7th Pay Commission: ಜೂನ್‌ನಲ್ಲಿ 7ನೇ ವೇತನ ಆಯೋಗ ಜಾರಿ ಸಾಧ್ಯತೆ !!

7th Pay Commission: ದೇಶಾದ್ಯಂತ ಲೋಕಸಭಾ ಚುನಾವಣಾ(Parliament Election) ಮುಗಿಯುತ್ತಿದ್ದಂತೆ, ನೀತಿ ಸಂಹಿತೆ ಸಡಿಲವಾಗುತ್ತಿದ್ದಂತೆ ರಾಜ್ಯದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಎದುರಾಗಲಿದೆ. ಏಕೆಂದರೆ ಸಿಎಂ ಸಿದ್ಧರಾಮಯ್ಯ 7ನೇ ವೇತನ ಆಯೋಗ(7th Pay Commission)ಜಾರಿಗೆ ಒಲವು ತೋರಿದ್ದು, ಇದು ಜೂನ್ ನಲ್ಲಿ ಜಾರಿಯಾಗುವ ಸಾಧ್ಯತೆಗಳು ಹೆಚ್ಚಿದೆ.

 

ಇದನ್ನೂ ಓದಿ: Baba Vanga Predictions: ಪ್ರಪಂಚದ ಅಂತ್ಯ ಯಾವಾಗ? ಬಾಬಾ ವಂಗಾ ಭವಿಷ್ಯ!

ಹೌದು, ಸರ್ಕಾರಿ ನೌಕಕರು ಲೋಕಸಭಾ ಚುನಾವಣೆಗೂ ಮೊದಲೇ 7 ನೇ ವೇತನ ಆಯೋಗದ ಜಾರಿ ಕುರಿತು ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದು, ಸರ್ಕಾರದ ವಿರುದ್ಧ ಹಲವಾರು ಭಾರಿ ಹೋರಾಟವನ್ನೂ ಕೂಡ ನಡೆಸಿದ್ದರು. ಅಂತೆಯೇ ಚುನಾವಣೆ ಆರಂಭವಾಗುವ ಸಮಯದಲ್ಲಿ ಸಲ್ಲಿಕೆಯಾಗಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಸ್ವೀಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರು, ಕೂಲಂಕಶವಾಗಿ ಅಧ್ಯಯನ ಮಾಡಿ ಸಲಹೆ ನೀಡಲು ಹಣಕಾಸು ಇಲಾಖೆಗೆ ಸೂಚಿಸಿದ್ದರು. ಆ ಬಳಿಕ ನೀತಿ ಸಂಹಿತೆ ಜಾರಿಯಾಯಿತು. ಆದರೀಗ ಜೂನ್ 4 ರಂದು ಫಲಿತಾಂಶ ಹೊರಬರಲಿದೆ. ಜೂನ್ 2 ರಂದು ಚುಣಾವಣಾ ನೀತಿ ಸಂಹಿತೆ ಮುಕ್ತಾಯಗೊಳಲಿದ್ದು, 7 ನೇ ವೇತನ ಆಯೋಗ ಜಾರಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ.

ಇದನ್ನೂ ಓದಿ: Camphor for White Hair: ಕೇವಲ ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿದ್ರೆ ಸಾಕು! ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತೆ!

ಇನ್ನೂ ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್‌ ಷಡಾಕ್ಷರಿ ಅವರು ಮಂಗಳವಾರ ಹಂಪನಕಟ್ಟೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ನವೀಕರಣಗೊಂಡ ಸಭಾಂಗಣ ಹಾಗೂ ಅಧ್ಯಕ್ಷರ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಏಳನೇ ವೇತನ ಆಯೋಗದ ಶಿಫಾರಸುಗಳು ಜೂನ್‌ ನಲ್ಲಿ ಜಾರಿಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.

7 ನೇ ವೇತನ ಆಯೋಗ ಜಾರಿಯಿಂದ ಎಷ್ಟು ಹೆಚ್ಚಾಗುತ್ತೆ ಸಂಬಳ ?!

7ನೇ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ಮೂಲ ವೇತನದಲ್ಲಿ 27.5% ಹೆಚ್ಚಳ ಮಾಡುವುದರ ಜೊತೆಗೆ ಅವರ ಕನಿಷ್ಠ ವೇತನವನ್ನು ತಿಂಗಳಿಗೆ 17,000 ರೂ.ನಿಂದ 27,000 ರೂ.ಗೆ ಹೆಚ್ಚಿಸುವಂತೆ ಆಯೋಗವು ಶಿಫಾರಸು ಮಾಡಿದೆ. ಒಟ್ಟಿನಲ್ಲಿ ಪ್ರಸ್ತುತ 1:8.86 ಕನಿಷ್ಠ ಮತ್ತು ಗರಿಷ್ಠ ವೇತನಗಳ ಅನುಪಾತವನ್ನು 1:8.93ಕ್ಕೆ ಹೆಚ್ಚಿಸಲಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಈ ಶಿಫಾರಸು ಅನ್ವಯವಾಗಲಿದ್ದು, 2022ರ ಜೂನ್‌ನಿಂದ ಪೂರ್ವಾನ್ವಯವಾಗುವಂತೆ ಜಾರಿ ಮಾಡುವಂತೆ ಶಿಫಾರಸು ಮಾಡಿದೆ. ಬೆನ್ನಲ್ಲೇ ಸರ್ಕಾರವು ಮೂಲ ವೇತನದಲ್ಲಿ 27.5% ಹೆಚ್ಚಳ ಘೋಷಿಸಿದೆ.

ಅಂದಹಾಗೆ ಈಗಾಗಲೇ ಮಧ್ಯಂತರವಾಗಿ ಶೇ.17ರಷ್ಟು ಮೂಲ ವೇತನ ಹೆಚ್ಚಳ ಮಾಡಿದ್ದು, ಅಂತಿಮವಾಗಿ ಇನ್ನೂ ಶೇ.8 ರಿಂದ ಶೇ.8.5 ರಷ್ಟು ವೇತನ ಹೆಚ್ಚಳ ನಿರೀಕ್ಷಿಸಲಾಗಿದೆ. ಒಟ್ಟಾರೆ ಏರಿಕೆ ಮೂಲವೇತನದ ಶೇ.25 ರಿಂದ ಶೇ.25.5 ತಲುಪುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.

ಇದರ ಜೊತೆಗೆ ಬೇಸಿಕ್ ಸ್ಯಾಲರಿ 17,000 ರೂ.ನಿಂದ 27,000 ರೂಪಾಯಿಗೆ ಏರಿಕೆಯಾಗಲಿದೆ. ಹಳೇಯ ಬೇಸಿಕ್ ಸ್ಯಾಲರಿ 20900 ಆದರೆ ಹೊಸ ವರದಿ ಪ್ರಕಾರ 33300ಕ್ಕೆ ಏರಿಕೆಯಾಗಲಿದೆ. 40,900 ಇದ್ದರೆ ಅದು 65,950ಕ್ಕೆ ಏರಿಕೆಯಾಗುತ್ತದೆ. ಬೇಸಿಕ್ 50,150 ಇದ್ದರೆ ವೇತನ ಆಯೋಗದ ವರದಿ ಪ್ರಕಾರ ಅದು 79,900 ಬೇಸಿಕ್‌ಗೆ ಬರಲಿದೆ. ಇದರ ಜೊತೆಗೆ ಡಿಎ, ಐಆರ್ ಎಲ್ಲವೂ ಸೇರಿಕೊಂಡು ಸಂಬಳ ಮತ್ತಷ್ಟು ಹೆಚ್ಚಾಗಲಿದೆ. ಹಿರಿಯ ಶ್ರೇಣಿ ನೌಕರರ ಆರಂಭಿಕ ಕನಿಷ್ಠ ವೇತನ ಈಗ 1,04,600 ರೂಪಾಯಿಯಿದ್ದು, ಅದನ್ನು 1,67,200 ರೂಪಾಯಿಗೆ ಪರಿಷ್ಕರಿಸುವಂತೆ ಶಿಫಾರಸು ಮಾಡಲಾಗಿದೆ.

2 Comments
  1. Right now it seem like Expression Engvine iis the top blogging platform out there right now.
    (from what I’ve read) Is hat what you are uszing on your
    blog? https://66bb4c96E165c.site123.me/

  2. It’s very easy to find out any topic on web aas cmpared
    to textbooks, as I found this article at this web site. https://ayushehclinic.online/user/profile/552

Leave A Reply

Your email address will not be published.