Chanakya Niti: ಇನ್ನೊಬ್ಬರ ಮನೆಗೆ ಕರೆಯದೇ ಹೋದರೆ ಏನಾಗುತ್ತೆ ಗೊತ್ತಾ!

Chanakya Niti: ಅತಿಥಿ ದೇವೋ ಭವ ಅನ್ನೋ ಗಾದೆ ಕೇಳಿರಬಹುದು. ಕೆಲವೊಮ್ಮೆ ಅತಿಥಿಗಳು ಮನೆಗೆ ಬರುವುದಕ್ಕೆ ಕಾರಣ ಇರಲೂ ಬಹುದು ಅಥವಾ ಇಲ್ಲದೆಯೂ ಇರಬಹುದು. ಹಾಗಂತ ಯಾವುದೇ ಮನೆಗೆ ಆಹ್ವಾನ ನೀಡಿದಾಗ ಮಾತ್ರ ನಾವು ಅಂತವರ ಮನೆಗೆ ಹೋಗಬೇಕು. ನೀವು ವಾಸಿಸುವ ಸ್ಥಳದಲ್ಲಿ ನೀವು ಗೌರವವನ್ನು ಪಡೆಯದೇ ಅಗೌರವವನ್ನು ಪಡೆದುಕೊಳ್ಳುತ್ತಿದ್ದರೆ, ಅಂತಹ ಸ್ಥಳದಲ್ಲಿ ವಾಸಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಮುಖ್ಯವಾಗಿ ಆಹ್ವಾನವಿಲ್ಲದೆ ಅಥವಾ ಕರೆಯದೇ ಇನ್ನೊಬ್ಬರ ಮನೆಗೆ ಹೋಗುವುದರಿಂದ ಕೆಲವು ಸಮಸ್ಯೆಗಳು ಎದುರಾಗುತ್ತದೆ ಎಂಬುದನ್ನು ಚಾಣಕ್ಯರು ಹೇಳಿದ್ದಾರೆ.

ಇದನ್ನೂ ಓದಿ: Pangala Case: ನಿಜವಾಯ್ತು ದೈವದ ಕಾರ್ಣಿಕ ನುಡಿ; ಶರತ್‌ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕೋರ್ಟ್‌ಗೆ ಶರಣು

ಹೌದು, ಚಾಣಕ್ಯರ (Chanakya Niti) ಪ್ರಕಾರ ಅತಿಥಿಗಳು ಇದ್ದಕ್ಕಿದ್ದಂತೆ ಮನೆಗೆ ಬರುವುದರಿಂದ ಮೂರು ನಷ್ಟಗಳು ಉಂಟಾಗುತ್ತದೆ.

ಇದನ್ನೂ ಓದಿ: Putturu: ಕೊಳವೆ ಬಾವಿ ಸ್ವಚ್ಛ ಮಾಡುತ್ತಿದ್ದ ಬೋರ್‌ವೆಲ್‌ ಲಾರಿ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ

ಚಾಣಕ್ಯರ ಪ್ರಕಾರ, ಯಾವುದೇ ಕಾರಣವಿಲ್ಲದೆ ಯಾರೊಬ್ಬರ ಮನೆಗೆ ಹೋಗುವುದು ನಿಮ್ಮನ್ನು ಅವಮಾನಕ್ಕೆ ಗುರಿಯಾಗಿಸಬಹುದು. ಹಾಗಾಗಿ, ಆಹ್ವಾನವಿಲ್ಲದೆ ನಾವು ಎಲ್ಲಿಗೂ ಹೋಗಬಾರದು. ಯಾವುದಾದರೂ ಆಹ್ವಾನದ ಮೇರೆಗೆ ಅಥವಾ ಕೆಲಸದ ಮೇಲೆ ಮಾತ್ರ ಒಬ್ಬರ ಮನೆಗೆ ಹೋಗಬೇಕು. ವಿನಃ ಕಾರಣ ಇಲ್ಲದೇ ಹೋಗಬಾರದು.

ಯಾರದೇ ಆಮಂತ್ರಣ ಅಥವಾ ಕಾರಣವಿಲ್ಲದೆ ಬೇರೊಬ್ಬರ ಮನೆಯಲ್ಲಿ ಉಳಿದುಕೊಂಡರೆ, ಅವನು ಸಂತೋಷವಾಗಿರುವುದಿಲ್ಲ ಮತ್ತು ವಾಸಿಸುವ ಜನರು ಸಹ ಸಂತೋಷವಾಗಿರುವುದಿಲ್ಲ.

ಯಾವುದೇ ಕಾರಣ ಅಥವಾ ಆಹ್ವಾನವಿಲ್ಲದೆ ಹೋಗುವ ವ್ಯಕ್ತಿಯ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಇದರಿಂದ ಆ ವ್ಯಕ್ತಿಯು ಮಾನಸಿಕ ಗೊಂದಲಗಳನ್ನು ಎದುರಿಸುವನು. ವ್ಯಕ್ತಿಯ ಆತ್ಮವಿಶ್ವಾಸ ಕುಗ್ಗಿಹೋಗಬಹುದು.

ಕಾರಣವಿಲ್ಲದೆ ಇತರರ ಮನೆಗೆ ಭೇಟಿ ನೀಡುವುದರಿಂದ ವ್ಯಕ್ತಿಯ ಸ್ವಾತಂತ್ರ್ಯ ಕಳೆದುಹೋಗುತ್ತದೆ. ಈ ರೀತಿಯಾಗಿ ನಾವು ಇತರರ ಮನೆಗೆ ಹೋಗುವುದರಿಂದ ಅಲ್ಲಿ ನಮ್ಮ ಮಾತಿಗೆ ಯಾವುದೇ ರೀತಿಯಾದ ಗೌರವ ಎನ್ನುವಂತಹದ್ದು ಇರುವುದಿಲ್ಲ. ಅಲ್ಲಿ ನಾವು ಅವರು ಹೇಳಿದಂತೆ ನಡೆದುಕೊಳ್ಳಬೇಕಾಗುತ್ತದೆ.

Leave A Reply

Your email address will not be published.