Hassan Lokasabha: ಹಾಸನದಲ್ಲಿ ಪ್ರಜ್ವಲ್ ಗೆ ಸೋಲೋ? ಗೆಲುವೋ? ಸಮೀಕ್ಷೆಗಳು ಹೇಳೋದೇನು?

Hassa Lokasabha: ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ(Prajwal Revanna) ವಿದೇಶದಿಂದ ಆಗಮಿಸಿ SITಗೆ ಸೆರೆಂಡರ್ ಆಗುವ ಮೂಲಕ 35 ದಿನಗಳ ಭಾರೀ ಹೈಡ್ರಾಮಕ್ಕೆ ಕೊನೆ ಹಾಡಿದ್ದಾರೆ. ತನಿಖೆ ಕೂಡ ಜೋರಾಗಿ ನಡೆಯುತ್ತಿದೆ. ಈ ಬೆನ್ನಲ್ಲೇ ಬಿಜೆಪಿ-ಜೆಡಿಎಸ್(JDs-BJP) ಮೈತ್ರಿ ಅಭ್ಯರ್ಥಿಯಾಗಿ ಹಾಸನ ಲೋಕಸಭಾ(Hassan Lokasabha) ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ಸೋಲುತ್ತಾರೋ ಅಥವಾ ಗೆಲುವು ಭಾರಿಸುತ್ತಾರೋ? ಎಂಬ ಚರ್ಚೆ ಶುರುವಾಗಿದೆ. ಹಾಗಿದ್ರೆ ಸಮೀಕ್ಷೆಗಳು ಏನು ಹೇಳಿವೆ ಎಂದು ನೋಡೋಣ.

 

ಇದನ್ನೂ ಓದಿ: ಏರ್ ಶೋ ವೇಳೆ ಯುದ್ಧ ವಿಮಾನಗಳ ಭೀಕರ ಡಿಕ್ಕಿ; ಭಯಾನಕ ವಿಡಿಯೋ ವೈರಲ್ !!

ಲೋಕಸಭೆಯ ಸುದೀರ್ಘ ಮತದಾನದ ಪ್ರಕ್ರಿಯೆ ಜೂನ್‌ 01 ರಂದು ಮುಕ್ತಾಯಗೊಂಡಿದೆ. ಚುನಾವಣಾ ಬಳಕ ಹಲವು ವಾಹಿನಿಗಳು ಚುನಾವಣೋತ್ತರ ಸಮೀಕ್ಷೆ ನಡೆಸಿವೆ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ. ಆದರೀಗ ಈ ನಡುವೆ ಎಲ್ಲರ ಚಿತ್ತ ಹಾಸನದತ್ತ ನೆಟ್ಟಿದೆ. ಹಾಸನದಲ್ಲಿ ಪ್ರಜ್ವಲ್ ಭವಿಷ್ಯ ಏನಾಗುತ್ತೆ? ಎಂದು ಕುತೂಹಲ ಕೆರಳಿದೆ. ಸಮೀಕ್ಷೆಗಳು ಕೂಡ ಭಿನ್ನವಾಗಿ ಭವಿಷ್ಯ ನುಡಿದಿವೆ.

ಪ್ರಜ್ವಲ್ ಗೆ ಸೋಲೆಂದ ಸಮೀಕ್ಷೆ:
ಕಾಪ್ಸ್‌ (ಸಿಒಪಿಎಸ್)‌ ಸಮೀಕ್ಷೆ ಪ್ರಕಾರ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರ ಸೋಲು ಅನುಭವಿಸುತ್ತಾರೆ ಎಂದು ತಿಳಿಸಿದೆ.

ಪ್ರಜ್ವಲ್ ಗೆ ಗೆರುವೆಂದ ಸಮೀಕ್ಷೆ:
ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಯಲ್ಲಿ (Prajwal Revanna Hassan Exit Poll Results) ಗೆಲುವು ಸಾಧಿಸಲಿದ್ದಾರೆ ಎಂದು ಇಂಡಿಯಾ ಟುಡೆ- ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.

ಇನ್ನು ಕರ್ನಾಟಕದಲ್ಲಿ ಬಿಜೆಪಿ 20-22, ಜೆಡಿಎಸ್ 2-3, ಕಾಂಗ್ರೆಸ್ 3-5, ಸ್ಥಾನಗಳನ್ನು ಗಳಿಸಬಹುದು ಎಂದು ಇಂಡಿಯಾ ಟುಡೇ, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಮುನ್ಸೂಚನೆಯಲ್ಲಿ ಅಂದಾಜಿಸಿದ್ದು. ಜೆಡಿಎಸ್‌ ಮೂರು ಗೆದ್ದು ಅದರಲ್ಲಿ ಪ್ರಜ್ವಲ್‌ ಕೂಡ ಇರಬಹುದು ಎಂದು ಹೇಳಲಾಗಿದೆ. ಟಿವಿ 9 ನೀಡಿರುವ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಕರ್ನಾಟಕದಲ್ಲಿ, 18, ಜೆಡಿಎಸ್‌ ಗೆ 2 ಸ್ಥಾನ ಸಿಗಬಹುದು ಎಂದು ತಿಳಿಸಲಾಗಿದೆ. ಇದರಲ್ಲಿ ಹಾಸನವೂ ಇದೆ.
ರಿಪಬ್ಲಿಕ್‌ ಟಿವಿ- ಜನ್‌ ಕಿ ಬಾತ್‌ ಎಕ್ಸಿಟ್‌ ಪೋಲ್‌ ಫಲಿತಾಂಶದಲ್ಲಿ ಕರ್ನಾಟಕದಲ್ಲಿ ಎನ್‌ಡಿಎ 21ರಿಂದ 23 ಸ್ಥಾನ, ಇದರಲ್ಲಿ ಜೆಡಿಎಸ್‌ಗೆ 3 ಸ್ಥಾನ, ಕಾಂಗ್ರೆಸ್– 5ರಿಂದ 7 ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಿದೆ.

ಇಂಡಿಯಾ ಟಿವಿ ಸಿಎನ್‌ಎಕ್ಸ್‌ ಮತಗಟ್ಟೆ ಕರ್ನಾಟಕದ ಸಮೀಕ್ಷೆಯಲ್ಲಿ ಎನ್‌ಡಿಎ 19 ರಿಂದ 25 ಸ್ಥಾನವಿದ್ದು, ಇದರಲ್ಲಿ ಜೆಡಿಎಸ್‌ಗೆ 3 ಸ್ಥಾನ ಸಿಗಬಹುದು. ಕಾಂಗ್ರೆಸ್‌ 4 ರಿಂದ 5 ಸ್ಥಾನ ಗಳಿಸಬಹುದು ಎಂದು ತಿಳಿಸಲಾಗಿದೆ. ಈ ಎರಡೂ ಸಮೀಕ್ಷೆಗಳಲ್ಲಿ ಹಾಸನವೂ ಇರುವುದರಿಂದ ಪ್ರಜ್ವಲ್‌ ಗೆಲ್ಲಬಹುದು ಎಂದು ಭವಿಷ್ಯ ನುಡಿಯಲಾಗಿದೆ.

ಇದನ್ನೂ ಓದಿ: Anaconda Video Viral: ರಸ್ತೆ ಮಧ್ಯೆ ಅಪಾಯಕಾರಿಯಾದ ದೈತ್ಯ ಹಾವು! ವಿಡಿಯೋ ವೈರಲ್!

6 Comments
  1. MichaelLiemo says

    ventolin: Buy Ventolin inhaler online – cheap ventolin uk
    cost ventolin australia

  2. MichaelLiemo says

    ventolin online usa: buy albuterol inhaler – ventolin prescription australia
    order ventolin from canada no prescription

  3. Josephquees says

    neurontin 300mg tablet cost: medication neurontin 300 mg – 2000 mg neurontin

  4. Josephquees says

    furosemide 100 mg: furosemide online – furosemide 40mg

  5. Timothydub says

    indian pharmacies safe: reputable indian online pharmacy – world pharmacy india

  6. Timothydub says

    legit canadian pharmacy: Pharmacies in Canada that ship to the US – canadian pharmacy review

Leave A Reply

Your email address will not be published.