NEET Result: ನೀಟ್‌ 2024 ಫಲಿತಾಂಶ ಪ್ರಕಟ: 720 ಅಂಕ ಪಡೆದು 1st ರ‍್ಯಾಂಕ್ ಪಡೆದ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ಅರ್ಜುನ್ ಕಿಶೋರ್

NEET Result: ಯುಜಿ ಮೆಡಿಕಲ್‌ ಕೋರ್ಸ್‌ಗಳ ಪ್ರವೇಶಾತಿಗೆ ಮೇ 5 ರಂದು ನಡೆಸಲಾಗಿದ್ದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ರಿಸಲ್ಟ್‌ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಮತ್ತೆ ಕರಾವಳಿ ಕಮಾಲ್ ಮಾಡಿದೆ. ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿ 720 ಕ್ಕೆ 720 ಮಾರ್ಕ್ ಪಡೆದು ಅಲ್ ಇಂಡಿಯಾ ನಂಬರ್ ವನ್ ಸ್ಥಾನ ಪಡೆದುಕೊಂಡಿದ್ದಾನೆ.

ಉಳಿದಂತೆ ಎಕ್ಸ್ಪರ್ಟ್ ಪಿಯು ಕಾಲೇಜಿನ ಮಿಹಿರ್ ಕಾಮತ್ (1964 ರಾಂಕ್), ಅಮನ್ ಅಬ್ದುಲ್ ಹಕೀಮ್(592 ನೇ ರಾಂಕ್), ಪ್ರತೀಕ್ ಗೌಡ(1931 ರಾಂಕ್) ಪಡೆದು ಉತ್ತಮ ನ್ಯಾಷನಲ್ ರಾಂಕ್ ಗಳಿಸಿದ್ದಾರೆ.

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ -ನೀಟ್‌ 2024 ರಿಸಲ್ಟ್ ಅನ್ನು ಇಂದು (ಜೂನ್ 04, 2024) ನ್ಯಾಷನಲ್‌ ಟೆಸ್ಟಿಂಗ್ ಏಜೆನ್ಸಿಯು ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ 24 ಲಕ್ಷ ಅಭ್ಯರ್ಥಿಗಳು ರಿಸಲ್ಟ್ ಅನ್ನು ಈಗ ಎನ್‌ಟಿಎ ನೀಟ್‌ ಪೋರ್ಟಲ್‌ನಲ್ಲಿ ಲಾಗಿನ್‌ ಆಗುವ ಮೂಲಕ ಚೆಕ್‌ ಮಾಡಿಕೊಳ್ಳಬಹುದು.

NEET UG 2024 AIR 1 ಪಡೆದ ಅರ್ಜುನ್‌ ಕಿಶೋರ್‌
ನೀಟ್‌ 2024 ಬರೆದ ವಿದ್ಯಾರ್ಥಿಗಳ ಪೈಕಿ, ಈ ವರ್ಷ ಆಲ್‌ ಇಂಡಿಯಾ ರ‍್ಯಾಂಕ್ 1ಅನ್ನು 720 ಕ್ಕೆ 720 ಅಂಕ ಪಡೆದು ಅರ್ಜುನ್‌ ಕಿಶೋರ್‌ ಎಂಬ ವಿದ್ಯಾರ್ಥಿ ಸಾಧನೆ ಮಾಡಿದ್ದಾರೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ನೀಟ್‌ ಯುಜಿ 2024 ಅನ್ನು ದೇಶದ 571 ನಗರಗಳ 4750 ವಿವಿಧ ಕೇಂದ್ರಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳಿಗೆ ಮೇ 05 ರಂದು ನಡೆಸಿತ್ತು. ಹೊರದೇಶದ 14 ನಗರಗಳಲ್ಲಿ ಸಹ ನೀಟ್‌ ಯುಜಿ ನಡೆಸಲಾಗಿತ್ತು.

ನೀಟ್‌ ಯುಜಿ 2024 ರಿಸಲ್ಟ್‌ ಚೆಕ್‌ ಮಾಡುವ ವಿಧಾನ
https://exams.nta.ac.in/NEET/ ಗೆ ಭೇಟಿ ನೀಡಿ.
ತೆರೆದ ನೀಟ್‌ ಪೋರ್ಟಲ್‌ ಮುಖಪುಟದಲ್ಲಿ ನೀಟ್‌ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್‌ ಮೇಲೆ ಕ್ಲಿಕ್ ಮಾಡಬೇಕು.
Latest News >> Click Here For Score Card >> Click Here For Login ಆಯ್ಕೆಗಳನ್ನು ಸೆಲೆಕ್ಟ್‌ ಮಾಡಿ ಕ್ಲಿಕ್ ಮಾಡಿ. ಅಪ್ಲಿಕೇಶನ್‌ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ನೀಡಿ ‘Submit’ ಎಂಬಲ್ಲಿ ಕ್ಲಿಕ್ ಮಾಡಿದ ತಕ್ಷಣ ರಿಸಲ್ಟ್‌ ಪೇಜ್‌ ಓಪನ್‌ ಆಗುತ್ತದೆ. ಫಲಿತಾಂಶ ಪೇಜ್‌ ಅನ್ನು ಡೌನ್‌ಲೋಡ್‌ ಮಾಡಿ ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.

ನೀಟ್ ಯುಜಿ 2024 ಫಲಿತಾಂಶ ಚೆಕ್‌ ಮಾಡಲು ಎನ್‌ಟಿಎ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಈ ಮೇಲಿನ ಡೈರೆಕ್ಟ್ ಲಿಂಕ್‌ಗಳನ್ನು ಕ್ಲಿಕ್‌ ಮಾಡಿ ಲಾಗಿನ್‌ ಆಗುವ ಮೂಲಕ ಸಹ ಚೆಕ್‌ ಮಾಡಬಹುದು.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಪ್ರತಿ ವರ್ಷ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ( NEET UG ) ದೇಶದಾದ್ಯಂತ ಮೆಡಿಕಲ್ ಮತ್ತು ಡೆಂಟಲ್ ಕಾಲೇಜುಗಳಲ್ಲಿ ಯುಜಿ ಮೆಡಿಕಲ್ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸಲಾಗುತ್ತದೆ.

Leave A Reply

Your email address will not be published.