Home Karnataka State Politics Updates D K Shivkumar: ನನ್ನ ಮತ್ತು ಸಿಎಂ ವಿರುದ್ಧ ಕೇರಳದಲ್ಲಿ ಅಘೋರಿಗಳಿಂದ ಶತ್ರು ಭೈರವಿ ಯಾಗ...

D K Shivkumar: ನನ್ನ ಮತ್ತು ಸಿಎಂ ವಿರುದ್ಧ ಕೇರಳದಲ್ಲಿ ಅಘೋರಿಗಳಿಂದ ಶತ್ರು ಭೈರವಿ ಯಾಗ ನಡೆಯುತ್ತಿದೆ – ಡಿಕೆಶಿ ಸ್ಫೋಟಕ ಹೇಳಿಕೆ

DK Shivakumar

Hindu neighbor gifts plot of land

Hindu neighbour gifts land to Muslim journalist

D K Shivkumar: ತಮ್ಮ ಹಾಗೂ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗವೊಂದನ್ನು ಮಾಡಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್(D K Shivkumar)ಹೇಳಿದ್ದಾರೆ.

ಇದನ್ನೂ ಓದಿ: Health Tips: ಮೂತ್ರ ಹಳದಿಯಾಗಿ ಮೂತ್ರದ ಹರಿವು ಕೂಡ ಕಡಿಮೆಯಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ಬೆಂಗಳೂರಿನಲ್ಲಿ(Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ಅವರು ಸ್ಪೋಟಕ ಹೇಳಿಕೆ ನೀಡಿದ್ದು, ನನ್ನ ವಿರುದ್ಧವಾಗಿ, ಸಿಎಂ ಸಿದ್ದರಾಮಯ್ಯನವರ(CM Siddaramaiah)ವಿರುದ್ಧವಾಗಿ ಹಾಗೂ ಸರ್ಕಾರದ ವಿರುದ್ದವಾಗಿ ಕೇರಳದ ರಾಜರಾಜೇಶ್ವರಿ ನಗರದಲ್ಲಿ ಅಘೋರಿಗಳಿಂದ ಶತ್ರು ಭೈರವಿ ಯಾಗ ಮಾಡಿಸಲಾಗುತ್ತಿದೆ. ಉತ್ತರ ಭಾರತದಿಂದ ಬಂದಿರುವ ಅಘೋರಿಗಳ ಗುಂಪೊಂದು ಈ ಯಾಗವನ್ನು ನಡೆಸುತ್ತಿದೆ. ಈ ಯಾಗದಲ್ಲಿ ಪಂಚ ಬಲಿಯನ್ನೂ ಕೊಡಲಾಗುತ್ತದೆ. ಈ ಯಾಗದ ಹಿಂದೆ ಯಾರು ಯಾರು ಇದ್ದಾರೆಂಬುದು ನನಗೆ ಗೊತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Mujaffarpur: ‘ಬಾಬಾ’ ಕರೆದನೆಂದು ಮನೆ ಬಿಟ್ಟ 3 ಹುಡುಗಿಯರು ಮಥುರಾದಲ್ಲಿ ಹೆಣವಾಗಿ ಪತ್ತೆ !!

ಅಲ್ಲದೆ ಈ ಯಾಗಕ್ಕೆ 21 ಮೇಕೆ, 3 ಎಮ್ಮೆ, 21 ಕುರಿಗಳು ಸೇರಿದಂತೆ ಪಂಚ ಬಲಿ ಕೊಡುತ್ತಿದ್ದಾರೆ. ಅವರ ಪ್ರಯತ್ನ ನಡೀತಾ ಇದೆ. ಆದರೆ ದೇವರು ನಮ್ಮನ್ನು ಸದಾ ಕಾಪಾಡುತ್ತಾನೆ ಎಂದೂ ಹೇಳಿದ್ದಾರೆ.

ಏನಿದು ಯಾಗ?

ಶತ್ರು ಮರ್ಧನ ಯಾಗ ಅಥವಾ ವಿಷ ಯಾಗ ಎಂದೇ ಕರೆಯುವ ಈ ಯಾಗವವನ್ನು ಶತ್ರುವನ್ನು ಮಣಿಸಲು ಮಾಡುತ್ತಾರೆ. ಈ ಯಾಗದಿಂದ ಶತ್ರುವಿನ ಮೇಲೆ ಎರಡು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಒಂದೋ ಶತ್ರುವಿನ ಬುದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಅಥವಾ ಶತ್ರು ಸಾವನ್ನಪ್ಪುತ್ತಾನೆ. ಕೆಲವೊಮ್ಮೆ ವೈದ್ಯಕೀಯ ವ್ಯವಸ್ಥೆಗೂ ಸಹ ವ್ಯಕ್ತಿಗೆ ಬಂದಿರುವ ರೋಗ ಯಾವುದು ಎಂದು ತಿಳಿಯಲು ಸಾಧ್ಯವಾಗುವುದಿಲ್ಲ. ಈ ಯಾಗದಿಂದ ಇಂದಿಗೂ ಫಲ ಪಡೆಯಬಹುದು ಎನ್ನುವುದಕ್ಕೆ ಹಲವು ನಿದರ್ಶನಗಳಿವೆ.