Bengaluru Deep Fake: 9 ನೇ ತರಗತಿ ವಿದ್ಯಾರ್ಥಿನಿಯ ಅಶ್ಲೀಲ ಚಿತ್ರ ಹರಿಬಿಟ್ಟ ವಿದ್ಯಾರ್ಥಿ ಸೇರಿ ಮೂವರ ಸೆರೆ
Bengaluru Deep Fake: ನಗರದ ಪ್ರತಿಷ್ಠಿತ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯ ಫೋಟೊ ತಿರುಚಿ ಅಶ್ಲೀಲವಾಗಿ ಸೃಷ್ಟಿಸಿ ಇನ್ಸ್ ಟಾಗ್ರಾಂನಲ್ಲಿ ಶೇರ್ ಮಾಡಿದ್ದ ಪಿಯುಸಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಇಬ್ಬರು ಅಪ್ರಾಪ್ತರನ್ನು ಈಶಾನ್ಯ ಫೋಟೊ ವಿಭಾಗದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Udupi: ಉಡುಪಿಯ ಗ್ಯಾಂಗ್‌ವಾರ್ ಪ್ರಕರಣ; ಗಾಯಾಳುವಿಗೆ ಚಿಕಿತ್ಸೆ ನೀಡಿದ ವೈದ್ಯರ ಮೇಲೆ ಬಿತ್ತು ಕೇಸು
ಶಾಲೆಯ ವಿದ್ಯಾರ್ಥಿಗಳೂ ಸೇರಿದಂತೆ 50 ಮಂದಿಯಿರುವ ಇನ್‌ಸ್ಟಾಗ್ರಾಂ ಗ್ರೂಪ್ ನಲ್ಲಿ 15 ವರ್ಷದ ವಿದ್ಯಾರ್ಥಿನಿಯ ಫೋಟೊವನ್ನು ಮೇ 24ರಂದು ಶೇರ್ ಮಾಡಲಾಗಿತ್ತು. ಸಂತ್ರಸ್ತೆ ತಂದೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: SIT: ಪ್ರಜ್ವಲ್ ಅರೆಸ್ಟ್ ಆಗುತ್ತಿದ್ದಂತೆ SIT ಮೊದಲು ಮಾಡುವುದೇ ಧ್ವನಿ ಪರೀಕ್ಷೆ !!
ಕಾರಣ ಏನು?
ಸಂತ್ರಸ್ತೆ ಹಾಗೂ ಓರ್ವ ಅಪ್ರಾಪ್ತ ಆತ್ಮೀಯವಾಗಿದ್ದರು. ಇತ್ತೀಚೆಗೆ ಸಂತ್ರಸ್ತೆ ಬೇರೊಬ್ಬ ಸಹಪಾಠಿ ಜತೆ ಅನ್ನೋನ್ಯವಾಗಿದ್ದಳು. ಇದರಿಂದ ಸಿಟ್ಟಿಗೆದ್ದ ಸಹಪಾಠಿ ತನ್ನ ಸ್ನೇಹಿತನ ಜತೆಗೂಡಿ ಪರಿಚಯದ ಪಿಯುಸಿ ವಿದ್ಯಾರ್ಥಿ ಸಹಕಾರ ಪಡೆದು ಸಂತ್ರಸ್ತೆಯ ಪೋಟೋವನ್ನು ಮಾರ್ಫ್ ಮಾಡಿ ಇನ್ ಸ್ಟಾಗ್ರಾಂ ಗ್ರೂಪ್ ಗೆ ಅಪ್ ಲೋಡ್ ಮಾಡಿದ್ದ ಎಂಬ ವಿಚಾರ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.