Exit Poll Results: ಎಕ್ಸಿಟ್ ಪೋಲ್- 2019, 2014 ರಲ್ಲಿ ಏನಾಗಿತ್ತು, ಸಮೀಕ್ಷೆಗಳು ಹೇಳಿದ್ದು ಎಷ್ಟರಮಟ್ಟಿಗೆ ಸತ್ಯವಾಗಿತ್ತು ?
Exit poll 2024: ಈ ಸಲದ ಲೋಕಸಭಾ ಚುನಾವಣಾ ಸಮೀಕ್ಷೆಗಳ ಮಾದರಿಯಲ್ಲಿಯೇ ಕಳೆದೆರಡು ಲೋಕಸಭಾ ಚುನಾವಣೆಗಳ ಸಮೀಕ್ಷೆಗಳು ಜನರಲ್ಲಿ ಕುತೂಹಲವನ್ನು ಉಂಟು ಮಾಡಿದ್ದವು. ಸಮೀಕ್ಷೆಗಳು ಎಷ್ಟರಮಟ್ಟಿಗೆ ಸತ್ಯವಾಗುತ್ತವೆ ಮತ್ತು ಯಾರ ಸಮೀಕ್ಷೆ ಪ್ರಕಾರ ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತದೆ ಎನ್ನುವ ಆಸಕ್ತಿ ಜನರಲ್ಲಿ ಮೂಡಿಸಿತ್ತು.
ಇದನ್ನೂ ಓದಿ: Dakshina Kannada: ದ.ಕ; ಜೂ.4 ಪಕ್ಷಗಳ ವಿಜಯೋತ್ಸವಕ್ಕೆ ನಿಷೇಧ-ದ.ಕ.ಜಿಲ್ಲಾಧಿಕಾರಿ ಆದೇಶ
2019ರ ಎಕ್ಸಿಟ್ ಪೋಲ್ Vs ರಿಸಲ್ಟ್
2019ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಸುಮಾರು 285 ಸ್ಥಾನಗಳು ಬರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ, ಬಿಜೆಪಿ ನೇತೃತ್ವದ ಮೈತ್ರಿಕೂಟವು 353 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಿತ್ತು. ಆಗ ಬಿಜೆಪಿ ಪಕ್ಷವು 303 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ ಪಕ್ಷವು 52 ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು ಒಟ್ಟು ಯುಪಿಎ ಒಕ್ಕೂಟ 91 ಸ್ಥಾನಗಳನ್ನು ಗಳಿಸಿತ್ತು.
2019ರಲ್ಲಿ ಯಾವ ಪಕ್ಷಗಳು ಎಷ್ಟೆಷ್ಟು ಸ್ಥಾನಗಳನ್ನು ಪಡೆದಿದ್ದವು ಎಂದು ತಿಳಿಯಲು ಈ ಚಾರ್ಟ್ ನೋಡಿ.
ಇದನ್ನೂ ಓದಿ: Exit Poll: ಎಕ್ಸಿಟ್ ಪೋಲ್- 2024 ಪ್ರಸಾರ ವೀಕ್ಷಿಸಲು ಕಾದು ಕೂತ ಜನತೆ, ಇಂದು ಸಂಜೆ 6.30 ಕ್ಕೆ ಚುನಾವಣಾ ಸಮೀಕ್ಷೆ
2014ರ ಎಕ್ಸಿಟ್ ಪೋಲ್ Vs ರಿಸಲ್ಟ್
2014ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಸುಮಾರು 257-340 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಎನ್‌ಡಿಎ 336 ಸ್ಥಾನಗಳನ್ನು ಭರ್ಜರಿ ಗೆಲುವು ಸಾಧಿಸಿತ್ತು. 2014ರಲ್ಲಿ ಕಾಂಗ್ರೆಸ್ ಪಕ್ಷವು ಕೇವಲ 44 ಸೀಟುಗಳನ್ನು ಪಡೆದು ಹೀನಾಯ ಸ್ಥಿತಿ ತಲುಪಿತ್ತು. ಆಶ್ಚರ್ಯವೆಂದರೆ ಜಯಲಲಿತ ನೇತೃತ್ವದ ಎಐಡಿಎಂಕೆ ಪಕ್ಷವು 37 ಸೀಟುಗಳನ್ನು ಪಡೆದು ರಾಷ್ಟ್ರದಲ್ಲಿಯೇ ಮೂರನೆಯ ಅತಿ ಹೆಚ್ಚು ಸೀಟು ಗೆದ್ದ ಪಕ್ಷವಾಗಿ ಹೊರಹೊಮ್ಮಿತ್ತು. ಪಶ್ಚಿಮ ಬಂಗಾಳದ ಅಧಿನಾಯಕಿ ಮಮತಾ ಬ್ಯಾನರ್ಜಿಯವರ ಆಲ್ ಇಂಡಿಯಾ ಮೂಲಕ ಕಾಂಗ್ರೆಸ್ ಪಕ್ಷವು 34 ಸೀಟುಗಳನ್ನು ಬಾಚಿಕೊಂಡಿತ್ತು.
2014ರಲ್ಲಿ ಯಾವ ಪಕ್ಷಗಳು ಎಷ್ಟೆಷ್ಟು ಸ್ಥಾನಗಳನ್ನು ಪಡೆದಿದ್ದವು ಎಂದು ತಿಳಿಯಲು ಈ ಚಾರ್ಟ್ ನೋಡಿ.
ಯಾವ್ಯಾವ ಚುನಾವಣಾ ಭವಿಷ್ಯ ನಿಜವಾಗಿತ್ತು ?