Ayodhya Result 2024: ಅಯೋಧ್ಯೆಯಲ್ಲಿ BJP ಗೆ ಹೀನಾಯ ಸೋಲು, ವೀರೇಂದ್ರ ಹೆಗ್ಗಡೆ ಕೊಟ್ಟ ಚೊಂಬೇ ಅದಕ್ಕೆ ಕಾರಣವಾದದ್ದೇ ರೋಚಕ !

Ayodhya Result 2024: ಚಾರ್‌ಸೋ ಪಾರ್‌ ಅಂತಿದ್ದ ಮೋದಿ (PM Narendra modi) ನೇತೃತ್ವದ ಎನ್‌ಡಿಎ ಮೈತ್ರಿಕೂಟ (NDA Alliance) ಲೋಕಸಭೆ ಫಲಿತಾಂಶದಲ್ಲಿ ಜಾರಿ ಬಿದ್ದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ 300ರ ಗಡಿ ದಾಟಿದ್ದ ಬಿಜೆಪಿ ಪಕ್ಷ ಈ ಸಲ ಸರಳ ಬಹುಮತ 272 ಸೀಟನ್ನೂ ಪಡೆಯೋಕೆ ಆಗದೆ ಅತಂತ್ರ ಸ್ಥಿತಿಗೆ ತಲುಪಿದೆ. ಬಿಜೆಪಿಗೆ ಬಹುಮತ ಬಾರದೆ ಹೋದರೂ ಎನ್ ಡಿ ಎ ಆಡಳಿತ ಚುಕ್ಕಾಣಿ ಹಿಡಿಯುವುದು ನಿಜವಾದರೂ ಬಿಜೆಪಿಯ ಗರ್ವ ಭಂಗವಾಗಿರುವುದು ಮಾತ್ರ ಸತ್ಯ. ಅಷ್ಟೇ ಅಲ್ಲದೆ ಅಯೋಧ್ಯ ದೇವಾಲಯವನ್ನು ಹೊಂದಿರುವ ಪೈಜಾಬಾದ್ ಲೋಕಸಭಾ ಸ್ಥಾನದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ ಬಿಜೆಪಿಯನ್ನೇ ಕೆಡವಿ ಬಿಟ್ಟಿದೆ ಕಾಂಗ್ರೆಸ್. ಅದಕ್ಕೆ ಕಾರಣ ಧರ್ಮಸ್ಥಳದ ಧರ್ಮಾಧಿಕಾರಿ ಬಿರುದಾಂಕಿತ ವೀರೇಂದ್ರ ಹೆಗ್ಗಡೆ ಕೊಟ್ಟ ಬೆಳ್ಳಿ ಚೆಂಬು ಎಂಬುದೇ ತುಂಬಾ ಸೋಜಿಗದ ಮತ್ತು ರೋಚಕ ಸಂಗತಿಯಾಗಿದೆ.

NDA Parliamentary Leader: ಎನ್‌ಡಿಎ ಸಂಸದೀಯ ನಾಯಕರಾಗಿ ಪ್ರಧಾನಿ ಮೋದಿ ಅವರು ಅವಿರೋಧವಾಗಿ ಆಯ್ಕೆ

ಎಲ್ಲರಿಗೂ ತಿಳಿದಿರುವಂತೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಬಿಜೆಪಿ ಪಕ್ಷವು ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದರೂ ಅಲ್ಲಿ ಬಿಜೆಪಿಯ ಅಭ್ಯರ್ಥಿ ಲಲ್ಲೂ ಸಿಂಗ್ ಪಲ್ಟಿ ಹೊಡೆದಿದ್ದಾರೆ. ಅಯೋಧ್ಯೆ ಒಳಗೊಳ್ಳುವ ಪೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಸಿಂಗ್ ರು ಬಿಜೆಪಿ ಅಭ್ಯರ್ಥಿ ಲಲ್ಲೂ ಸಿಂಗ್ ರನ್ನು ಸೋಲಿಸಿದ್ದಾರೆ. ಇದಕ್ಕೆ ವೀರೇಂದ್ರ ಹೆಗ್ಗಡೆ ಕೊಟ್ಟ ಬೆಳ್ಳಿ ಚೊಂಬು ಕಾರಣ !!

ಹೌದು, ಅಯೋಧ್ಯೆಯ ಶ್ರೀ ಬಾಲ ರಾಮನ ದೇವಸ್ಥಾನದಲ್ಲಿ ಶ್ರೀ ರಾಮನಿಗೆ ಅಭಿಷೇಕ ಮಾಡಲು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬೆಳ್ಳಿಯ ಚೊಂಬು ಕೊಟ್ಟಿದ್ದರು. ಹಲವು ಕೇಸುಗಳನ್ನು ಮೈಮೇಲೆ ಹೊತ್ತು ಕೊಂಡಿರುವ ಕಳಂಕಿತ ವ್ಯಕ್ತಿತ್ವದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕೊಟ್ಟ ಬೆಳ್ಳಿ ಚೊಂಬನ್ನು ಶ್ರೀ ರಾಮನ ಅಭಿಷೇಕಕ್ಕೆ ಬಳಸಬಾರದು ಎಂದು ಸೌಜನ್ಯ ಪರ ಹೋರಾಟಗಾರರು ಕೂಗು ಹಾಕಿ ಬೇಡಿಕೆ ಇಟ್ಟಿದ್ದರು. ಆದರೆ ಭ್ರಮಿತ ಬಿಜೆಪಿ ಯಾವುದನ್ನು ತಲೆಗೆ ಹಾಕಿಕೊಂಡಿರಲಿಲ್ಲ. ಇದೀಗ ಶ್ರೀ ರಾಮನ ಜನ್ಮಸ್ಥಳ ಸ್ವತಹ ಅಯೋಧ್ಯೆಯಲ್ಲಿ ರಾಮನ ದೇವಾಲಯ ಕಟ್ಟಿದ ಊರಿನಲ್ಲಿ ಬಿಜೆಪಿಯನ್ನು ಸೋಲಿಸಲಾಗಿದೆ. ಆ ಸೋಲಿಗೆ ಬೆಳ್ಳಿ ಚೊಂಬು ಕಾರಣ ಎನ್ನುವ ಚರ್ಚೆಗಳು ಶುರುವಾಗಿವೆ. ಸೌಜನ್ಯ ಶಾಪಕ್ಕೆ ಅಯೋಧ್ಯೆಯ ಬಿಜೆಪಿ ಕೂಡಾ ಬಲಿಯಾಗಿದೆ.

ರಾಮಜನ್ಮಭೂಮಿಯಲ್ಲಿ ಮಾತ್ರವಲ್ಲ, ಹನುಮ ಕ್ಷೇತ್ರದಲ್ಲೂ ಬಿಜೆಪಿಗೆ ಸೋಲು:
ಅಷ್ಟೇ ಅಲ್ಲ ಉತ್ತರ ಪ್ರದೇಶದಲ್ಲಿ (Ayodhya) ಬಿಜೆಪಿ ಎಲ್ಲಾ ನಿರೀಕ್ಷೆಗಳು ತಲೆಕೆಳಗಾಗಿ ಹೋಗಿದೆ. 2019ರಲ್ಲಿ ಒಟ್ಟು 80 ಲೋಕಸಭಾ ಸ್ಥಾನಗಳ ಪೈಕಿ 62 ಸ್ಥಾನದಲ್ಲಿದ್ದ ಬಿಜೆಪಿ ಇವತ್ತು ಉತ್ತರ ಪ್ರದೇಶದಲ್ಲಿ 36 ಸ್ಥಾನಕ್ಕೆ ಕುಸಿದಿದೆ. ರಾಮನ ಕ್ಷೇತ್ರದಲ್ಲಿ ಈ ರೀತಿಯಾಗಿರುವುದು ಜೊತೆಗೆ ರಾಮನ ಪರಮ ಭಕ್ತ ಹನುಮಂತನ ಕ್ಷೇತ್ರದಲ್ಲಿಯೂ ಕೂಡ ಬಿಜೆಪಿ ಮಲಗಿದೆ.

ಕೊಪ್ಪಳ ಜಿಲ್ಲೆ ಹನುಮ ಜನ್ಮಭೂಮಿ. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ ರಾಜಶೇಖರ್ ಹಿಟ್ನಾಳ್ ಗೆ 6,63,511 ಮತ ಪಡೆದು ಬಿಜೆಪಿ ಅಭ್ಯರ್ಥಿ 6,17,154 ಮತ ಗಳಿಸಿದ ಬಸವರಾಜ ಕೆ.ಶರಣಪ್ಪರಿಂದ 46,357 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಾಗಿದೆ. ಹಿಂದುತ್ವ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಅಂಜನಾದ್ರಿ ಕೊಪ್ಪಳ ಕ್ಷೇತ್ರದಲ್ಲಿದ್ದು, ಚುನಾವಣೆಯಲ್ಲಿ ಬಿಜೆಪಿ ಹನುಮ ಜನ್ಮ ಸ್ಥಳ ಅಭಿವೃದ್ದಿಯ ಅಜೆಂಡಾ ಇಟ್ಟುಕೊಂಡಿತ್ತು. ಬಿಜೆಪಿ ಅಧಿಕಾರದಲ್ಲಿ ಅಂಜನಾದ್ರಿ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ, ಮತದಾರ ಬಿಜೆಪಿ ತಿರಸ್ಕಾರ ಮಾಡಿದ್ದಾರೆ. ಅಂಜನಾದ್ರಿ ಅಭಿವೃದ್ದಿಗಾಗಿ ಯಡಿಯೂರಪ್ಪ 20 ಕೋಟಿ ರೂಪಾಯಿ, ಬೊಮ್ಮಾಯಿ ಸರ್ಕಾರದಲ್ಲಿ 100 ಕೋಟಿ ರೂಪಾಯಿ ಘೋಷಣೆ ಮಾಡಿತ್ತು. ಆದರೆ ಘೋಷಣೆ ಕೇವಲ ಘೋಷಣೆಯಾಗಿ ಉಳಿದಿತ್ತು. ಹಣ ಬಿಡುಗಡೆಯಾಗಲೇ ಇಲ್ಲ.

New Male Birth Control Gel: ಇನ್ಮೇಲೆ ಗರ್ಭಧಾರಣೆ ತಡೆಯುವ ಚಿಂತೆಯಿಲ್ಲ: ಅನಾವಶ್ಯಕ ಗರ್ಭಧಾರಣೆ ತಡೆಯಲು ಲಭ್ಯವಾಗಲಿದೆ ಈ ಜೆಲ್!

Leave A Reply

Your email address will not be published.