Parliment Election : 543 ಕ್ಷೇತ್ರಗಳಲ್ಲಿ ಪ್ರಫ್ರಥಮವಾಗಿ 1 ಸೀಟು ಗೆದ್ದ ಬಿಜೆಪಿ- ಯಾರದು ?!
Parliment Election : 2024 ಲೋಕಸಭಾ ಚುನಾವಣೆಯ ಕೌಂಟಿಂಗ್ ಶುರುವಾಗಿದೆ. ಅಭ್ಯರ್ಥಿಗಳಲ್ಲಿ ಹಾಗೂ ಅಭಿಮಾನಿಗಳಲ್ಲಿ ಆತಂಕ ಕೂಡ ಮನೆ ಮಾಡಿದೆ. ಆದರೀಗ ಚುನಾವಣೆ ಮತ ಎಣಿಕೆ ಆರಂಭವಾಗುವ ಮುನ್ನವೇ 543 ಕ್ಷೇತ್ರಗಳಲ್ಲಿ ಬಿಜೆಪಿ ಪ್ರಥಮವಾಗಿ 1ನ್ನು ಗೆದ್ದುಕೊಂಡಿದೆ.
ಹೌದು, ಈ ಬಾರಿಯ ಚುನಾವಣೆಯಲ್ಲಿ(Parliament Election) ದೇಶದ ಮೊಟ್ಟ ಮೊದಲ ಸೀಟ್ ಅನ್ನು ಗೆದ್ದಿದೆ. ಬಿಜೆಪಿಯ ಭದ್ರಕೋಟೆ ಗುಜರಾತ್(Gujarath) ರಾಜ್ಯದ ಸೂರತ್ ಲೋಕಸಭಾ(Surath Lokasabha) ಕ್ಷೇತ್ರವನ್ನು ಬಿಜೆಪಿ ಗೆದ್ದಿದ್ದು ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್(Mukesh Dalal) ಆಯ್ಕೆಯಾಗಿದ್ದಾರೆ
ಅವಿರೋಧ ಆಯ್ಕೆ:
ನೀವು ಈ ಹಿಂದೆ ಕೇಳಿರಬಹುದು, ಗುಜರಾತಿನ(Gujarath) ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್(BJP Candidate Mukesh Dalal) ಅವರು ಚುನಾವಣೆ ಎದುರಿಸದೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ, ಅಂದರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು. ಈ ಮೂಲಕ ಮತದಾನಕ್ಕೂ ಮುನ್ನವೇ, ಇದೀಗ ಎಣಿಕೆಗೂ ಮುನ್ನವೇ ಅವಿರೋಧ ಆಯ್ಕೆಯಿಂದ ಬಿಜೆಪಿ ಮೊದಲ ಸ್ಥಾನವನ್ನು ಗೆದ್ದು ಗೆಲುವಿನ ಖಾತೆ ತೆರೆದಿದೆ.
ಅಷ್ಟಕ್ಕೂ ನಡೆದದ್ದೇನು?
ಸೂರತ್ ಕ್ಷೇತ್ರದಿಂದ ಒಟ್ಟು 9 ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಈ ಬೈಕಿ ಬಿಜೆಪಿಯಿಂದ ಮುಕೇಶ್ ದಲಾಲ್ ಹಾಗೂ ಕಾಂಗ್ರೆಸ್‌ನಿಂದ ನಿಲೇಶ್ ಕುಂಭಾನಿ ಪ್ರಮುಖರಾಗಿದ್ದರು. ಇವರಿಬ್ಬರ ನಡುವೆ ನೇರಾನೇರ ಸ್ಪರ್ಧೆ ಎರ್ಪಟ್ಟಿತ್ತು. ಆದರೆ ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಅಲ್ಲದೆ ನಂತರ ಕಣದಲ್ಲಿದ್ದ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡಿದ್ದರು.