Bank Holiday : ಜೂನ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 10 ದಿನ ರಜೆ !!

Bank Holiday: ಜೂನ್ ತಿಂಗಳಲ್ಲಿ ವಿವಿಧ ಧಾರ್ಮಿಕ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಬ್ಯಾಂಕ್ ಗಳಿಗೆ ಒಟ್ಟು 10 ದಿನ ರಜೆ(Bank Holiday) ಇರಲಿದೆ. ರಜೆಯ ಕುರಿತು RBI ಪಟ್ಟಿ ಬಿಡುಗಡೆ ಮಾಡಿದೆ. ಹೀಗಾಗಿ ನೀವು ಯಾವುದಾದರಾ ಪ್ರಮುಖ ಬ್ಯಾಂಕ್‌ ಕೆಲಸಗಳಿದ್ದರೆ, ಬ್ಯಾಂಕ್‌ಗೆ ತೆರಳುವ ಮೊದಲು ಬ್ಯಾಂಕ್‌ ರಜಾ ಪಟ್ಟಿಯನ್ನು ಪರಿಶೀಲಿಸುವುದು ಉತ್ತಮ.

ಇದನ್ನೂ ಓದಿ: Anchor Anushree: ಮದುವೆಗೂ ಮುನ್ನ ಸ್ಟುಡಿಯೋದಲ್ಲಿ ಅವರನ್ನು ಮುದ್ದಾಡಿ, ಲಿಪ್ ಕಿಸ್ ಕೊಟ್ಟು ತಗಲಾಕೊಂಡ ಆ್ಯಂಕರ್ ಅನುಶ್ರೀ !!

ಜೂನ್ ತಿಂಗಳ ಬ್ಯಾಂಕ್ ರಜೆಗಳ ಸಂಪೂರ್ಣ ಪಟ್ಟಿ

* ಜೂನ್ 02 : ಭಾನುವಾರ

* ಜೂನ್ 08 : ಎರಡನೇ ಶನಿವಾರ

* ಜೂನ್ 09 : ಭಾನುವಾರ

* ಜೂನ್ 15 : ರಾಜ ಸಂಕ್ರಾಂತಿ (ಮಿಜೋರಾಂ ಮತ್ತು ಒರಿಸ್ಸಾ ರಾಜ್ಯಗಳಿಗೆ ರಜೆ)

* ಜೂನ್ 16: ಭಾನುವಾರ

* ಜೂನ್ 17 : ಬಕ್ರಿ ಈದ್ (ದೇಶದ ಬಹುತೇಕ ರಾಜ್ಯಗಳಲ್ಲಿ ರಜೆ)

* ಜೂನ್ 18: ಬಕ್ರಿ ಈದ್ (ಜಮ್ಮುವಿನ ಶ್ರೀನಗರದಲ್ಲಿ ಬ್ಯಾಂಕ್ ರಜೆ)

* ಜೂನ್ 22: ನಾಲ್ಕನೇ ಶನಿವಾರ

* ಜೂನ್ 23: ಭಾನುವಾರ

* ಜೂನ್ 30: ಭಾನುವಾರ

ಇದನ್ನೂ ಓದಿ: Aadhar Card Update: ನಿಮ್ಮಲ್ಲಿರುವ ಹಳೆಯ ಆಧಾರ್‌ ಜೂನ್‌ 14 ರ ನಂತರ ಅಮಾನ್ಯಗೊಳ್ಳಲಿದೆಯೇ? UIDAI ಹೇಳಿಕೆ ಇಲ್ಲಿದೆ

ಅಂದಹಾಗೆ ಎಲ್ಲಾ ಬ್ಯಾಂಕ್(Bank) ರಜಾದಿನಗಳು ಮತ್ತು ವಾರಾಂತ್ಯಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ತುರ್ತು ವಹಿವಾಟುಗಳಿಗಾಗಿ ಬ್ಯಾಂಕ್‌ಗಳ ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಅಥವಾ ಎಟಿಎಂ(ATM)ಗಳನ್ನು ಬಳಸಿ ಗ್ರಾಹಕರು ತಮ್ಮ ಬ್ಯಾಂಕಿಂಗ್ ಕಾರ್ಯಗಳನ್ನು ಅನುಕೂಲಕರವಾಗಿ ನಿರ್ವಹಿಸಬಹುದು.

Leave A Reply

Your email address will not be published.