಲಿಗೆ ತೆರಳಲಿದ್ದಾರೆ.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಆಹ್ವಾನ ನೀಡಲಾಗಿದ್ದು, ಆಹ್ವಾನ ಸ್ವೀಕರಿಸಿದ ಖರ್ಗೆ ಅವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗಬೇಕೋ ಬೇಡವೋ ಎಂದು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದಾರೆ.

ಇನ್ನೊಂದೆರೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Lizards: ಈ ಗಿಡಗಳನ್ನು ಮನೆಯಲ್ಲಿ ಬೆಳೆಸಿದರೆ ಹಲ್ಲಿಗಳು ಅತ್ತಕಡೆ ಸುಳಿಯಲ್ಲ!

Leave A Reply

Your email address will not be published.