Karnataka Rain: ದ.ಕ, ಉಡುಪಿ ಜಿಲ್ಲೆಗೆ ಅಬ್ಬರಿಸಲಿದ್ದಾನೆ ವರುಣ; ಮೀನುಗಾರರಿಗೆ ಎಚ್ಚರಿಕೆ- ಹವಾಮಾನ ಇಲಾಖೆ

ಜೂ.13 ರವರೆಗೆ ಬಿರುಸಾದ ಮಳೆ

Karnataka Rain: ಬಿಸಿಲ ತಾಪದಿಂದ ಬೆಂದಿದ ಜನರು, ಇದೀಗ ಮಳೆರಾಯ ರಾಜ್ಯಕ್ಕೆ ಎಂಟ್ರಿ ನೀಡಿರುವ ಕಾರಣ ನಿಟ್ಟುಸಿರು ಬಿಟ್ಟಿದ್ದಾರೆ. ಇದೀಗ ಉತ್ತಮ ಮಳೆಯಾಗುತ್ತಿದ್ದು, ಇವತ್ತು ದ.ಕ, ಉಡುಪಿ ಸೇರಿ ರಾಜ್ಯದ 17 ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೌದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಜೊತೆಗೆ ಹವಾಮಾನ ಇಲಾಖೆ ಬಿರುಸಿನ ಮಳೆಯ ಎಚ್ಚರಿಕೆ ಕೂಡಾ ನೀಡಿದೆ.

Rajiv Gandhi Housing Scheme: ಸ್ವಂತ ಮನೆ ಇಲ್ಲದವರಿಗೆ ಸಿಹಿ ಸುದ್ದಿ! ಕೂಡಲೇ ಉಚಿತ ಮನೆಗಾಗಿ ಅರ್ಜಿ ಸಲ್ಲಿಸಿ!

ಇಂದಿನಿಂದ ಜೂನ್‌ 13 ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕರಾವಳಿಯಲ್ಲಿ ಚಂಡಮಾರುತದ ವಾತಾವರಣ ಇರಲಿದ್ದು, ಗಾಳಿ 45 ರಿಂದ 65 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗೆನೇ ಮೀನುಗಾರರು ಈ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

17 ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳಿಗೆ (ಉಡುಪಿ ಸೇರಿ) ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ನೀಡಿದೆ. ದಕ್ಷಿಣ ಕನ್ನಡ, ಬಾಗಲಕೋಟೆ, ಗದಗ ಸೇರಿ ಹನ್ನೆರಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ್ನು ಹವಾಮಾನ ಇಲಾಖೆ ನೀಡಿದೆ.

Puttur: ಪಥ ಬದಲಿಸಿದ ಕಾಡಾನೆ : ಕುಚ್ಚೆಜಾಲಿನಲ್ಲಿ ಕೃಷಿ ಹಾನಿಗೈದು ಸವಣೂರಿಗೆ ಎಂಟ್ರಿ !

Leave A Reply

Your email address will not be published.