Madhyapradesh: ಹೆಂಡತಿ ಜೊತೆ ಜಗಳ; ಕೋಪದಲ್ಲಿ ಕುಟುಂಬದ 8 ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ವ್ಯಕ್ತಿ

Share the Article

Madhyapradesh: ವ್ಯಕ್ತಿಯೋರ್ವ ತನ್ನ ಹೆಂಡತಿ ಜೊತೆ ಜಗಳಮಾಡಿ ಕೋಪದಲ್ಲಿ ಮನೆಯ 8 ಮಂದಿಯನ್ನು ಕೊಡಲಿಯಿಮದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ನಂತರ ವ್ಯಕ್ತಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: HSRP Number Plate: ಕೆಲವೇ ದಿನಗಳು ಬಾಕಿ; ‘HSRP’ ನಂಬ‌ರ್ ಪ್ಲೇಟ್ ಹಾಕಿಸದಿದ್ರೆ ದಂಡ ಫಿಕ್ಸ್ ! ವಾಹನ ಸವಾರರೇ ಎಚ್ಚರ!

ಈ ಘಟನೆ ನಡೆದಿರುವುದು ಬೋದಲ್‌ ಕಚಾರ್‌ ಗ್ರಾಮದಲ್ಲಿ. ಪೊಲೀಸರು ಹೇಳಿರುವ ಪ್ರಕಾರ, ಆರೋಪಿ ಮಾನಸಿಕ ಅಸ್ವಸ್ಥ ಎಂದು ವರದಿಯಾಗಿದೆ.

ಪೊಲೀಸರು ಕೊಡಲಿಯನ್ನು ಘಟನಾ ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಈ ಕೃತ್ಯದ ಹಿಂದಿನ ಉದ್ದೇಶವೇನೆಂದು ಇನ್ನೂ ತಿಳಿದು ಬಂದಿದೆ. ಆರೋಪಿ ಇತ್ತೀಚೆಗೆ ಮದುವೆಯಾಗಿದ್ದ ಎನ್ನಲಾಗಿದೆ. ಈತನ ದಾಳಿಯಿಂದ ಒಂದು ಮಗು ಪಾರಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Karnataka Education: ಪೋಷಕರೇ ಇತ್ತ ಗಮನಿಸಿ; ಈ ಬಾರಿ 1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ಇಲ್ಲ

ಆರೋಪಿ ತನ್ನ ಪೋಷಕರು, ಹೆಂಡತಿ, ಮಗು ಮತ್ತು ಸಹೋದರ ಸೇರಿ ಎಂಟು ಜನರ ಭೀಕರ ಹತ್ಯೆ ಮಾಡಿದ್ದಾನೆ. ಇಡೀ ಗ್ರಾಮವನ್ನು ಪೊಲೀಷರು ಸೀಲ್‌ ಮಾಡಿದ್ದಾರೆ. ಮನೆಯಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

Leave A Reply