MLC Election: ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಯಾರಿಗೆಲ್ಲ ಟಿಕೆಟ್? ಯಾರಿಗೆಲ್ಲಾ ನಿರಾಶೆ?

MLC Election: ಸದ್ಯ ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಗೆ (MLC Election) ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಕೆಲವರಿಗೆ ಟಿಕೆಟ್ ದೊರೆತಿದ್ದು, ಇನ್ನು ಕೆಲವರಿಗೆ ನಿರಾಶೆಯಾಗಿದೆ. ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಕಾರಣ ರವಿವಾರ ಮೂರು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

 

ಸೋಮವಾರ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಮಂಗಳವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ಗುರುವಾರ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ಜೂನ್ 13ರಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ

ಇದನ್ನೂ ಓದಿ: ಕಾಡುಗಳ್ಳ ವೀರಪ್ಪನ್ ಕೊಂದಿದ್ದ ಎನ್‌ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿ ವೆಲ್ಲಾದುರೈ ಸಸ್ಪೆಂಡ್! 

ಸದ್ಯ ಹನ್ನೊಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಮೂರರಲ್ಲಿ ಗೆಲ್ಲುವ ಅವಕಾಶ ಬಿಜೆಪಿಗೆ ಇದೆ. ಹೀಗಾಗಿ ಮೂರು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ. ಮುಖ್ಯವಾಗಿ ಮಾಜಿ ಸಚಿವ ಸಿ.ಟಿ ರವಿ, ಪರಿಷತ್ ಸದಸ್ಯರಾಗಿದ್ದ ಎನ್.ರವಿಕುಮಾರ್ ಮತ್ತು ಬಸವಕಲ್ಯಾಣದ ಮಾಜಿ ಶಾಸಕ ಎಂ.ಜಿ ಮೂಳೆ ಅವರಿಗೆ ಟಿಕೆಟ್ ನೀಡಲಾಗಿದೆ.

ಇನ್ನು ಬೀದರನಿಂದ ಈ ಹಿಂದಿನ ಅವಧಿಯಲ್ಲಿ‌ ರಘುನಾಥ ಮಲ್ಕಾಪುರೆ ಸ್ಪರ್ಧಿಸಿ ಮೇಲ್ಮನೆ ಪ್ರವೇಶಿಸಿದ್ದರು. ಅವರು ವಿಧಾನ ಪರಿಷತ್ ಸಭಾಪತಿಯೂ ಆಗಿದ್ದರು. ಈಗ ಅವರಿಗೆ ಟಿಕೆಟ್ ತಪ್ಪಿದ್ದು, ಕಲ್ಯಾಣ ಕರ್ನಾಟಕ ಭಾಗದಿಂದ ಮಾಜಿ ಶಾಸಕ, ಮರಾಠಾ‌ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮೂಳೆ ಅವರಿಗೆಗೆ ಮಣೆ ಹಾಕಲಾಗಿದೆ.

ವಿಧಾನ ಪರಿಷತ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದೆ ಸುಮಲತಾ ಮತ್ತಿತರರಿಗೆ ನಿರಾಶೆಯಾಗಿದೆ.

ಇದನ್ನೂ ಓದಿ: 2019 Exit Poll: 2019ರಲ್ಲಿ ಫಲಿತಾಂಶದ ಬಗ್ಗೆ ಪಕ್ಕಾ ಭವಿಷ್ಯ ನುಡಿದದ್ದು ಈ ಎರಡು ವಾಹಿನಿಗಳು ಮಾತ್ರ !!

Leave A Reply

Your email address will not be published.