NOTA: ಧರ್ಮಸ್ಥಳದ ದಿ. ಸೌಜನ್ಯಾಳಿಗೆ 20 ಸಾವಿರಕ್ಕೂ ಅಧಿಕ ಮತ !! ನ್ಯಾಯದ ಹೋರಾಟಕ್ಕೆ ದ.ಕ ದಲ್ಲಿ ಅಭೂತಪೂರ್ವ ಬೆಂಬಲ
NOTA: ಸುಮಾರು 12 ವರ್ಷಗಳ ಹಿಂದೆ ಅನುಮಾನಸ್ಪದವಾಗಿ ಅತ್ಯಾಚಾರಕ್ಕೊಳಗಾಗಿ, ಅತ್ಯಂತ ದಾರುಣವಾಗಿ ಸಾವನ್ನಪ್ಪಿದ ಧರ್ಮಸ್ಥಳದ ಸೌಜನ್ಯಳಿಗೆ ನ್ಯಾಯ ಸಿಗಬೇಕೆಂಬ ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ. ಅದು ಲೋಕಸಭಾ ಚುನಾವಣೆಗೂ ಬಿಸಿ ಮುಟ್ಟಿಸಿದೆ. ಅಂದರೆ ಈ ನ್ಯಾಯಯುತ ಹೋರಾಟಕ್ಕೆ ದ.ಕ ಜನ ಅಭೂತಪೂರ್ವ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ: Parliment Election : ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಡೆದದ್ದೇನು? ಕಳೆದುಕೊಂಡದ್ದು ಏನನ್ನು?!
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ನಡುವೆ ಮಗಳು ಸೌಜನ್ಯ ಕೂಡ ಗೆಲುವಿನ ನಗೆ ಬೀರಿದ್ದಾಳೆ. ತನ್ನ ಪರವಿರುವ ತನ್ನೂರ ಜನರ ಕಂಡು ಒಮ್ಮೆ ನಿರಾಳವಾಗಿದ್ದಾಳೆ. ಹೌದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ವೇಳೆ ಪಕ್ಷಗಳ ಮತಬೇಟೆಯ ಜೊತೆ ಧರ್ಮಸ್ಥಳದಲ್ಲಿ(Dramasthala) ಕೊಲೆಯಾದ ದಿ.ಸೌಜನ್ಯಾ(Sowjanya)ಪರವಾದ ಕ್ಯಾಂಪೇನ್ ಕೂಡಾ ಜೋರಾಗಿ ನಡೆದಿತ್ತು. ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ನೋಟಾಗೆ(NOTA) ಮತ ಹಾಕುವಂತೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ(Mahesh Shetty Timarodi) ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಕ್ಯಾಂಪೇನ್ ಮಾಡಲಾಗಿತ್ತು. ಈ ಕ್ಯಾಂಪೇನ್ ಗೆ ಭರ್ಜರಿ ಸ್ಪಂದನ ಸಿಕ್ಕಿದೆ.
ಇದನ್ನೂ ಓದಿ: Karnataka : ರಾಜ್ಯದ ಈ 4 ಕ್ಷೇತ್ರಗಳಿಗೆ ಉಪ ಚುನಾವಣೆ !!
ಹೌದು, ಮಧ್ಯಾಹ್ನ 2 ಗಂಟೆ ಸುಮಾರಿಗೆ ನೋಟಾ ಸುಮಾರು 20 ಸಾವಿರ ಮತಗಳು ಬಂದಿವೆ. ಇದು ನಿಜಕ್ಕೂ ದೊಡ್ಡ ಬೆಂಬಲವೇ ಎನ್ನಬಹುದು. ಯಾಕೆಂದರೆ ಹಿಂದುತ್ವದ ಕೋಟೆ ಎನಿಸಿರುವ, ಮೋದಿ ಅಲೆ ಪ್ರಬಲವಾಗಿರುವ ದ.ಕ ದಲ್ಲಿ ಜನ ಎಲ್ಲಾ ರೀತಿಯ ಭಾವನಾತ್ಮಕ ವಿಚಾರವನ್ನೂ, ರಾಜಕೀಯ ಮಿಳಿತವನ್ನು ಬದಿಗೊತ್ತಿ ಸೌಜನ್ಯಳಿಗೆ ನ್ಯಾಯಸಿಗಬೇಕೆಂದು ತಮ್ಮ ಅಮೂಲ್ಯವಾದ ಮತವನ್ನು ನೋಟಾಗೆ ಹಾಕಿ ಬೆಂಬಲಿಸಿದ್ದಾರೆ. ಈ ಮೂಲಕ ಬೆಳ್ತಂಗಡಿಯ ಜನ ಸೌಜನ್ಯಾ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿದ್ದಾರೆ.