Mumbai: ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ; ಮಗಳು ಗರ್ಭಿಣಿ

Share the Article

Mumbai: ಅಪ್ರಾಪ್ತೆ ಮಗಳ ಮೇಲೆ ತಂದೆ ಅತ್ಯಾಚಾರ ಮಾಡಿರುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಪೊಲೀಸರು ವ್ಯಕ್ತಿಯನ್ನು ಬಂಧನ ಮಾಡಿದ್ದಾರೆ. ತಂದೆಯ ವಿರುದ್ಧ ಪೊಲೀಸರು ಅತ್ಯಾಚಾರ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Gold: ಇನ್ಮುಂದೆ ಮನೆಯಲ್ಲಿ ಅಗತ್ಯಕ್ಕೂ ಹೆಚ್ಚು ಚಿನ್ನ ಶೇಖರಿಸಿ ಇಡುವಂತಿಲ್ಲ! ಸರ್ಕಾರದ ಹೊಸ ನಿಯಮ ಪಾಲಿಸಲು ಮರೆಯಬೇಡಿ!

ಮುಂಬೈನ ಉಪನಗರ ಪ್ರದೇಶದಲ್ಲಿ ವಾಸಿಸುತ್ತಿದ್ದು, ಹೊಟ್ಟೆನೋವಿನಿಂದ ಬಳಲುತ್ತಿದ್ದ ಆಕೆಯನ್ನು ತಪಾಸಣೆಗೆಂದು ಬಾಂದ್ರಾದ ಬಾಬಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಅಲ್ಲಿ ಪರಿಶೀಲನೆ ಮಾಡಿದಾಗ ಆಕೆ ಗರ್ಭಿಣಿ ಎಂದು ಗೊತ್ತಾಗಿದೆ. ಈ ಕುರಿತು ಮನೆಮಂದಿ ಪ್ರಶ್ನೆ ಮಾಡಿದಾಗ ತನ್ನ ತಂದೆ ಅತ್ಯಾಚಾರ ಮಾಡಿರುವ ವಿಷಯವನ್ನು ಹುಡುಗಿ ಬಹಿರಂಗಪಡಿಸಿದಳು.

ಇದನ್ನೂ ಓದಿ: Parliment Election: ಕರ್ನಾಟಕ ಫಲಿತಾಂಶದ ಬಗ್ಗೆ ಸಟ್ಟಾ ಬಜಾರ್ ಅಚ್ಚರಿ ಭವಿಷ್ಯ !!

ಆರೋಪಿ ತಂದೆಯ ಮೇಲೆ ಕಳ್ಳತನ ಮತ್ತು ಅತ್ಯಾಚಾರ ಪ್ರಕರಣ ಇದ್ದಿದ್ದು, ಕ್ರಿಮಿನಲ್‌ ಇತಿಹಾಸವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಜೈಲಿನಲ್ಲಿದ್ದು, 2023 ರಲ್ಲಿ ಜೈಲಿನಿಂದ ಬಿಡುಗಡೆ ಹೊಂದಿದ್ದು, ಅಂದಿನಿಂದ ಪ್ರತಿದಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡುತ್ತಿದ್ದ ಎನ್ನಲಾಗಿದೆ. ಈತನ ಕ್ರಿಮಿನಲ್‌ ಹಿನ್ನೆಲೆಯ ಕಾರಣದಿಂದ ಹೆಂಡತಿ ಈತನೊಂದಿಗೆ ವಾಸಿಸುವುದಿಲ್ಲ. ಮನೆಯಲ್ಲಿ ಬಾಲಕಿ, ಮತ್ತು ಆರೋಪಿಯ ತಾಯಿ ಮಾತ್ರ ವಾಸವಿದ್ದರು ಎನ್ನಲಾಗಿದೆ.

Leave A Reply