Prajwal Revanna: ಪ್ರಜ್ವಲ್ ರೇವಣ್ಣ ಕೇಸ್ – ಕೋರ್ಟ್ ನಲ್ಲಿ ನಡೆದ ವಾದ-ಪ್ರತಿವಾದ ಹೇಗಿತ್ತು?!

Prajwal Revanna: ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಿಂದ ಆಗಮಿಸಿ SITಗೆ ಸೆರೆಂಡರ್ ಆಗುವ ಮೂಲಕ 35 ದಿನಗಳ ಭಾರೀ ಹೈಡ್ರಾಮಕ್ಕೆ ಕೊನೆ ಹಾಡಿದ್ದಾರೆ. ಪ್ರಜ್ವಲ್ ಬಂಧನ ಬಳಿಕ ಅವರನ್ನು SIT ಕೋರ್ಟ್ ಗೆ ಹಾಜರುಪಡಿಸಿತು. ಬಳಿಕ ಪ್ರಜ್ವಲ್ ರೇವಣ್ಣ(Prajwal revanna) ಅವರನ್ನು ಜೂನ್ 6 ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಮಾಡಿದೆ. ಈ ನಡುವೆ ಕೋರ್ಟ್ ನಲ್ಲಿ ನಡೆದ ವಾದ-ಪ್ರತಿವಾದಗಳು ಹೇಗಿತ್ತು ಎಂಬುದರ ಒಂದು ಸಣ್ಣ ಝಲಕ್ ಇಲ್ಲಿದೆ ನೋಡಿ.

ಇದನ್ನೂ ಓದಿ: HSRP Number Plate: ಜೂನ್‌ 12 ರವರೆಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಅವಧಿ ವಿಸ್ತರಣೆ

ಪ್ರಜ್ವಲ್ ರೇವಣ್ಣ ಅವರನ್ನು ಗುರುವಾರ ಮಧ್ಯರಾತ್ರಿ ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು. ಬಳಿಕ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನಂತರ 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ಇದನ್ನೂ ಓದಿ: Prajwal Revanna: ಪ್ರಜ್ವಲ್‌ಗೆ ಶೀಘ್ರದಲ್ಲೇ ಪುರುಷತ್ವ ಪರೀಕ್ಷೆ ಸಾಧ್ಯತೆ

ಎಸ್‌ಐಟಿ ಪರ ವಕೀಲರ ವಾದ ಏನು?

ಎಸ್‌ಐಟಿ ಪರವಾಗಿ ವಾದ ಮಂಡನೆ ಮಾಡಿದ ಎಸ್‌ಎಸ್‌ಪಿ ಅಶೋಕ್ ನಾಯಕ್, ಇವನು ಒಬ್ಬ ವಿಕೃತ ಕಾಮಿ ಎನ್ನಿಸುತ್ತಿದೆ. ಇದು ಕೊನೇ ಉಸಿರು ಇರುವ ವರೆಗೂ ಶಿಕ್ಷೆ ನೀಡುವ ಕೇಸ್. ಇವರು ತುಂಬಾ ಅಪಾಯಕಾರಿ ಇದ್ದಾನೆ. ಸಂತ್ರಸ್ತ ಮಹಿಳೆ ಹೇಳಿಕೆ ಪ್ರಕಾರ ಅತ್ಯಾಚಾರ ಮಾಡಿದ್ದಾನೆ. ಈ ಪ್ರಕರಣದಲ್ಲಿ 100 ಕ್ಕೂ ಹೆಚ್ಚು ಸಂತ್ರಸ್ತಯರು ಇದ್ದಾರೆ. ಈ ಬಗ್ಗೆಮೀಡಿಯಾದಲ್ಲಿ ಸುದ್ದಿ ಅಗಬಾರದು ಅಂತ ತಡಯಾಜ್ಞೆ ತಂದಿದ್ದಾರೆ. ವಾಟ್ ಆ್ಯಪ್ ಕಾಲ್ ಮಾಡಿ ಬಟ್ಟೆ ಬಿಚ್ಚಲು ಹೇಳಿದ್ದಾನೆ. ವಿಡಿಯೋ ಮಾಡಿರೋ ಮೊಬೈಲ್ ಪತ್ತೆ ಮಾಡಬೇಕಿದೆ. ಜೊತೆಗೆ ಹಲವು ಸಾಕ್ಷಿಗಳನ್ನು ಪತ್ತೆ ಮಾಡಬೇಕಿದೆ. ಈತ ದೇಶ ಬಿಟ್ಟು ಹೋಗಿದ್ದ. ವಾಪಸು ಬರುವ ಉದ್ದೇಶ ಇರಲಿಲ್ಲ. ಯಾಕೆ ವಿದೇಶಕ್ಕೆ ಹೋಗಿದ್ದ ಅಂತ ಇಲ್ಲಿಯವರೆಗೆ ಪ್ರಜ್ವಲ್ ಹೇಳಿಲ್ಲ. ಹೀಗಾಗಿ ಆರೋಪಿ ವಿಚಾರಣೆ ತುಂಬಾ ಅಗತ್ಯ ಇದೆ. ಸಂತ್ರಸ್ತರಿಗೆ ಹೆದರಿಸಿ ಕಿರುಕುಳ ನೀಡಿದ್ದಾನೆ. ಈ ಪ್ರಕರಣದ ವಿಚಾರವಾಗಿ ನಿನ್ನೆ ಹಾಸನದಲ್ಲಿ ಪ್ರತಿಭಟನೆ ಅಗಿದೆ. ಇದನ್ನು ಎಲ್ಲಾ ತನಿಖೆ ಮಾಡಬೇಕಿದೆ ಎಂದು ಸರ್ಕಾರಿ ಪರ ವಕೀಲರು ವಾದ‌ ಮಂಡನೆ ಮಾಡಿದರು.

ಪ್ರಜ್ವಲ್ ಪರ ವಕೀಲರ ವಾದ ಏನು?: 

ನನ್ನ ಕಕ್ಷಿದಾರನಿಗೆ ಅವಮಾನ ಮಾಡಬಾರದು. ಇದೇ ಕೇಸ್‍ನಲ್ಲಿ ಎ1 ಆರೋಪಿಗೆ ಜಾಮೀನು ಸಿಕ್ಕಿದೆ. ಎಸ್‍ಐಟಿ ಮುಂದೆ ಪ್ರಜ್ವಲ್ ಬಂದು ಶರಣಾಗಿದ್ದಾರೆ. ಪ್ರಜ್ವಲ್ ಓಡಿ ಹೋಗಲ್ಲ. ಜವಾಬ್ದಾರಿ ಇರೋ ವ್ಯಕ್ತಿ. ಪೊಲೀಸರ ತನಿಖೆಗೆ ಪ್ರಜ್ವಲ್ ಸಹಕಾರ ಕೊಡುತ್ತಾರೆ. ಕೇವಲ ಒಂದು ದಿನ ಪೊಲೀಸ್ ಕಸ್ಟಡಿಗೆ ಕೊಡಿ. ಒಂದು ದಿನದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಬಹುದು ಎಂದು ಪ್ರಜ್ವಲ್ ಪರ ವಕೀಲರ ಕೋರ್ಟ್‍ಗೆ ಮನವಿ ಮಾಡಿದರು.

ಮಹಿಳಾ ಅಧಿಕಾರಿಗಳಿಂದಲೇ ಪ್ರಜ್ವಲ್ ಬಂಧನ:

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಜಾರಿಗೊಳಿಸಲಾಗಿದ್ದ ಬಂಧನ ವಾರಂಟ್ ಪ್ರತಿ ಹಿಡಿದುಕೊಂಡು ಪ್ರಜ್ವಲ್ ಬಂಧನಕ್ಕೆ ಮಹಿಳಾ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದರು. ಪ್ರಜ್ವಲ್ ರೇವಣ್ಣ ನಠು ರಾತ್ರಿ 12 ಗಂಟೆ ಸುಮಾರಿಗೆ ಬೆಂಗಳೂರಿನ ಕೇಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಮಹಿಳಾ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಮಹಿಳಾ ಪೊಲೀಸರು ಅವರನ್ನು ಬಂಧಿಸಿ ಜೀಪಿನಲ್ಲಿ ಕೂರಿಸಿಕೊಂಡು ಎಸ್ ಐಟಿ ಕಚೇರಿಗೆ ಕರೆದೊಯ್ದರು. ಹೀಗಾಗಿ ಮಹಿಳಾ ಅಧಿಕಾರಿಗಳಿಂದಲೇ ಪ್ರಜ್ವಲ್ ಬಂಧನ ಆಗಿದೆ.

Leave A Reply

Your email address will not be published.