D.K.Suresh: ಜನರ ತೀರ್ಮಾನಕ್ಕೆ ತಲೆಬಾಗಿದ ಡಿ.ಕೆ.ಸುರೇಶ್‌; ಸೋಲಿನ ನಂತರ ಮೊದಲ ಪ್ರತಿಕ್ರಿಯೆ

Share the Article

D.K.Suresh: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ ಸಿ.ಎನ್‌ ಎನ್‌ ಮಂಜುನಾಥ್‌ ಅವರ ವಿರುದ್ಧ ಸೋಲುಂಡ ಬಳಿಕ ಡಿ.ಕೆ.ಸುರೇಶ್‌ ಅವರು ʼಜನರ ತೀರ್ಮಾನವೇ ಅಂತಿಮ, ತೀರ್ಪಿಗೆ ತಲೆಬಾಗುತ್ತೇನೆʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ಯಕರ್ತರಿಗೆ, ನಾಯಕರುಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಚುಆವಣೆಯಲ್ಲಿ ಮತದಾರರ ತೀರ್ಮಾನ ಸ್ವಾಗತ ಮಾಡಿ ಡಾ.ಮಂಜುನಾಥ್‌ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಪಕ್ಷ ಅವಕಾಶ ಕೊಟ್ಟಿತ್ತು. ನಮ್ಮ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ,ರಾಹುಲ್‌ ಗಾಂಧಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸೇರಿ ಎಲ್ಲಾ ನಾಯಕರುಗಳಿಗೆ ಧನ್ಯವಾದ ಸಲ್ಲಿಸಿ ತಲೆಬಾಗುತ್ತೇನೆ ಎಂದು ಹೇಳಿದರು.

Leave A Reply