P M Modi: ಫಲಿತಾಂಶ ಹೊರಬೀಳುತ್ತಿದ್ದಂತೆ ಮೋದಿ ಮಾಡೋದೇನು?! ಇಲ್ಲಿದೆ ನೋಡಿ ಪ್ರಧಾನಿಯವರ ಸೂಪರ್ ಪ್ಲಾನ್ !!

P M Modi: ದೇಶದ ಜನ ಕಾತರರಾಗಿ ಕಾದಿದ್ದ ದಿನ ಇಂದು ಎದುರಾಗಿದೆ. ದೇಶದ ಮುಂದಿನ 5 ವರ್ಷಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಆದರೆ ಈಗಾಗಲೇ ಚುನಾವಣಾ ಸಮೀಕ್ಷೆಗಳು ನರೇಂದ್ರ ಮೋದಿಯವರೇ ಮುಂದಿನ ಪ್ರಧಾನಿ ಎಂದು ಘೋಷಿಸಿವೆ. ಹೀಗಾಗಿ ಫಲಿತಾಂಶ ಬಂದ ಬಳಿಕ ಏನು ಮಾಡಬೇಕೆಂದು ಮೋದಿ(PM Modi) ಈಗಲೆ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹೌದು, ಮೋದಿ ಇಂದು ಜಯಗಳಿಸಿದರೆ, ಬಿಜೆಪಿ(BJP) ಭರ್ಜರಿ ಬಹುಮತ ಪಡೆದರೆ ಎಲ್ಲರ ನೆಚ್ಚಿನ ‘ನಮೋ’ ಹ್ಯಾಟ್ರಿಕ್ ಭಾರಿಸಲಿದ್ದಾರೆ. ಹೀಗಾಗಿ ಮುಂಚಿತವಾಗೇ ಗೆಲುವಿನ ಸುಳಿವು ಸಿಕ್ಕಿದ ಕಾರಣ ಮೋದಿಯವರು ಮುಂದಿನ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಮುಂದಿನ 125 ದಿನಗಳ ಪ್ಲ್ಯಾನ್‌ನೊಂದಿಗೆ ನಮೋ ಸಿದ್ಧವಾಗಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಅವರು ಕಾರ್ಯ ಪ್ರವೃತ್ತರಾಗಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಿದ್ರೆ ಏನದು ಮೋದಿ ಪ್ಲಾನ್?

ಏನು ಮೋದಿ ಪ್ಲಾನ್?

* ಮೋದಿ ಮುಂದಿನ 125 ದಿನಗಳಲ್ಲಿ ಏನು ಮಾಡಬೇಕೆಂದು ಯೋಜನೆ ಸಿದ್ದಪಡಿಸಿದ್ದಾರೆ.

* ಪ್ರಧಾನಿ ನರೇಂದ್ರ ಮೋದಿಯವರು ಗೆದ್ದರೆ ಜೂನ್ 9 ರಂದು ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆಗಳಿವೆ.

* ಐತಿಹಾಸಿಕ ಹ್ಯಾಟ್ರಿಕ್ ಸಾಧನೆ ಹಿನ್ನೆಲೆಯಲ್ಲಿ ಈ ಬಾರಿ ಅದ್ಧೂರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಪ್ಲ್ಯಾನ್‌ ಇದೆ.

* ಪ್ರಧಾನಿಯಾಗಿ ಮತ್ತೆ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಕ್ಯಾಬಿನೆಟ್ ರಚನೆ ಮಾಡಲಿದ್ದಾರೆ.

* ಕ್ಯಾಬಿನೆಟ್ ಬೆನ್ನಲ್ಲೇ ಇಟಲಿಗೆ ಮೊದಲ ವಿದೇಶಿ ಪ್ರವಾಸ ಮಾಡಲಿದ್ದಾರೆ.

* ಇಟಲಿಯಲ್ಲಿ ನಡೆಯಲಿರುವ G7 ಮೀಟಿಂಗ್ ನಲ್ಲಿ ಮೋದಿ ಭಾಗಿಯಾಗಲಿದ್ದಾರೆ.

* ವಾಪಾಸ್ ಆದ ಬಳಿಕ 125 ದಿನಗಳ ಕಾರ್ಯಸೂಚಿ ಅನುಷ್ಠಾನ ಮಾಡಲಿದ್ದಾರೆ.

* ಈ ಬಾರಿ ದಕ್ಷಿಣ ಭಾರತಕ್ಕೆ ವಿಶೇಷ ಒತ್ತು ಕೊಡುವ ಸಾಧ್ಯತೆ ಇದ್ದು, ಸಂಘಟನೆ ದೃಷ್ಟಿಯಿಂದಲೂ ಕೇರಳ, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣಕ್ಕೆ ವಿಶೇಷ ಒತ್ತು ನೀಡಬಹುದು.

Leave A Reply

Your email address will not be published.