Rajiv Gandhi Housing Scheme: ಸ್ವಂತ ಮನೆ ಇಲ್ಲದವರಿಗೆ ಸಿಹಿ ಸುದ್ದಿ! ಕೂಡಲೇ ಉಚಿತ ಮನೆಗಾಗಿ ಅರ್ಜಿ ಸಲ್ಲಿಸಿ!
Rajiv Gandhi Housing Scheme: ಕರ್ನಾಟಕ ಸರ್ಕಾರವು ಈಗಾಗಲೇ ಜನರ ಹಿತದೃಷ್ಟಿಯಿಂದ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಬಡವರಿಗೆ ಸ್ವಂತ ಮನೆ ಖರೀದಿಸುವುದು ಒಂದು ದೊಡ್ಡ ಕನಸು ಆಗಿರಬಹುದು. ಆದರೆ ಆರ್ಥಿಕ ಸಮಸ್ಯೆ, ಬಡತನ ಅಥವಾ ಹಲವಾರು ಕಾರಣಗಳಿಂದ ಕೆಲವರಿಗೆ ಮನೆ ಕಟ್ಟಲು ಆಗುವುದಿಲ್ಲ. ಅಂಥವರು ಚಿಂತಿಸಬೇಕಾಗಿಲ್ಲ. ಅದಕ್ಕಾಗಿ ಇದೀಗ ರಾಜೀವ್ ಗಾಂಧಿ ವಸತಿ ಯೋಜನೆಯ (Rajiv Gandhi Housing Scheme) ಮೂಲಕ ವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸಲು ಸಹಾಯ ಮಾಡಲಿದೆ (Free House Loan) . ಹೌದು, ರಾಜೀವ್ ಗಾಂಧಿ ವಸತಿ ಯೋಜನೆಯು ವಸತಿ ರಹಿತ ಮತ್ತು ಆರ್ಥಿಕವಾಗಿ ಹಿಂದುಳಿದ ನಾಗರಿಕರಿಗೆ ಉಚಿತ ವಸತಿ ಒದಗಿಸುವ ಯೋಜನೆ ಆಗಿದೆ.
ಮುಖ್ಯವಾಗಿ ಇದಕ್ಕಾಗಿ 3.5 ಲಕ್ಷ ಹಣ ವನ್ನು ಕೇಂದ್ರ ಸರ್ಕಾರದ ಸಹಾಯಧನ ನೀಡಲಿದ್ದು, ಇನ್ನು 3 ಲಕ್ಷ ರಾಜ್ಯ ಸರ್ಕಾರ ಭರಿಸಲಿದೆ. ಉಳಿದ 1 ಲಕ್ಷ ವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ. ಸದ್ಯ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಪ್ರಧಾನ ಮಂತ್ರಿ ಆವಾಸ್ (ನಗರ) ವಸತಿ ಯೋಜನೆಯಡಿ 52,189 ಮನೆಗಳು ನಿರ್ಮಾಣಗೊಳ್ಳುತ್ತಿವೆ.
ನೀವು ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
* ಪಡಿತರ ಚೀಟಿ
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಬ್ಯಾಂಕ್ ಪಾಸ್ ಪುಸ್ತಕ
* ಮೃತರ ಪ್ರಮಾಣಪತ್ರ
* ಆಧಾರ್ ಕಾರ್ಡ್
ಮೇಲಿನ ದಾಖಲೆಗಳನ್ನು ಸರಿಪಡಿಸಿದ ನಂತರ ರಾಜೀವ್ ಗಾಂಧಿ ವಸತಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು.
ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ವೆಬ್‌ಸೈಟ್‌ಗೆ ಭೇಟಿ ನೀಡಿ:
https://ashraya.karnata ka.gov.in/nannamane/in dex.aspx
ನೀವು ಮೇಲೆ ನೀಡಿರುವ ವೆಬ್‌ಸೈಟ್‌ನಲ್ಲಿ ಕ್ಲಿಕ್ ಮಾಡಿದ ತಕ್ಷಣ, ನಿಮ್ಮಜಿಲ್ಲೆ ನಿಮ್ಮ ತಾಲೂಕು ಮತ್ತು ನಿಮ್ಮ ಹೋಬಳಿ ಆಯ್ಕೆ ಮಾಡಲು ನಿಮಗೆ ಆಯ್ಕೆಗಳು ಸಿಗುತ್ತವೆ. ನಂತರ ನಿವಾಸ ಪ್ರಮಾಣಪತ್ರದ ಆರ್‌ಡಿ ಸಂಖ್ಯೆ ಮತ್ತು ಅರ್ಜಿದಾರರ ಎಲ್ಲಾ ದಾಖಲೆಗಳೊಂದಿಗೆ ನಿಮ್ಮ ಸರಿಯಾದ ದಾಖಲೆಗಳನ್ನು ಸಲ್ಲಿಸುವ ಮೂಲಕ ಅರ್ಜಿಯನ್ನು ಸಲ್ಲಿಸಿ.