Chhota Rajan: ಅಂಡರ್ ವರ್ಲ್ಡ್ ಡಾನ್ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

Chhota Rajan: ಅಂಡರ್ ವರ್ಲ್ಡ್ ಡಾನ್ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಮುಂಬೈ ನ್ಯಾಯಾಲಯ ಗುರುವಾರ ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ. 2001 ರಲ್ಲಿ ನಡೆದ ಹೋಟೆಲ್‌ ಉದ್ಯಮಿ ಜಯ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಛೋಟಾ ರಾಜನ್ (Chhota Rajan) ಅಪರಾಧಿ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: Job Alert: ಭಾರತೀಯ ಸೇನೆಯಲ್ಲಿ ಉದ್ಯೋಗವಿದೆ! ಉತ್ತಮ ಸಂಬಳ ಕೂಡ

ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (MCOCA) ಅಡಿಯಲ್ಲಿ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ.ಎಂ.ಪಾಟೀಲ್, ಡಾನ್ ರಾಜನ್ ದೋಷಿ ಎಂದು ತೀರ್ಪು ನೀಡಿದ್ದಾರೆ. ಮುಂಬೈ ಪಾತಕ ಲೋಕದ ಮತ್ತು ದಾವುದ್ ಇಬ್ರಾಹಿಂ ಒಂದು ಕಾಲದ ಸಹಚರ ಜಯ ಶೆಟ್ಟಿ ಅವರು ಸೆಂಟ್ರಲ್ ಮುಂಬೈನ ಗಾಮ್‌ದೇವಿಯಲ್ಲಿರುವ ಗೋಲ್ಡನ್ ಕ್ರೌನ್ ಹೋಟೆಲ್‌ನ ಮಾಲೀಕರಾಗಿದ್ದರು. ಇವರಿಗೆ ಛೋಟಾ ರಾಜನ್ ಗ್ಯಾಂಗ್‌ನಿಂದ ವಶೀಲಿ ಕರೆಗಳು ಬರುತ್ತಿತ್ತು. ಆದರೆ ಜಯ ಶೆಟ್ಟಿ ಅದಕ್ಕೆ ಬಗ್ಗಿರಲಿಲ್ಲ. ಹಾಗಾಗಿ 2001ರ ಮೇ 4 ರಂದು ಅವರದೇ ಹೋಟೆಲ್‌ನಲ್ಲಿ ರಾಜನ್‌ ಗ್ಯಾಂಗ್‌ನ ಇಬ್ಬರು ಶಾರ್ಪ್ ಶೂಟರ್ ಗಳು ಜಯ ಶೆಟ್ಟಿಯನ್ನು ಗುಂಡಿಕ್ಕಿ ಕೊಂದಿದ್ದರು.

ಇದನ್ನೂ ಓದಿ: Jio Finance: ಜಿಯೋ ಫೈನಾನ್ಶಿಯಲ್ ಸರ್ವೀಸಸ್ ನಿಂದ ಜಿಯೋಫೈನಾನ್ಸ್ ಡಿಜಿಟಲ್ ಬ್ಯಾಂಕಿಂಗ್ ಆರಂಭ !!

ಹೋಟೆಲ್ ಮಾಲೀಕರಿಗೆ ಬೆದರಿಕೆ ಕರೆ ಬಂದಿದ್ದಾಗ ಮಹಾರಾಷ್ಟ್ರ ಪೊಲೀಸರು ಮಾಲೀಕನಿಗೆ ಭದ್ರತೆ ನೀಡಿದ್ದರು. ಆದರೆ ತದನಂತರ ಭದ್ರತೆಯನ್ನು ಹಿಂಪಡೆಯಲಾಗಿತ್ತು ಭದ್ರತೆ ಹಿಂದೇ ತೆಗೆದ ಕೇವಲ ಎರಡು ತಿಂಗಳುಗಳ ಒಳಗೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆದರೆ ಹೋಟೆಲ್‌ನ ಮ್ಯಾನೇಜರ್ ಮತ್ತು ಉದ್ಯೋಗಿಗಳು ಶೂಟರ್‌ಗಳನ್ನು ಓಡಿ ಬೆನ್ನಟ್ಟಿದ್ದರು. ಹಾಗೆ ಚೇಸ್ ಮಾಡಿ ಅವರಲ್ಲಿ ಒಬ್ಬನನ್ನು ಹಿಡಿದಿದ್ದರು. 2018 ರಲ್ಲಿ, ವೋರಾ ಎಂಬಾತನನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಲಾಯಿತು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಛೋಟಾ ರಾಜನ್ ಹತ್ತು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಪೊಲೀಸರ ಕಣ್ಣು ತಪ್ಪಿಸಿ ಓಡಾಡುವುದರಲ್ಲಿ ಚೋಟ ರಾಜನ್ ಸಿದ್ದಹಸ್ತ. ಆದ್ರೆ ಕೊನೆಗೆ ಆತ ಭಾರತ ಬಿಡಬೇಕಾಯಿತು. ನಂತರ ಆತ ಹಲವು ದ್ವೀಪ ರಾಷ್ಟ್ರಗಳಲ್ಲಿ ಅಡಗಿಕೊಂಡಿದ್ದ. ಆತನನ್ನು 2015ರ ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದಲ್ಲಿ ಬಂಧಿಸಿದ ನಂತರ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಬಳಿಕ ಛೋಟಾ ರಾಜನ್ ದೆಹಲಿಯ ತಿಹಾರ್ ಜೈಲಿನಲ್ಲಿಟ್ಟು ವಿಚಾರಣೆ ನಡೆಸಲಾಗಿತ್ತು.

Leave A Reply

Your email address will not be published.