Chikkamagaluru: ಸ್ನಾನ ಮಾಡಿ, ಬಟ್ಟೆ ಒಣಹಾಕಲೆಂದು ಹಿಂಬದಿ ಬಾಗಿಲು ತೆರೆಯುತ್ತಿದ್ದಂತೆ ಬುಸ್ ಎನ್ನುತ್ತಾ ಮನೆಗೆ ನುಗ್ಗಿದ 12 ಅಡಿಯ ಕಾಳಿಂಗ ಸರ್ಪ
Chikkamagaluru: ಶುಕ್ರವಾರ ಸಂಜೆ 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಅಡುಗೆ ಮನೆಗೆ ಎಂಟ್ರಿ ನೀಡಿದ್ದು, ಅನಂತರ ಅಭಯಾರಣ್ಯಕ್ಕೆ ಇದನ್ನು ಬಿಡಲಾಗಿದೆ. ಈ ದಿಡೀರ್ ಘಟನೆ ನಡೆದಿದ್ದು, ಚಿಕ್ಕಮಗಳೂರು ಜಿಲ್ಲೆ ಎನ್‌ಆರ್ ಪುರ ತಾಲೂಕಿನ ಶೆಟ್ಟಿಕೊಪ್ಪದಲ್ಲಿ ನಡೆದಿದೆ.
ಡಿ.ಮಂಜುನಾಥಗೌಡ ಎಂಬುವವರು ಸ್ನಾನ ಮಾಡಿ ಬಟ್ಟೆ ಒಣ ಹಾಕಲೆಂದು ಹಿಂಬದಿಯ ಬಾಗಿಲು ತೆರೆಯುತ್ತಿದ್ದಂತೆ ದಿಢೀರನೆ ಕಾಳಿಂಗ ಸರ್ಪ ಮನೆಯೊಳಗೆ ನುಗ್ಗಿದೆ. ಅಲ್ಲದೆ ಅಡುಗೆ ಮನೆಯೊಳಗೆ ಸೇರಿ ಕುಳಿತುಕೊಂಡು ಬಿಟ್ಟಿದೆ. ಮನೆ ಮಂದಿ ಗಾಬರಿಗೊಂಡಿದ್ದು, ಕೂಡಲೇ ಉರಗ ಪ್ರೇಮಿ ಪಿ.ಜಿ.ಹರೀಂದ್ರ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಅನಂತರ ಹರೀಂದ್ರ ಅವರು ಕಾಳಿಂಗ ಸರ್ಪ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ಸಲಹೆ ಪಡೆದು ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಇದನ್ನೂ ಓದಿ: Beauty Tips: ಚಿನ್ನದಂತ ತ್ವಚೆ ಪಡೆಯಲು ಮುಖಕ್ಕೆ ಬಾದಾಮಿಯನ್ನು ಹೀಗೆ ಹಚ್ಚಿದರೆ ಸಾಕು!