MLC Election: 11 ಅಭ್ಯರ್ಥಿಗಳು ಅವಿರೋಧ ಆಯ್ಕೆ ಸಾಧ್ಯತೆ !!
MLC Election: ಲೋಕಸಭಾ ಚುನಾವಣೆ(Parliament Election)ಮತ ಎಣಿಕೆ ನಡುವೆಯೂ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ಕೂಡ ಗಮನ ಸೆಳೆದಿದ್ದು ಕಾಂಗ್ರೆಸ್(Congress), ಬಿಜೆಪಿ, ಜೆಡಿಎಸ್(BJP-JDS) ನಿಂದ ಒಟ್ಟು 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಧಾನ ಪರಿಷತ್ತಿನ(MLC) 11 ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 7, ಬಿಜೆಪಿಯ ಮೂವರು ಹಾಗೂ ಜೆಡಿಎಸ್ನಿಂದ ಓರ್ವ ಅಭ್ಯರ್ಥಿ ನಿನ್ನೆ ನಾಮಪತ್ರ ಸಲ್ಲಿಸಿದರು.
ವಿಧಾನಸಭೆಯ ಸದಸ್ಯರಿಂದ(Vidhana Sabhe Members) ಆಯ್ಕೆಯಾಗುವ ವಿಧಾನಪರಿಷತ್ ನ ಈ 11 ಸ್ಥಾನಗಳಿಗೆ ಜೂ.13 ರಂದು ಚುನಾವಣೆ ನಡೆಯಲಿದೆ ಎನ್ನಲಾಗಿತ್ತು. ಆದರೆ ಯಾರಿಗೂ ಪ್ರತಿಸ್ಪರ್ಧಿಗಳಿಲ್ಲದ ಕಾರಣ ಆದ್ದರಿಂದ, ಪರಿಶೀಲನೆ ಪೂರ್ಣಗೊಂಡ ನಂತರ ಎಲ್ಲಾ 11 ಅಧಿಕೃತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Congress ಅಭ್ಯರ್ಥಿಗಳು:
* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ,
* ಹಾಲಿ ಸಚಿವ ಎನ್.ಎಸ್.ಬೋಸರಾಜು
* ಸಿಎಂ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು, * ವಸಂತಕುಮಾರ್,
* ಜಗದೇವ್ ಗುತ್ತೇದಾರ್
* ಐವನ್ ಡಿಸೋಜಾ
* ಬಿಲ್ಕಿಸ್ ಬಾನೊ
BJP-JDS ಅಭ್ಯರ್ಥಿಗಳು:
ಬಿಜೆಪಿಯು ಪಕ್ಷದ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಎಂಎಲ್‌ಸಿ ಮತ್ತು ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಮತ್ತು ಪಕ್ಷದ ನಾಯಕ ಎಂ ಜಿ ಮುಳೆ ಅವರನ್ನು ತನ್ನ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದೆ