HDFC Bank: ಚುನಾವಣಾ ಫಲಿತಾಂಶದ ನಡುವೆಯೇ ಬ್ಯಾಂಕ್ ಗ್ರಾಹಕರಿಗೆ ಟ್ವಿಸ್ಟ್! 2 ದಿನ ಈ ಸೇವೆ ಸ್ಥಗಿತ!

HDFC Bank: ಸದ್ಯ ಚುನಾವಣಾ ಫಲಿತಾಂಶದ ನಡುವೆಯೇ ಬ್ಯಾಂಕ್ ಗ್ರಾಹಕರಿಗೆ ಟ್ವಿಸ್ಟ್ ನೀಡಲಾಗಿದೆ. ಹೌದು, ಲೋಕಸಭಾ ಚುನಾವಣೆಯ ಫಲಿತಾಂಶದ ನಡುವೆಯೇ HDFC ಬ್ಯಾಂಕ್ (HDFC Bank) ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದಿದೆ.

ಪ್ರಸ್ತುತ HDFC ಬ್ಯಾಂಕ್ 

ಬಹುದೊಡ್ಡ ಅಪ್‌ಡೇಟ್ ಒಂದನ್ನು ನೀಡಿದ್ದು, ಈ ಸಂದರ್ಭದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಲ್ಲಾ ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ ವಿಂಡೋಗಳು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಈ ವಿಷಯವಾಗಿ ಬ್ಯಾಂಕ್ ತನ್ನ ಕೋಟ್ಯಾಂತರ ಗ್ರಾಹಕರಿಗೆ ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ಮಾಹಿತಿ ನೀಡಿದೆ.

HDFC ಬ್ಯಾಂಕ್ ಕಳುಹಿಸಿರುವ ಇಮೇಲ್‌ನಲ್ಲಿ ಬ್ಯಾಂಕ್‌ನ ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳು ಜೂನ್ 4 ರಂದು ಮಧ್ಯಾಹ್ನ 12:30 ರಿಂದ 2:30 ರವರೆಗೆ ಮತ್ತು ಜೂನ್ 6ರಂದು ಮಧ್ಯಾಹ್ನ 12:30 ರಿಂದ 2:30 ರವರೆಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಲಾಗಿದೆ. ಮೇಲೆ ತಿಳಿಸಲಾದ ದಿನಾಂಕ ಮತ್ತು ಸಮಯದಲ್ಲಿ ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ ಸೇವೆಗಳಿಗೆ ಸಿಸ್ಟಮ್ ಅಪ್‌ಗ್ರೇಡ್ ಮಾಡಲು ಬ್ಯಾಂಕ್ ಯೋಜಿಸಿದೆ.

ಸದ್ಯ ಮೇಲೆ ತಿಳಿಸಿದಂತೆ ಎಲ್ಲಾ ಡೆಬಿಟ್, ಕ್ರೆಡಿಟ್, ಪ್ರಿಪೇಯ್ಡ್ ಕಾರ್ಡ್ ಸೇವೆಗಳು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ, ಪಿಒಎಸ್, ಆನ್‌ಲೈನ್ ಮತ್ತು ನೆಟ್‌ಸೇಫ್‌ ವಹಿವಾಟುಗಳು ನವೀಕರಣದ ಸಮಯದಲ್ಲಿ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ರುಪೇ ಕಾರ್ಡ್ ಇತರ ಪಾವತಿ ಗೇಟ್‌ವೇಗಳಲ್ಲಿ ಆನ್‌ಲೈನ್ ವಹಿವಾಟುಗಳಿಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಲಾಗಿದೆ.

Leave A Reply

Your email address will not be published.