Home Crime Weekend Fun: ಹೋದದ್ದು ವೀಕೆಂಡ್‌ ಫನ್ ಮಾಡಲು! ಆಗಿದ್ದು ಇಬ್ಬರು ಬಾಲಕಿಯರ ದಾರುಣ ಸಾವು!

Weekend Fun: ಹೋದದ್ದು ವೀಕೆಂಡ್‌ ಫನ್ ಮಾಡಲು! ಆಗಿದ್ದು ಇಬ್ಬರು ಬಾಲಕಿಯರ ದಾರುಣ ಸಾವು!

Death

Hindu neighbor gifts plot of land

Hindu neighbour gifts land to Muslim journalist

Weekend Fun: ವೀಕೆಂಡ್‌ನಲ್ಲಿ ಕುಟುಂಬ ಸಮೇತ ಮಸ್ತಿ ಮಾಡಲು (Weekend Fun) ಹೋಗಿ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದು, ಇದೀಗ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಹೌದು, ಮಸ್ತಿ ಮಾಡಲು ಹೋಗಿದ್ದ ಇಬ್ಬರು ಬಾಲಕಿಯರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಮಂಚೇನಹಳ್ಳಿ ತಾಲೂಕಿನ ದಂಡಿಗಾನ ಹಳ್ಳಿಯಲ್ಲಿ ನಡೆದಿದೆ.

ಇದನ್ನೂ ಒದಿ: 2019ರಲ್ಲಿ ಫಲಿತಾಂಶದ ಬಗ್ಗೆ ಪಕ್ಕಾ ಭವಿಷ್ಯ ನುಡಿದದ್ದು ಈ ಎರಡು ವಾಹಿನಿಗಳು ಮಾತ್ರ !!

ಮುಂಬೈ ಮೂಲದ ಕುಟುಂಬಸ್ಥರು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಸಂಬಂಧಿಕರ ಮನೆಗೆ ಬಂದಿದ್ದು, ಈ ಹಿನ್ನಲೆ ನಿನ್ನೆ ವೀಕೆಂಡ್‌ನಲ್ಲಿ ಕುಟುಂಬ ಸಮೇತ ದಂಡಿಗಾನಹಳ್ಳಿ ಕೆರೆಗೆ ಹೋಗಿದ್ದರು. ಬಳಿಕ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕಿಯರಾದ ಆಲಿಯಾ ಪಾಟೀಲ್ (14) ಹಾಗೂ ಜೋಯಾ ಪಾಟಿಲ್ (14) ಎಂಬ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಮಂಚೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಹೆಚ್ಚಿನ ವಿಚಾರ ಇನ್ನಷ್ಟೇ ತಿಳಿದು ಬರಬೇಕಿದೆ.

ಇದನ್ನೂ ಓದಿ: MLC Election: ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಯಾರಿಗೆಲ್ಲ ಟಿಕೆಟ್? ಯಾರಿಗೆಲ್ಲಾ ನಿರಾಶೆ?