Putturu: ಕೊಳವೆ ಬಾವಿ ಸ್ವಚ್ಛ ಮಾಡುತ್ತಿದ್ದ ಬೋರ್‌ವೆಲ್‌ ಲಾರಿ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ

Putturu: ದ. ಕ ಜಿಲ್ಲೆಯ ಪುತ್ತೂರಿನಲ್ಲಿ ಕೊಳವೆ ಬಾವಿ ಸ್ವಚ್ಛ ಮಾಡುವಾಗ ಬೋರ್ ವೆಲ್ ಗಾಡಿಗೆ ಕಾಂಪೌಂಡ್ ಹೊರಗೆ ನಿಂತು ಅನ್ಯಕೋಮಿನ ಯುವಕರು ಕಲ್ಲು ತೂರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Bengaluru Deep Fake: 9 ನೇ ತರಗತಿ ವಿದ್ಯಾರ್ಥಿನಿಯ ಅಶ್ಲೀಲ ಚಿತ್ರ ಹರಿಬಿಟ್ಟ ವಿದ್ಯಾರ್ಥಿ ಸೇರಿ ಮೂವರ ಸೆರೆ

ಹೌದು, ಮೇ 27ರ ಸಂಜೆ ಪುತ್ತೂರಿನ(Putturu) ನರಿಮೊಗರು ಗ್ರಾಮದ ಮೇಘಾ ಪ್ರುಟ್‌ ಪ್ರೊಸ್ಸೆಸಿಂಗ್‌ ಕಂಪನಿ “ಬಿಂದು’ ಸಂಸ್ಥೆಯ ಫ್ಯಾಕ್ಟರಿ ಆವರಣದಲ್ಲಿ ಕೊಳವೆಬಾವಿಯನ್ನು ಶುದ್ಧೀಕರಿಸುವ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಗಳಾದ ಸಮದ್‌(Samad) ಮತ್ತು ಸಲೀಂ(Salim) ಹಾಗೂ ಇತರರು ಸೇರಿಕೊಂಡು ಸಂಸ್ಥೆಯ ಆವರಣದ ಹೊರಭಾಗದಲ್ಲಿ ನಿಂತು ಬೋರ್‌ವೆಲ್ (Borewell) ಕೊರೆಯುತ್ತಿದ್ದ ಲಾರಿ (Lorry) ಮೇಲೆಕಲ್ಲು ತೂರಾಟ ನಿರತ ದೃಶ್ಯ ಕಂಡುಬಂದಿದೆ.

ಇದನ್ನೂ ಓದಿ: K-CET Results: ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ; ತಾತ್ಕಾಲಿಕ ಫಲಿತಾಂಶ ಪ್ರಕಟ

ಏಕೆ ಕಲ್ಲು ತೂರಾಟ?

ನೀರಿನ ಘಟಕದ ಬೋರ್‌ವೆಲ್‌ಗಳನ್ನು ಫ್ಲಶ್ ಮಾಡುವ ಬದಲು ಅಂದರೆ ಶುದ್ಧೀಕರಿಸುವ ಬದಲು ಹೊಸದಾಗಿ ಬೋರ್‌ವೆಲ್ ಕೊರೆಸಲಾಗುತ್ತಿದೆ. ಅಲ್ಲದೆ ಕೊಳವೆಬಾವಿ ಆಳ ಮಾಡುವುದರಿಂದ ನಾವು ಬಳಸುವ ಕೊಳವೆಬಾವಿಯ ನೀರು ಕಡಿಮೆ ಆಗುತ್ತದೆ ಎಂದು ಕೊಳವೆ ಬಾವಿ ಕೊರೆಯುವ ಯಂತ್ರದ ಶಬ್ದ ಕೇಳಿದ ಕೆಲವು ಯುವಕರು ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ. ಈ ವಿಷಯದಲ್ಲಿ ಆಕ್ರೋಶಗೊಂಡು ಕಲ್ಲು ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಅಂದಹಾಗೆ ಸಣ್ಣ ಸಣ್ಣ ಮಕ್ಕಳು ಕೂಡ ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ನೀರಿನ ಘಟಕದವರು ಕೂಡ ಕಲ್ಲು ತೂರಾಟ ಮಾಡಿದ್ದಾರೆ.ಇದರಿಂದ ಕೊಳವೆಬಾವಿ ಯಂತ್ರಕ್ಕೆ ಕಲ್ಲು ತಾಗಿದೆ. ಆಪರೇಟರ್‌ಗೆ ಗಾಯ ಉಂಟಾಗಿದೆ. ಘಟನೆಯ ಬಗ್ಗೆ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

Leave A Reply

Your email address will not be published.