Chandrababu Naydu: ಸಿಎಂ ಆಗಿ ಜೂ. 9ಕ್ಕೆ ಚಂದ್ರಬಾಬು ನಾಯ್ಡು ಪ್ರಮಾಣವಚನ !!

Chandrababu Naydu: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು(Chandrababu Naydu) ಜೂನ್ 9ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ದೇಶದ ರಾಜಕೀಯದಲ್ಲಿ ಕಿಂಗ್ ಮೇಕರ್ ಪಟ್ಟದಲ್ಲಿರುವ ಚಂದ್ರಬಾಬು ನಾಯ್ಡು ಇದೀಗ ಜೂನ್ 9 ರಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ(TDP) ಪಕ್ಷ 158 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅಧಿಕಾರರೂಡ ಜಗನ್ ಮೋಹನ್ ರೆಡ್ಡಿ(Jagan Mohan Reddy) ವೈಎಸ್ಆರ್(YSR) ಕಾಂಗ್ರೆಸ್ ನೆಲಕಚ್ಚಿದೆ. NDA ಮೈತ್ರಿಕೂಟ ಪಕ್ಷವಾದ ಟಿಡಿಪಿ 133, ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ 21 ಹಾಗೂ ಬಿಜೆಪಿ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಕಳೆದ ಬಾರಿ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸಿದ್ದ ಜಗನ್ ರೆಡ್ಡಿ ನೇತೃತ್ವದ YSRCP ಪಕ್ಷ ಕೇವಲ 15 ಸ್ಥಾನಗಳಿಗೆ ಕುಸಿದಿದೆ. ಒಟ್ಟು 178 ಸ್ಥಾನಗಳ ಪೈಕಿ ಅಭೂತಪೂರ್ವ ಗೆಲುವು ಕಂಡಿರುವ ಟಿಡಿಪಿ ಯಾವುದೇ ಅಡೆ ತಡೆ ಇಲ್ಲದೆ ಸರ್ಕಾರ ರಚಿಸಲಿದೆ.

ಕಿಂಗ್ ಮೇಕರ್ ಆದ ನಾಯ್ಡು:
ಲೋಕಸಭೆ ಚುನಾವಣೆ ಫಲಿತಾಂಶ ಬಹುತೇಕ ಘೋಷಣೆಯಾಗಿದ್ದು ಈ ಬಾರಿ ಬಿಜೆಪಿಗೆ 240 ಸ್ಥಾನಗಳು ಸೇರಿ NDAಗೆ 295 ಸ್ಥಾನಗಳ ಸರಳ ಬಹುಮತ ಸಿಗುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಜೆಪಿ ಪ್ರಯತ್ನ ನಡೆಸಿದೆ. ಈ ಬಾರಿ ಚಂದ್ರಬಾಬು ನಾಯ್ಡು ಕಿಂಗ್ ಮೇಕರ್ ಆಗುವ ಸಾಧ್ಯತೆ ಹೆಚ್ಚಿದೆ.

Leave A Reply

Your email address will not be published.