Dakshina Kannada arantodu: ರಸ್ತೆ ಬದಿ ಮಲಗಿದ್ದ ಜಾನುವಾರುಗಳಿಗೆ ಅಮುಲು ಇಂಜೆಕ್ಷನ್ ನೀಡಿ ಸಾಗಾಟ-ಸಿಸಿಟಿವಿಯಲ್ಲಿ ದೃಶ್ಯ ಸೆರೆ
Dakshina Kannada arantodu: ರಾತ್ರಿ ವೇಳೆ ರಸ್ತೆ ಬದಿ ಮಲಗಿದ್ದ ದನಗಳಿಗೆ ಅಮಲು ಇಂಜೆಕ್ಷನ್ ನೀಡಿ ದುಷ್ಕರ್ಮಿಗಳು ಸ್ಕಾರ್ಪಿಯೋ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡಲೆತ್ನಿಸಿದ್ದು, ಈ ದೃಶ್ಯ ಸ್ಥಳೀಯರೊಬ್ಬರ ಮನೆಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಜೂ.7 ರಂದು ದ.ಕ.ಸಂಪಾಜೆ ಗ್ರಾಮದ ಗಡಿಕಲ್ಲಿನಲ್ಲಿ ರಾತ್ರಿ ಸಂಭವಿಸಿದೆ.
Lakshmi Signs: ಈ 4 ದೃಶ್ಯ ಮುಂಜಾನೆ ನೀವು ನೋಡಿದರೆ ನಿಮ್ಮ ಪಾಲಿಗೆ ಅದೃಷ್ಟ ಲಕ್ಷ್ಮೀ ಒಳಿಯುವಳು!
ಜೂ.7 ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸುಳ್ಯ ಭಾಗದಿಂದ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಕೆಲ ವ್ಯಕ್ತಿಗಳು ರಸ್ತೆಯ ಬದಿ ಮಲಗಿದ್ದ ದನಗಳ ಪೈಕಿ ಎರಡು ದನಗಳಿಗೆ ಅಮಲು ಬರುವ ಇಂಜೆಕ್ಷನ್ ಕೊಟ್ಟು ನಂತರ ತಮ್ಮ ವಾಹನದಲ್ಲಿ ಬಲವಂತವಾಗಿ ತುಂಬಿಸಿ ಸುಳ್ಯ ಕಡೆಗೆ ತೆರಳಿರುವ ಘಟನೆ ನಡೆದಿದೆ.
ದನಗಳು ಮಲಗಿದ್ದ ಸ್ಥಳದಲ್ಲಿ ಎರಡು ಲಾರಿಗಳು ನಿಂತಿದ್ದು, ದುಷ್ಕರ್ಮಿಗಳು ಲಾರಿಗಳ ಮಧ್ಯೆ ತಮ್ಮ ಸ್ಕಾರ್ಫಿಯೋ ವಾಹನವನ್ನು ನಿಲ್ಲಿಸಿ, ದನಗಳನ್ನು ತುಂಬಿಸಿ ಪರಾರಿಯಾಗಿದ್ದಾರೆ.
ಈ ಘಟನೆಯ ದೃಶ್ಯ ಅನ್ವರ್ ಎಂಬುವವರ ಮನೆಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Bus Fare Hike: ಸರಕಾರಿ ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್; ಶೀಘ್ರದಲ್ಲೇ ಬಸ್ ಪ್ರಯಾಣ ದರ ಏರಿಕೆ;