Silver Price: 1 ಲಕ್ಷ ರೂ ಗಡಿ ದಾಟಿದ ಕೆಜಿ ಬೆಳ್ಳಿ !!

Silver Price: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ ಸಾಮಾನ್ಯವಾಗಿತ್ತು. ಆದರೆ ಇತ್ತೀಚಿಗೆ ಚಿನ್ನದೊಂದಿಗೆ ಬೆಳ್ಳಿ ದರವೂ ಹೆಚ್ಚುತ್ತಿದೆ. ಕಳೆದ 15 ದಿನಗಳಲ್ಲಿ ಬೆಳ್ಳಿ ದರದಲ್ಲಿ ಭಾರಿ ಏರಿಕೆಯಾಗಿದ್ದು ಕೆಜಿ ಬೆಳ್ಳಿಯ ದರ( Silver Price)ಒಂದು ಲಕ್ಷ ಗಡಿ ದಾಟಿದೆ.

ಇದನ್ನೂ ಓದಿ: T20 World Cup 2024: ಭಾರತ-ಪಾಕ್‌ ಪಂದ್ಯಕ್ಕೆ ಉಗ್ರರ ಕರಿನೆರಳು; ʼಒಂಟಿ ತೋಳʼ ದಾಳಿ ಬೆದರಿಕೆ

ಚಿನ್ನದ ದರ(Gold Price)ದಲ್ಲಿ ಏರಿಕೆ ಎಂದರೆ ಅದು ಸಾಮಾನ್ಯ ಸಂಗತಿ. ಆದರೆ ಬೆಳ್ಳಿ ದರದಲ್ಲಿ ಭಾರೀ ಏರಿಕೆ ಎಂದರೆ ಅದು ಕಂಗಾಲಾಗುವ ಸಂಗತಿ. ಇದೀಗ ಆ ಪರಿಸ್ಥಿತಿ ಬಂದೊದಗಿದ್ದು ತಿಂಗಳ ಹಿಂದಷ್ಟೇ ಕೆ.ಜಿ.ಗೆ 83000 ರು.ನ ಆಸುಪಾಸಿನಲ್ಲಿದ್ದ ಬೆಳ್ಳಿ ಬೆಲೆ ಕಳೆದ 3 ದಿನಗಳಲ್ಲಿ 6000-7000 ರು.ನಷ್ಟು ಹೆಚ್ಚಳವಾಗಿದೆ. ಪರಿಣಾಮ ದೇಶದ ವಿವಿಧ ನಗರಗಳ ಮಾರುಕಟ್ಟೆಯಲ್ಲಿ 1 ಲಕ್ಷ ರು.ಗಳ ಗಡಿ ದಾಟಿದೆ.

ಇದನ್ನೂ ಓದಿ: Patna: ಆಸ್ಪತ್ರೆಯಲ್ಲಿ ಗರ್ಭಿಣಿ ಸಾವು; ಮಹಡಿಯಿಂದ ನರ್ಸ್‌ ಅನ್ನು ಎಸೆದು ಸೇಡು ತೀರಿಸಿಕೊಂಡ ಕುಟುಂಬ

ಹೌದು, ಚಿನ್ನದ ಪ್ರಮುಖ ಮಾರುಕಟ್ಟೆಗಳಾದ ಚೆನ್ನೈ, ಹೈದ್ರಾಬಾದ್, ತಿರುವನಂತಪುರ, ಕಟಕ್ ಸೇರಿದಂತೆ ಹಲವು ನಗರಗಳಲ್ಲಿ ಬುಧವಾರ ಬೆಳ್ಳಿ ಬೆಲೆ ಕೆ.ಜಿ.ಗೆ 1 ಲಕ್ಷ ರು.ಗಳ ಗಡಿ ದಾಟಿದೆ. ಉಳಿದಂತೆ ದೆಹಲಿಯಲ್ಲಿ 97100 ರು., ಮುಂಬೈನಲ್ಲಿ 94180 ರು., ಬೆಂಗಳೂರಿನಲ್ಲಿ 97100 ರು. ತಲುಪಿದೆ. ಇದೇ ವೇಳೆ ಬುಧವಾರ ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 250 ರು. ಏರಿಕೆ ಕಂಡು 73200 ರು. ತಲುಪಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (1 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 6,710 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 7,320 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

Leave A Reply

Your email address will not be published.