Dakshina Kannada: ದ.ಕ. 1 ನೇ ಸುತ್ತು ಆರಂಭ; ಬಿಜೆಪಿ ಬ್ರಿಜೇಶ್‌ ಚೌಟ ಮುನ್ನಡೆ

Dakshina Kannada: ಮಂಗಳೂರಿನ ಎನ್‌ಐಟಿಕೆಯಲ್ಲಿ ಮತ ಎಣಿಕಾ ಕೇಂದ್ರದಲ್ಲಿ ಅಂಚೆ ಮತ ಎಣಿಕೆ ಪ್ರಾರಂಭವಾಗಿದ್ದು, ಬಹು ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದಾರೆ. ಮತ ಎಣಿಕಾ ಸಿಬ್ಬಂದಿ ಅಂಚೆ ಮತಗಳನ್ನು ಎಣಿಕೆ ಮಾಡುತ್ತಿದ್ದು. 8537 ಅಂಚೆ ಮತಗಳ ಎಣಿಕೆಗೆ ಒಂದು ಕೊಠಡಿಯಲ್ಲಿ 20 ಮೇಜುಗಳ ವ್ಯವಸ್ಥೆ ಮಾಡಲಾಗಿದ್ದು, ನಿರೀಕ್ಷೆ ಹೆಚ್ಚಿದೆ.

ದಕ್ಷಿಣ ಕನ್ನಡ 1 ನೇ ಸುತ್ತು ಆರಂಭವಾಗಿದ್ದು,  ಬಿಜೆಪಿಯ ಬ್ರಿಜೇಶ್‌ ಚೌಟ ಒಂದನೇ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದಾರೆ

ಇಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು, 543 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಾರಂಭವಾಗಿದೆ.  ಪೋಸ್ಟಲ್‌ ಮತ ಎಣಿಕೆ ಪ್ರಾರಂಭವಾಗಿದ್ದು, ಇದರಲ್ಲಿ ಬಿಜೆಪಿ ಬ್ರಿಜೇಶ್‌ ಚೌಟ ಮುನ್ನಡೆ; 2836, ಕಾಂಗ್ರೆಸ್‌ ಪದ್ಮರಾಜ್‌ ಆರ್‌ ಪೂಜಾರಿ 1379 ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ 1457 ಅಂತರದಲ್ಲಿ ಮುನ್ನಡೆ ಪಡೆದಿದ್ದಾರೆ.

ದ.ಕ.ಲೋಕಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಒಟ್ಟು 16 ಚುನಾವಣೆಗಳು ನಡೆದಿದ್ದು. 8 ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ 9 ಬಾರಿ ಗೆಲುವು ಸಾಧಿಸಿದೆ. 2009,2014,2019 ರಲ್ಲಿ ಬಿಜೆಪಿ ಹ್ಯಾಟ್ರಿಕ್‌ ಗೆಲುವು ಸಾಧಿಸಿತ್ತು.

Leave A Reply

Your email address will not be published.