Bombay Bomb Blast: 1993 ಮುಂಬೈ ಬಾಂಬ್ ಸ್ಫೋಟದ ಅಪರಾಧಿ ಕೊಲ್ಲಾಪುರ ಜೈಲಿನಲ್ಲಿ ಹತ್ಯೆ

Share the Article

Bombay Bomb Blast: 1993 ರ ಮುಂಬೈ ಸ್ಫೋಟದ ಅಪರಾಧಿ ಮೊಹಮ್ಮದ್‌ ಆಲಿ ಖಾನ್‌ರನ್ನು ಕೊಲ್ಲಾಪುರ ಜೈಲಿನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಐವರು ಆರೋಪಿಗಳು ಭಾನುವಾರ (ಜೂ.2) ಕೊಲೆ ಮಾಡಿದ್ದಾರೆ. ಈ ಆರೋಪಿಗಳು ಮೊಹಮ್ಮದ್‌ ಆಲಿ ಖಾನ್‌ ನ ಶಿರಚ್ಛೇದ ಮಾಡಿದ್ದು, ಆತ ಸಾವಿಗೀಡಾಗಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ದಂಪತಿಗಳ ನಡುವೆ ಜಗಳ ಆಗೋಕೆ ಇದೇ ಕಾರಣವಂತೆ ; ಮೊದಲು ತಿಳಿಯಿರಿ

ಪ್ರತೀಕ್‌ ಪಾಟೀಲ್‌, ದೀಪಕ್‌ ಖೋಟ್‌, ಸಂದೀಪ್‌ ಚವ್ಹಾನ್‌, ರಿತುರಾಜ್‌ ಇನಾಮದಾರ್‌ ಮತ್ತು ಸೌರಭ್‌ ಸಿದ್ಧ ಎಂಬುವವರೇ ಕೊಲೆ ಮಾಡಿದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಇವರೆಲ್ಲ ಮೃತ ಮೊಹಮ್ಮದ್‌ ಆಲಿ ಖಾನ್‌ ಜೊತೆ ಒಂದೇ ಬ್ಯಾರಕ್‌ನಲ್ಲಿ ಇದ್ದರು. ಇವರ ನಡುವೆ ಜಗಳವಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಂಬೈ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಮೊಹಮ್ಮದ್‌ ಆಲಿ ಖಾನ್‌ ಅಲಿಯಾಸ್‌ ಮುನ್ನಾ ಅಲಿಯಾಸ್‌ ಮನೋಜ್‌ ಕುಮಾರ್‌ ಭನ್ವರ್‌ಲಾಲ್‌ ಗುಪ್ತಾ ಕೋಲ್ಹಾಪುರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ.

ಇದನ್ನೂ ಓದಿ: Loksabha Election: ನಾಳೆ ಲೋಕಸಭೆ ಚುನಾವಣೆ ಫಲಿತಾಂಶ; ರಾಜ್ಯಾದ್ಯಂತ ಸೆ.144 ಜಾರಿ

Leave A Reply

Your email address will not be published.