Home News Rahul Gandhi: ಭಾಷಣ ಮಾಡುತ್ತಲೇ ಸೆಖೆ ಎಂದು ತಲೆ ಮೇಲೆ ನೀಲು ಸುರಿದುಕೊಂಡ ರಾಹುಲ್ ಗಾಂಧಿ...

Rahul Gandhi: ಭಾಷಣ ಮಾಡುತ್ತಲೇ ಸೆಖೆ ಎಂದು ತಲೆ ಮೇಲೆ ನೀಲು ಸುರಿದುಕೊಂಡ ರಾಹುಲ್ ಗಾಂಧಿ !!

Rahul Gandhi

Hindu neighbor gifts plot of land

Hindu neighbour gifts land to Muslim journalist

Rahul Gandhi: ಭವಿಷ್ಯದ ನಾಯಕ ಎಂದೆ ಕಾಂಗ್ರೆಸ್ ಬಿಂಬಿಸುತ್ತಿರುವ ರಾಹುಲ್ ಗಾಂಧಿ(Rahul Gandhi)ಯವರು. ಆಗಾಗ ತಮ್ಮ ಹಾವ ಭಾವಗಳಿಂದ, ನಡವಳಿಕೆಗಳಿಂದ, ವಿಚಿತ್ರವಾದ ವರ್ತನೆಗಳಿಂದ, ಭರದಲ್ಲಿ ಮಾತಾಡೋ ಮಾತುಗಳಿಂದ ಸುದ್ದಿಯಾಗುತ್ತಿರುತ್ತಾರೆ. ಅಂತೆಯೇ ಇದೀಗ ಚುನಾವಣೆ ಪ್ರಚಾರದ ವೇಳೆ ಭಾಷಣ ಮಾಡುತ್ತಲೇ ರಾಹುಲ್ ಗಾಂಧಿ ಸೆಖೆ ಎಂದು ತಲೆ ಮೇಲೆ ನೀರು ಸುರಿದುಕೊಂಡಿದ್ದಾರೆ.

ಇದನ್ನೂ ಓದಿ: Kasaragod: ನಾಪತ್ತೆಯಾಗಿದ್ದ ಶಿಕ್ಷಕಿ ಅನ್ಯಕೋಮಿನ ಯುವಕನ ಜೊತೆ ವಿವಾಹವಾಗಿ ಪತ್ತೆ; ಲವ್‌ಜಿಹಾದ್‌ ಆರೋಪ

ಹೌದು, ಉತ್ತರ ಪ್ರದೇಶದ (Uttar Pradesh) ರುದ್ರಪುರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) “ಗರ್ಮಿ ಹೈ ಕಾಫಿ…” (ಸಿಕ್ಕಾಪಟ್ಟೆ ಬಿಸಿಲು ಇದೆ) ಎನ್ನುತ್ತಾ ಸ್ವಲ್ಪ ನೀರು ಕುಡಿದು ಉಳಿದ ನೀರನ್ನು ತಲೆಯ ಮೇಲೆ ನೀರು ಸುರಿದುಕೊಂಡು ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದಾರೆ. ಸದ್ಯ ರಾಹುಲ್ ಗಾಂಧಿಯ ಈ ಹೊಸ ವರ್ತನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Madhyapradesh: ಹೆಂಡತಿ ಜೊತೆ ಜಗಳ; ಕೋಪದಲ್ಲಿ ಕುಟುಂಬದ 8 ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ವ್ಯಕ್ತಿ

ಭಾಷಣದ ವೇಳೆ ರಾಗಾ ಅವರು ನೀರು ಕುಡಿಯಲು ಕೈಯಲ್ಲಿ ಮೊದಲು ಬಾಟ್ಲಿ (Water Bottle) ಹಿಡಿದುಕೊಂಡರು. ಆಗ ವೇದಿಕೆ ಮುಂಭಾಗ ನೆರೆದಿದ್ದ ಜನ ಜೋರಾಗಿ ಕೂಗಲಾರಂಭಿಸಿದರು. ಆ ವೇಳೆ ಇವತ್ತು ಬಿಸಿಲು ಜಾಸ್ತಿ ಎಂದವರೇ ರಾಗಾ ನೇರವಾಗಿ ತಲೆಗೆ ತಣ್ಣೀರು ಸುರಿದುಕೊಂಡರು. ಕಾಂಗ್ರೆಸ್‌ ನಾಯಕನ ನಡೆಗೆ ವೇದಿಕೆಯಲ್ಲಿದ್ದ ಹಲವರು ಅಚ್ಚರಿ ವ್ಯಕ್ತಪಡಿಸಿದರು

ರಾಹುಲ್ ಗಾಂಧಿ ಈ ವರ್ತನೆ ಜನರ ಗಮನ ಸೆಳೆದಿದೆ. ಅಂದಹಾಗೆ ರಾಹುಲ್ ಗಾಂಧಿಯವರ ಈ ವಿಡಿಯೊವನ್ನು ಹಂಚಿಕೊಂಡ ಕಾಂಗ್ರೆಸ್ (Congress) ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ, “ ಕುರ್ಚಿಯ ಬೆಲ್ಟ್ ಗಟ್ಟಿಯಾಗಿ ಕಟ್ಟಿಕೊಳ್ಳಿ ತಾಪಮಾನ ಏರುತ್ತಿದೆ, ಇಂಡಿಯಾ ಬಣದ ಸರ್ಕಾರ ಬರುತ್ತಿದೆ ಎಂದು ಬರೆದುಕೊಂಡಿದೆ. ಇದಕ್ಕೆ ಹಲವರು ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.