Punith Rajkumar: ಪುನೀತ್ ರಾಜ್ ಕುಮಾರ್ ತಮ್ಮ ಮಡದಿ ಮತ್ತು ಮಕ್ಕಳಿಗೆ ಬಿಟ್ಟು ಹೋದ ಆಸ್ತಿ ಎಷ್ಟು?!

Puntih Rajkumar: ಡಾ. ಪುನೀತ್ ರಾಜ್ ಕುಮಾರ್(Punith Rajkumar) ಕನ್ನಡಿಗರು ಎಂದೂ ಮರೆಯದ ಅಮೂಲ್ಯ ರತ್ನ. ಇಂದಿಗೂ ಆ ಹೆಸರು ಎಂತವರ ಕಣ್ಣಲ್ಲೂ ನೀರು ತರಿಸಿಬಿಡುತ್ತದೆ. ಆ ವ್ಯಕ್ತಿತ್ವಕ್ಕೆ ಬೆಲೆ ಕಟ್ಟಲು ಆಗದು. ಕಟ್ಟಿದರೂ ಹಣ, ಆಸ್ತಿ ಸಂಪತ್ತೇ ಸೋತುಬಿಡುತ್ತದೆ. ಬೆಲೆ ಕಳೆದುಕೊಳ್ಳುತ್ತವೆ. ಏನೇ ಆದರೂ ಇಂದು ಕನ್ನಡಿಗರು ಅಪ್ಪು ನಮ್ಮೊಂದಿಗೆಯೇ ಇದ್ದಾರೆ ಎಂದು ಭಾವಿಸಿದ್ದಾರೆ.

ಇದನ್ನೂ ಓದಿ: Puttur: ಅಕ್ಷಯ್‌ ಕಲ್ಲೇಗ ಹತ್ಯೆ ಪ್ರಕರಣ; ವಿಶೇಷ ಸರಕಾರಿ ಅಭಿಯೋಜಕರಾಗಿ ನ್ಯಾಯವಾಗಿ ಮಹೇಶ್‌ ಕಜೆ ನೇಮಕ

ಹೌದು, ಅಪ್ಪು(Appu) ನಮ್ಮೊಂದಿಗೇ ಇದ್ದಾರೆ, ಅವರು ಎಲ್ಲಿಯೂ ಹೋಗಿಲ್ಲವೆಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ ಕಣ್ಣೀರು ಹಾಕ್ತಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲದೇ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದ ಪುನೀತ್‌ ರಾಜ್‌ ಕುಮಾರ್ ಕನ್ನಡಿಗರ ಮನೆ ಮಗ. ಅವರು ಬದುಕಿದ್ದಾಗ ಅವರು ಮಾಡುತ್ತಿದ್ದ ಯಾವ ಸಮಾಜ ಮುಖಿ ಕಾರ್ಯಗಳು ಯಾರಿಗೂ ತಿಳಿದಿರಲಿಲ್ಲ. ಆದರೆ ಅವರ ಕಾಲ ನಂತರ ಪ್ರತಿಯೊಂದೂ ಅಚ್ಚರಿ ಉಂಟುಮಾಡುವಂತಿತ್ತು. ಪುನೀತ್ ಸಾಧನೆ ಹಾಗಿತ್ತು. ಅಂತೆಯೇ ಬದುಕಿರುವವರೆಗೂ ಒಳ್ಳೆಯ ಕೆಲಸಗಳನ್ನೇ ಮಾಡಿದ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಹೆಂಡತಿ ಮತ್ತು ಮಕ್ಕಳಿಗಾಗಿ ಸಂಪಾದಿಸಿಟ್ಟ ಆಸ್ತಿ ಮೌಲ್ಯ ಎಷ್ಟು ? ಯಾವೆಲ್ಲಾ ಬೆಲೆ ಬಾಳುವ ವಸ್ತುಗಳು ಅವರಲ್ಲಿತ್ತು ಎಂಬ ಮಾಹಿತಿ ನಿಮಗಾಗಿ.

ಇದನ್ನೂ ಓದಿ: Punith Rajkumar: ಪುನೀತ್ ರಾಜ್ ಕುಮಾರ್ ತಮ್ಮ ಮಡದಿ ಮತ್ತು ಮಕ್ಕಳಿಗೆ ಬಿಟ್ಟು ಹೋದ ಆಸ್ತಿ ಎಷ್ಟು?!

ಪುನೀತ್ ರಾಜ್ ಕುಮಾರ್ ಅವರು ಬೆಂಗಳೂರಿನ ಸದಾಶಿವನಗರದಲ್ಲಿ ಬೃಹತ್‌ ಮನೆ ಕಟ್ಟಿಸಿದ್ದಾರೆ. ವರನಟ ಡಾ.ರಾಜಕುಮಾರ್ ಅವರ ಹುಟ್ಟೂರಾದ ಗಾಜಿನೂರಿನಲ್ಲೊಂದು ಬಂಗಲೆ ನಿರ್ಮಿಸಿದ್ದರು. ಇದರ ಜೊತೆಗೆ ಎರಡು ಲ್ಯಾಂಬೋರ್ಗಿನಿ, ವೋಲ್ವೋ & ಫಾರ್ಚುನರ್ ಕಾರುಗಳು, ಕೋಟಿಗಟ್ಟಲೇ ಬೆಲೆಬಾಳುವ ಬೈಕ್‌ಗಳು, ಪತ್ನಿ ಅಶ್ವಿನಿ ಅವರ ಬಳಿ 1KG ಚಿನ್ನ ಹೀಗೆ ಒಟ್ಟಾರೆ ನೂರು ಕೋಟಿಗೂ ಹೆಚ್ಚಿನ ಆಸ್ತಿಯನ್ನು ಸಂಪಾದಿಸಿ ಬಿಟ್ಟುಹೋಗಿದ್ದಾರೆ.

ಆದರೆ ನೂರು ಕೋಟಿ ಆಸ್ತಿಗೂ ಮಿಗಿಲಾಗಿ ಅಪ್ಪು ಗಳಿಸಿರುವುದು ಕೋಟ್ಯಂತರ ಅಭಿಮಾನಿಗಳ ಅಭಿಮಾನವನ್ನು ಹಾಗೂ ಪ್ರೀತಿಯನ್ನು. ನಾಡಿನ ಜನರ ಮಮತೆಯನ್ನು ಇಷ್ಟೆಲ್ಲಾ ಆಸ್ತಿಯನ್ನು ಹೊಂದಿರುವ ದೊಡ್ಮನೆ ನಗುವಿನ ರಾಜಕುಮಾರನನ್ನೇ ಕಳೆದುಕೊಂಡು ಅನಾಥವಾಗಿದೆ.

ಇದೆಲ್ಲಕ್ಕೂ ಮಿಗಿಲಾಗಿ ಅಪ್ಪು ಅವರು ಬದುಕಿದಷ್ಟು ದಿನ ತಾವು ದುಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗೆಂದು ಬಳಸುತ್ತಿದ್ದರು. ಸಾಕಷ್ಟು ವೃದ್ಧಾಶ್ರಮ, ಅನಾಥಾಶ್ರಮ ಮತ್ತು ಹೆಣ್ಣುಮಕ್ಕಳ ಉದ್ಯೋಗಕ್ಕೆ ಹಾಗೂ ಗೋಶಾಲೆಗಳಿಗೆ ದಾನ ಮಾಡಿದ್ದಾರೆ. ಇದೆಲ್ಲದರ ಜೊತೆಗೆ 1,800 ಹೆಣ್ಣು ಮಕ್ಕಳ ಶಿಕ್ಷಣದ ಖರ್ಚನ್ನು ನೋಡಿಕೊಳ್ಳುತ್ತಾ ಸಾಕಷ್ಟು ನಿಸ್ವಾರ್ಥ ಸೇವೆಗಳನ್ನು ಮಾಡಿದ್ದಾರೆ ಎಂಬುದು ನಮಗೆಲ್ಲರಿಗೂ ಹೆಮ್ಮೆ.

Leave A Reply

Your email address will not be published.