Home News SIT: ಪ್ರಜ್ವಲ್ ಅರೆಸ್ಟ್ ಆಗುತ್ತಿದ್ದಂತೆ SIT ಮೊದಲು ಮಾಡುವುದೇ ಧ್ವನಿ ಪರೀಕ್ಷೆ !!

SIT: ಪ್ರಜ್ವಲ್ ಅರೆಸ್ಟ್ ಆಗುತ್ತಿದ್ದಂತೆ SIT ಮೊದಲು ಮಾಡುವುದೇ ಧ್ವನಿ ಪರೀಕ್ಷೆ !!

SIT

Hindu neighbor gifts plot of land

Hindu neighbour gifts land to Muslim journalist

SIT: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇ 31ರಂದು ಭಾರತಕ್ಕೆ ಬಂದು ಸೆರೆಂಡರ್ ಆಗುವುದಾಗಿ ತಿಳಿಸಿದ್ದಾರೆ. ಈ ವೇಳೆ SIT ಅವರನ್ನು ವಶಪಡಿಸಿಕೊಳ್ಳಲಿದೆ.

ಇದನ್ನೂ ಓದಿ: Belluru: ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಹಲ್ಲೆ ಪ್ರಕರಣ: ಬೆಳ್ಳೂರು ಪ್ರಕ್ಷುಬ್ಧ

ಮೇ 31 ರಂದು ಪ್ರಜ್ವಲ್ ರೇವಣ್ಣನನ್ನು(Prajwal Revanna) ವಶಕ್ಕೆ ಪಡೆಯುವ SIT ಮೊದಲು ಧ್ವನಿ ಪರೀಕ್ಷೆ ನಡೆಸಲು ತಯಾರಿ ನಡೆಸಿದೆ. ಹೌದು, ಸಂಸದ(MP) ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದರೆ ಧ್ವನಿ ಪರೀಕ್ಷೆ ನಡೆಸಲು ವಿಶೇಷ ತನಿಖಾ ದಳ (ಎಸ್‌ಐಟಿ) ಅಲೋಚಿಸಿದೆ. ಈ ಧ್ವನಿ ಪರೀಕ್ಷೆಯಲ್ಲಿ ಪೆನ್‌ ಡ್ರೈವ್‌ನಲ್ಲಿರುವ ಅಶ್ಲೀಲ ವಿಡಿಯೋಗಳಲ್ಲಿ ಕೇಳಿ ಬರುವ ಪುರುಷನಿಗೆ ಹೋಲಿಕೆಯಾದರೆ ಸಂಸದರ ವಿರುದ್ಧದ ಅತ್ಯಾಚಾರ ಕೃತ್ಯಗಳ ರುಜುವಾತಿಗೆ ಎಸ್‌ಐಟಿಗೆ ಮಹತ್ವದ ವೈದ್ಯಕೀಯ ಸಾಕ್ಷ್ಯ ಲಭಿಸಿದಂತಾಗುತ್ತದೆ.

ಇದನ್ನೂ ಓದಿ: Udupi: ಉಡುಪಿಯ ಗ್ಯಾಂಗ್‌ವಾರ್‌ ಪ್ರಕರಣ; ಗಾಯಾಳುವಿಗೆ ಚಿಕಿತ್ಸೆ ನೀಡಿದ ವೈದ್ಯರ ಮೇಲೆ ಬಿತ್ತು ಕೇಸು

ಅಂದಹಾಗೆ ಈಗಾಗಲೇ ತಾನು ಹೇಳಿದಂತೆ ಪ್ರಜ್ವಲ್ ಭಾರತಕ್ಕೆ ಬರಲು ಜರ್ಮನಿಯ ಮ್ಯೂನಿಕ್‍ನಿಂದ ಬೆಂಗಳೂರಿಗೆ(Bengaluru) ಬರೋಕೆ ಪ್ರಜ್ವಲ್ ರೇವಣ್ಣ ಅವರು ಲುಫ್ತಾನ್ಸಾ ಏರ್‌ಲೈನ್ಸ್ ಬುಕ್ ಮಾಡಿದ್ದಾರೆ. ಮೇ 31ರ ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರಿಗೆ ಬರ್ತಿದ್ದಂತೆ ಏರ್ ಪೋರ್ಟ್‍ನಲ್ಲೇ ಲಾಕ್ ಆಗುವ ಸಾಧ್ಯತೆಗಳಿವೆ.