2019 Exit Poll: 2019ರಲ್ಲಿ ಫಲಿತಾಂಶದ ಬಗ್ಗೆ ಪಕ್ಕಾ ಭವಿಷ್ಯ ನುಡಿದದ್ದು ಈ ಎರಡು ವಾಹಿನಿಗಳು ಮಾತ್ರ !!
2019 Exit Poll: ದೇಶಾದ್ಯಂತ ಲೋಕಸಭಾ ಚುನಾವಣೆ ಮುಗಿದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೊರಬಿದ್ದಿವೆ. ಎಲ್ಲಾ ಸಮೀಕ್ಷೆಗಳು NDAಗೆ ಜೈ ಎನ್ನುತ್ತಾ ನರೇಂದ್ರ ಮೋದಿಯೇ ಮುಂದಿನ ಪ್ರಧಾನಿ ಎನ್ನುತ್ತಿವೆ. ಕೆಲವು ಸಮೀಕ್ಷೆಗಳಲ್ಲಿ NDA ಗೆಲ್ಲುವು 375ರ ಗಡಿ ದಾಟಿದರೆ ಮತ್ತೆ ಕೆಲವು 325 ಎಂದಿವೆ. ಒಟ್ಟಿನಲ್ಲಿ 325ಕ್ಕೂ ಕಡಿಮೆ ಯಾವುದು ಇಲ್ಲ. ಆದ್ರೆ ಮತದಾರರ ಮುಂದೆ ಯಾವ ಸಮೀಕ್ಷೆಗಳು ಲೆಕ್ಕಕ್ಕೆ ಬಾರದು. ಅಂತಿಮ ಫಲಿತಾಂಶ ಬಂದಾಗ ಎಲ್ಲಾ ಪೋಲ್ ಗಳು ಉಲ್ಟಾ ಆಗೋ ಚಾನ್ಸ್ ಇರುತ್ತದೆ. ಆದರೆ 2019ರ ಲೋಕಸಭಾ ಚುನಾವಣೆ ವೇಳೆ ಫಲಿತಾಂಶದ ಕುರಿತು ಈ ಎರಡು ಪತ್ರಿಕೆಗಳು ಮಾತ್ರ ನಿಖರವಾಗಿ ಭವಿಷ್ಯ ನುಡಿದಿದ್ದವು.
ಹೌದು, 2024ರ ಲೋಕಸಭಾ ಚುನಾವಣೆಯ(Parliament Election) ಮತದಾನ ಮುಗಿದಿದೆ. ಏಳು ಹಂತಗಳಲ್ಲಿ ದೇಶದಾದ್ಯಂತ ಮತದಾನ ನಡೆದಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಮಂಗಳವಾರದ ಸಂಜೆಯ ವೇಳೆಗೆ ದೇಶದ ಅಧಿಕಾರದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ. ಆದರೀಗ ಚುನಾವಣೆ ಮುಗಿಯುತ್ತಿದ್ದಂತೆ ಕೆಲವು ವಾಹಿನಿಗಳು ಮತ ಎಣಿಕೆಯ ವೇಳೆ ಯಾವ ರೀತಿಯ ಫಲಿತಾಂಶ ಹೊರಬೀಳಬಹುದು ಎನ್ನುವುದರ ಟ್ರೇಲರ್ ಅನ್ನು ಬಹಿರಂಗಗೊಳಿಸಿವೆ.
ಅಂತೆಯೇ 2019ರ ಲೋಕಸಭಾ ಚುನಾವಣೆಯಲ್ಲೂ(2019- Parliament Election) ಮತಗಟ್ಟೆ ಸಮೀಕ್ಷೆಯನ್ನು ಹದಿನಾಲ್ಕು ವಾಹಿನಿಗಳು ಹೊರ ತಂದಿದ್ದವು. ಕೆಲವು ವಾಹಿನಿಗಳು ಜಂಟಿಯಾಗಿ ಮತಗಟ್ಟೆ ಸಮೀಕ್ಷೆಯನ್ನು ನಡೆಸಿದ್ದವು. ಈ ಹದಿನಾಲ್ಕು ವಾಹಿನಿಗಳ ಸಮೀಕ್ಷೆಯಲ್ಲಿ ಎರಡು ವಾಹಿನಿಗಳ ಸಮೀಕ್ಷಾ ವರದಿಗಳು ಮಾತ್ರ ನೈಜ ಫಲಿತಾಂಶಕ್ಕೆ ಹತ್ತಿರವಾಗಿದ್ದವು. ಉಳಿದವು ಎಲ್ಲವೂ ಸುಳ್ಳಾಗಿದ್ದವು.
ನಿಖರ ಫಲಿತಾಂಶ ನೀಡಿದ ವಾಹಿನಿಗಳು :
ಕಳೆದ ಚುನಾವಣೆಯ ಏಕ್ಸಿಟ್ ಪೋಲ್ ನಲ್ಲಿ ಇಂಡಿಯಾ ಟುಡೇ – ಏಕ್ಸಿಸ್(India Today- axis) ಮತ್ತು ನ್ಯೂಸ್ 24 – ಟುಡೇಸ್ ಚಾಣಕ್ಯ(News-24 and Todays Chanakya) ಮಾತ್ರ ಸರಿಯಾದ ವರದಿಯನ್ನು ನೀಡಿದ್ದವು.
* ಇಂಡಿಯಾ ಟುಡೇ – ಏಕ್ಸಿಸ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 352 (+-13), ಯುಪಿಎ ಮೈತ್ರಿಕೂಟಕ್ಕೆ 93 ( +-15), ಇತರರಿಗೆ 82 ( +-13) ಎನ್ನುವ ಫಲಿತಾಂಶವನ್ನು ವಾಹಿನಿ ನೀಡಿತ್ತು. ಆ ಮೂಲಕ, ಸರಿಯಾದ ಸಮೀಕ್ಷಾ ವರದಿಯನ್ನು ನೀಡಿತ್ತು.
* ನ್ಯೂಸ್ 24 – ಟುಡೇಸ್ ಚಾಣಕ್ಯ ತನ್ನ ಸಮೀಕ್ಷೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 350 (+-14), ಯುಪಿಎ ಮೈತ್ರಿಕೂಟಕ್ಕೆ 95 ( +-9), ಇತರರಿಗೆ 97 ( +-11) ಎಂದು ತನ್ನ ಮತಗಟ್ಟೆ ಸಮೀಕ್ಷೆಯಲ್ಲಿ ಈ ನಂಬರ್ ಅನ್ನು ನೀಡಿತ್ತು. ಇದು ಕೂಡಾ, ನೈಜ ಫಲಿತಾಂಶಕ್ಕೆ ಬಹುತೇಕ ಹತ್ತಿರವಾಗಿದ್ದವು. ಕಳೆದ ಬಾರಿ ಬಿಜೆಪಿ ಮೈತ್ರಿಕೂಟ 353, ಕಾಂಗ್ರೆಸ್ ಮೈತ್ರಿಕೂಟ 91 ಸ್ಥಾನದಲ್ಲಿ ಗೆಲುವನ್ನು ಸಾಧಿಸಿದ್ದವು.
ಇದನ್ನೂ ಓದಿ: ಕಾಡುಗಳ್ಳ ವೀರಪ್ಪನ್ ಕೊಂದಿದ್ದ ಎನ್‌ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿ ವೆಲ್ಲಾದುರೈ ಸಸ್ಪೆಂಡ್!
2019ರ ಎಕ್ಸಿಟ್ ಪೋಲ್ ಫಲಿತಾಂಶ ಮತ್ತು ನಿಜವಾದ ಫಲಿತಾಂಶ
ಎನ್‌ಡಿಎ ಬಗ್ಗೆ ಭವಿಷ್ಯ
ಇಂಡಿಯಾ ಟುಡೇ-ಆಕ್ಸಿಸ್: 339-365 ಸೀಟುಗಳು
ಸುದ್ದಿ 24-ಟುಡೇಸ್ ಚಾಣಕ್ಯ: 350 ಸ್ಥಾನಗಳು
News18-IPSOS: 336 ಸ್ಥಾನಗಳು
ಟೈಮ್ಸ್ ನೌ VMR: 306 ಸ್ಥಾನಗಳು
ಇಂಡಿಯಾ ಟಿವಿ-ಸಿಎನ್‌ಎಕ್ಸ್: 300 ಸೀಟುಗಳು
ಸುದರ್ಶನ ಸುದ್ದಿ: 305 ಸ್ಥಾನಗಳು
ಯುಪಿಎ ಭವಿಷ್ಯ
ಇಂಡಿಯಾ ಟುಡೇ-ಆಕ್ಸಿಸ್: 77-108 ಸೀಟುಗಳು
ಸುದ್ದಿ 24-ಟುಡೇಸ್ ಚಾಣಕ್ಯ: 95 ಸ್ಥಾನಗಳು
News18-IPSOS: 82 ಸ್ಥಾನಗಳು
ಟೈಮ್ಸ್ ನೌ VMR: 132 ಸ್ಥಾನಗಳು
ಇಂಡಿಯಾ ಟಿವಿ-ಸಿಎನ್‌ಎಕ್ಸ್: 120 ಸ್ಥಾನಗಳು
ಸುದರ್ಶನ ಸುದ್ದಿ: 124 ಸ್ಥಾನಗಳು
ನಿಜವಾದ ಫಲಿತಾಂಶ
ಎನ್ ಡಿಎ: 352 ಸ್ಥಾನಗಳು
ಯುಪಿಎ: 91 ಸ್ಥಾನಗಳು
ಇದನ್ನೂ ಓದಿ: ಸೋಮವಾರ ಸಂತೆ ರದ್ದು ಸ್ಪಷ್ಟನೆ ; ಶಾಸಕ ಅಶೋಕ್ ರೈ