Home Interesting Snake Repellent Plants: ಈ ಗಿಡ ನೆಟ್ಟು ನೋಡಿ! ಮನೆಯಂಗಳದಲ್ಲಿ ಒಂದೇ ಒಂದು ಹಾವು ಕೂಡ...

Snake Repellent Plants: ಈ ಗಿಡ ನೆಟ್ಟು ನೋಡಿ! ಮನೆಯಂಗಳದಲ್ಲಿ ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯಲ್ಲ!

Snake Repellent Plants

Hindu neighbor gifts plot of land

Hindu neighbour gifts land to Muslim journalist

Snake Repellent Plants: ಮನೆ ಸುತ್ತಲಿನ ಗಾರ್ಡನ್ ನಲ್ಲಿ ಕಾಲ ಕಳೆಯಲು ನಿಮಗೆ ಇಷ್ಟ ಇರಬಹುದು ಆದ್ರೆ ಕೆಲವರಿಗೆ ಹಾವುಗಳ ಭಯ ಇರುತ್ತೆ. ಹೌದು, ಕೆಲವೊಂದು ಹಾವುಗಳು ಕಚ್ಚಿದರೆ ಮನುಷ್ಯ ಜೀವಂತ ಉಳಿಯಲು ಕಷ್ಟಕರ. ಇನ್ನು ಮಳೆಗಾಲದಲ್ಲಿ ಹಾವುಗಳು ಮತ್ತು ವಿಷಕಾರಿ ಕೀಟಗಳ ಅಪಾಯ ಹೆಚ್ಚು. ವಿಶೇಷವಾಗಿ ಈ ಅವಧಿಯಲ್ಲಿ, ವಿಷಕಾರಿ ಹಾವುಗಳು ಹೆಚ್ಚು ಸಂಚಾರದಲ್ಲಿರುತ್ತವೆ. ಕೆಲವೊಮ್ಮೆ ಅವು ಮನೆಯೊಳಗೂ ಕಾಣಿಸುತ್ತವೆ.

ಅಂತಹ ಸಂದರ್ಭದಲ್ಲಿ ಹಾವುಗಳನ್ನು ಓಡಿಸಲು ನಾನಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದರೆ ನಿಮ್ಮ ಗಾರ್ಡನ್’ನಲ್ಲಿ ಕೆಲವೊಂದು ಗಿಡಗಳನ್ನು ಬೆಳೆಸಿದರೆ ಹಾವುಗಳು ಅತ್ತಕಡೆ ಬರದಂತೆ ತಡೆಯಬಹುದು. ಹಾವುಗಳಿಗೆ ಇಷ್ಟವಾಗದ ಗಿಡಗಳು (Snake Repellent Plants) ನಿಮ್ಮ ತೋಟದಲ್ಲಿ ಬೆಳೆಸಿ ಇವುಗಳ ವಾಸನೆಯಿಂದ ಹಾವುಗಳು ದೂರ ಓಡುತ್ತವೆ.

ಹೂಲಿ ಗಿಡ: ಈ ಗಿಡವನ್ನು ಹಾವು ನಿವಾರಕ ಸಸ್ಯ ಎಂದೇ ಕರೆಯಲಾಗುತ್ತದೆ. ಕಡಿಮೆ ಎತ್ತರದಲ್ಲಿ ಬೆಳೆಯುವ ಈ ಗಿಡ ಗಾರ್ಡನ್’ನಲ್ಲಿ ಬೆಳೆಸಿ. ಇದನ್ನು ಹೆಚ್ಚಾಗಿ ರೈತರು ತಮ್ಮ ಹೊಲದಲ್ಲಿ ಈ ಗಿಡವನ್ನು ಬೆಳೆಸುತ್ತಾರೆ. ಆದರೆ ತಿಂಗಳಿಗೊಮ್ಮೆಯಾದರೂ ಗಿಡವನ್ನು ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಎಲೆಗಳು ಇಡೀ ಅಂಗಳದಲ್ಲಿ ಹರಡಬಹುದು.

ಚೆಂಡು ಹೂವು: ಫ್ರೆಂಚ್ ಮತ್ತು ಅಮೇರಿಕನ್ ಚೆಂಡು ಹೂವು ಬಲವಾದ ವಾಸನೆಯನ್ನು ಹೊಂದಿರುತ್ತವೆ. ಕೆಂಪು, ಹಳದಿ ಮತ್ತು ಕಿತ್ತಳೆ ಬಣ್ಣಗಳನ್ನು ಹೊಂದಿರುವ ಚೆಂಡು ಹೂವಿನ ಗಿಡಗಳನ್ನು ಬೆಳೆಸಿದರೆ, ಹಾವುಗಳು ಅತ್ತಕಡೆ ಬರಲ್ಲ.

ಇದನ್ನೂ ಓದಿ: ಆವತ್ತು ಕಾಲೇಜು ಬಿಟ್ಟು, ಅಪ್ರಾಪ್ತ ವಯಸಲ್ಲೇ ಕನ್ಯತ್ವ ಕಳೆದು ಸ್ಟಾರ್ ನಟಿಯಾಗಿರುವ ಬ್ಯೂಟಿ ಯಾರು ಗೊತ್ತಾ? 

ಬೆಳ್ಳುಳ್ಳಿ: ಬೆಳ್ಳುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಸಲ್ಫೋನಿಕ್ ಆಮ್ಲವನ್ನು ಹೊಂದಿರುತ್ತದೆ. ಹಾವುಗಳಿಗೆ ಈ ವಾಸನೆ ಇಷ್ಟವಾಗುವುದಿಲ್ಲ. ಆದ್ದರಿಂದ ಮನೆಯಂಗಳದಲ್ಲಿ ಇದನ್ನು ಬೆಳೆಸಿದರೆ ಹಾವುಗಳು ಬರಲ್ಲ.

ಲೆಮೆನ್ ಗ್ರಾಸ್: ಇದರ ವಾಸನೆ ನಿಂಬೆಯನ್ನು ಹೋಲುತ್ತದೆ. ಇದೊಂದು ರೀತಿಯ ಹುಲ್ಲು ಆಗಿದ್ದು, ಶ್ರೀಲಂಕಾ ಮತ್ತು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಹುಲ್ಲಿನ ಸಿಟ್ರಸ್ ಪರಿಮಳವು ಹಾವುಗಳು ಬಾರದಂತೆ ತಡೆಯುತ್ತದೆ.

ಸರ್ಪಗಂಧದ: ಸರ್ಪಗಂಧದ ಗಿಡವೂ ಹಾವುಗಳನ್ನು ಓಡಿಸುತ್ತೆ. ಇದನ್ನು ಮಡಕೆಯಲ್ಲಿ ಅಥವಾ ನೆಲದಲ್ಲಿ ನೆಡಬಹುದು. ಈ ಗಿಡದ ವಾಸನೆ ತುಂಬಾ ಕಟುವಾಗಿದ್ದು ಹಾವುಗಳು ಹತ್ತಿರ ಸುಳಿಯುವುದಿಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಪುರುಷತ್ವ ಸಾಮರ್ಥ್ಯ ಪರೀಕ್ಷೆ; ಕೋರ್ಟ್‌ ಒಪ್ಪಿಗೆ